ಪಕ್ಷ ತೊರೆದು, ಕುಮಾರಸ್ವಾಮಿಗೆ ಮೋಸ ಮಾಡಲ್ಲ; ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ

ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷ ತೊರೆಯುವುದಿಲ್ಲ. ಅವಧಿ ಮುಗಿಯುವವರೆಗೂ ನಾನು ಜೆಡಿಎಸ್​ ಶಾಸಕನಾಗಿಯೇ ಇರಲಿದ್ದೇನೆ. ಮುಂದಿನ ದಿನಗಳಲ್ಲಿ ಎನಾದರೂ ಆಗಬಹುದು. ಸದ್ಯಕ್ಕಂತೂ ಯಾವುದೇ ಬಿಜೆಪಿ ಸೇರುವಂತೆ ಯಾರು ನಮ್ಮನ್ನು ಸಂಪರ್ಕಿಸಿಲ್ಲ

Seema.R | news18-kannada
Updated:December 17, 2019, 11:17 AM IST
ಪಕ್ಷ ತೊರೆದು, ಕುಮಾರಸ್ವಾಮಿಗೆ ಮೋಸ ಮಾಡಲ್ಲ; ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ
ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ
  • Share this:
ಮಂಡ್ಯ (ಡಿ.17): ಮಂಡ್ಯ ಜನ ವಿಶ್ವಾಸದಿಂದ ಅಧಿಕಾರ ಕೊಟ್ಟಿದ್ದಾರೆ. ಕುಮಾರಸ್ವಾಮಿಗೆ ಮೋಸ ಮಾಡಿ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಪಷ್ಟನೆ ನೀಡಿದ್ದಾರೆ. 

ಕೆಆರ್​ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಜಿಲ್ಲೆಯ ಅನೇಕ ಜೆಡಿಎಸ್​ ನಾಯಕರು ಪಕ್ಷ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ನಾರಾಯಣಗೌಡ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದ ವಿಜಯೇಂದ್ರ ಅವರೇ ರವೀಂದ್ರ ಶ್ರೀಕಂಠಯ್ಯ ಅವರಿಗೆ ಗಾಳಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು.

ಈ ಕುರಿತು ಮಾತನಾಡಿದ  ಶ್ರೀರಂಗಪಟ್ಟಣ ಶಾಸಕ, ನಮ್ಮ ಕುಟುಂಬದಲ್ಲಿ ಮೂವರು ಶಾಸಕರಾಗಿದ್ದೇವೆ. ಜೆಡಿಎಸ್​ ಪಕ್ಷದಿಂದ ನಾವು ಶಾಸಕರಾಗಿದ್ದೇವೆ. ಜೆಡಿಎಸ್​ ಶಾಸಕರನ್ನು ಸೆಳೆಯುವ ಮೊದಲು ಕ್ಷೇತ್ರದಲ್ಲಿ ಒಂದು ಸ್ಥಾನಗೆದ್ದಿರುವ ಅವರು, ಜಿಲ್ಲೆಯನ್ನು ಮೊದಲು ಅಭಿವೃದ್ಧಿ ಪಡಿಸಲಿ ಎಂದು ಇದೇ ವೇಳೆ ಸವಾಲ್​ ಹಾಕಿದರು.

ಇದನ್ನು ಓದಿ: ಮೇಲ್ಮನೆ ಚುನಾವಣೆ: ಸಿ.ಪಿ. ಯೋಗೇಶ್ವರ್​ಗೆ ಬಿಜೆಪಿ ಟಿಕೆಟ್?

ಸದ್ಯಕ್ಕೆ ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷ ತೊರೆಯುವುದಿಲ್ಲ. ಅವಧಿ ಮುಗಿಯುವವರೆಗೂ ನಾನು ಜೆಡಿಎಸ್​ ಶಾಸಕನಾಗಿಯೇ ಇರಲಿದ್ದೇನೆ. ಮುಂದಿನ ದಿನಗಳಲ್ಲಿ ಎನಾದರೂ ಆಗಬಹುದು. ಸದ್ಯಕ್ಕಂತೂ ಯಾವುದೇ ಬಿಜೆಪಿ ಸೇರುವಂತೆ ಯಾರು ನಮ್ಮನ್ನು ಸಂಪರ್ಕಿಸಿಲ್ಲ ಎಂದರು.
Published by: Seema R
First published: December 17, 2019, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading