ಮಂಡ್ಯ (ಆ. 18): ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಂಸದೆ ಸುಮಲತಾ ಅಂಬರೀಶ್ ಧ್ವನಿ ಎತ್ತಿದ್ದ ಬಳಿಕ ಇಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತಿದೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಮತ್ತು ಶ್ರೀ ರಂಗಪಟ್ಟಣ ಶಾಸಕ ರವೀಂದ್ರ ಶ್ರೀ ಕಂಠಯ್ಯ ಆರೋಪಿಸಿದ್ದಾರೆ. ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲಲಿ ನಡೆದ ದಿಶಾ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದ ದಳಪತಿಗಳು ಈ ಸಂಬಂಧ ಇಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪದ್ಮಜಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆಯಿತು. ಅಕ್ರಮದ ಹೆಸರಿನಲ್ಲಿ ಸಕ್ರಮವಾಗಿರುವ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ಸಕ್ರಮವಾಗಿ ನಡೆಯುತ್ತಿರುವ ಗಣಿಕಾರಿಯನ್ನು ಯಾಕೆ ನಿಲ್ಲಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದಿಂದ ಅನುಮತಿ ಪಡೆದು ನಡೆಸುತ್ತಿರುವ ಸಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ಈ ಲೀಗಲ್ ಮೈನಿಂಗ್ ಅನ್ನು ನಿಲ್ಲಿಸಲು ನಿಮಗೆ ಅನುಮತಿ ಕೊಟ್ಟವರು ಯಾರು ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ಸಕ್ರಮ ಗಣಿಕಾರಿಕೆ ನಿಲ್ಲಿಸಿದ ಪರಿಣಾ ಅಭಿವೃದ್ಧಿ ಕಾರ್ಯಗಳು ನಿಂತಿವೆ. ರಾಜ್ಯದಲ್ಲಿ ಒಂದು ಕಾನೂನು ಇದ್ದರೆ, ಮಂಡ್ಯದಲ್ಲಿ ಒಂದು ಕಾನೂನು ಇದೆ. ಅಭಿವೃದ್ಧಿ ಕಾರ್ಯಕ್ಕೆ ಸಾಮಾಗ್ರಿಗಳು ಸಿಗುತ್ತಿಲ್ಲ. ಇದರಿಂದ ದುಪ್ಪಟ್ಟು ಹಣ ನೀಡಿ ವಸ್ತು ಖರೀದಿಸುವಂತೆ ಆಗಿದೆ. ಹಳ್ಳಿ ಜನರು ನಮ್ಮನ್ನು ಬೈಯುವಂತೆ ಆಗಿದೆ. 2 ತಿಂಗಳಿನಿಂದ ಲೀಗಲ್ ಮೈನಿಂಗ್ ನಿಲ್ಲಿಸಲಾಗಿದೆ. ಇದರಿಂದ ಯಾವುದೇ ಕಾರ್ಯ ನಡೆಯುತ್ತಿಲ್ಲ ಎಂದು ದಳಪತಿಗಳು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಇದನ್ನು ಓದಿ: ಕೋವಿಡ್ ಆರ್ಥಿಕ ಸಂಕಷ್ಟಕ್ಕೆ ನಲುಗಿದ ಇಡೀ ಕುಟುಂಬವೇ ಏಕಾಏಕಿ ನಾಪತ್ತೆ!
ಈ ವೇಳೆ ಅಧಿಕಾರಿ ಪದ್ಮಜಾ ನಾವು ಯಾವುದೇ ಸಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿಲ್ಲ ಎಂದು ಸಮಾಜಾಯಿಷಿ ನೀಡಲು ಮುಂದಾದರು. ಈ ಸಂಬಂಧ ಪಾಂಡವಪುರ ಎಸಿಗೆ ಶಾಸಕರು ಗಣಿಗಾರಿಕೆ ಸ್ಥಗಿತಗೊಂಡಿರುವ ಬಗ್ಗೆ ಪ್ರಶ್ನಿಸಿದಾಗ. ಎಸಿ ಶಿವಾನಂದ ಮೂರ್ತಿ, ಯಾವುದೇ ಗಣಿಗಾರಿಕೆಗೆ ನಡೆಯುತ್ತಿಲ್ಲ ಎಂದ ಸ್ಪಷ್ಟೀಕರಣ ಕೊಟ್ಟರು.
ಗಣಿ ಅಧಿಕಾರಿಗಳು ಸಕ್ರಮ ಗಣಿಗಾರಿಕೆ ನಿಲ್ಲಿಸಿಲ್ಲ ಎನ್ನುತ್ತಾರೆ. ಆದರೆ, ಜಿಲ್ಲಾ ಉಪ ವಿಭಾಗಧಿಕಾರಿ ಯಾವಿದೇ ಗಣಿಕಾರಿಕೆ ನಡೆಯುತ್ತಿಲ್ಲ ಎನ್ನುತ್ತಾರೆ, ಅಧಿಕಾರಿಗಳ ಮಾತಿನಲ್ಲಿಯೇ ಸಾಕಷ್ಟು ದ್ವಂದ್ವ ಇದೆ. ಈಗಲೇ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಸಮಲತಾಗೂ ತರಾಟೆ
ಇನ್ನು ಸಭೆಯಲ್ಲಿ ಸಂಸದೆ ಸುಮಲತಾ ವಿರುದ್ಧ ಕೂಡ ಹರಿಹಾಯ್ದ ರವೀಂದ್ರ ಶ್ರೀಕಂಠಯ್ಯ, ಮೈಸೂರು ಸಂಸದರು ಮಂಡ್ಯಕ್ಕೆ ಬಂದು ಕೆಲಸ ಮಾಡುತ್ತಾರೆ. ಹೈವೇ ಅಂಡರ್ ಪಾಸ್ ಮಾಡಿಸಿಕೊಡ್ತಾರೆ. ನೀವೇನು ಕೆಲಸ ಮಾಡ್ತಿದ್ದೀರಾ? ಅಕ್ರಮದ ಹೆಸರಲ್ಲಿ ಸುತ್ತಲೂ ಅಕ್ರಮ ಮಾಡುವವರನನು ಇಟ್ಕೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದರು
ಈ ವೇಳೆ ಸಂಸದೆ ಶಾಸಕರ ನಡುವೆ ಅಧಿಕಾರಿಗಳ ಎದುರೇ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಬಂಧವಿಲ್ಲ ಎನ್ನುವಂತೆ ಮೊಬೈಲ್ನಲ್ಲಿ ಬ್ಯುಸಿಯಾದ ಘಟನೆ ಕಂಡು ಬಂತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ