HOME » NEWS » State » RATION CARD FRAUD IN MANDYA RGM SESR

ಸತ್ತವರ ಹೆಸರಿನಲ್ಲಿ ಪಡಿತರ ಅಕ್ಕಿ; ಸರ್ಕಾರಕ್ಕೆ ವಂಚಿಸಿದ ವಿತರಕ

ಸತ್ತವರ ಹೆಸರಿನಲ್ಲಿ ಸರ್ಕಾರ ದಿಂದ ರೇಷನ್ ಪಡೆದು ಪಡಿತರದಾರಿಗೆ ವಿತರಿಸದೆ ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿ ವಂಚಿಸಿರುವ ಬಗ್ಗೆ ಊರಿನ ಗ್ರಾಮಸ್ಥರು ಇದೀಗ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ

news18-kannada
Updated:February 26, 2021, 9:15 PM IST
ಸತ್ತವರ ಹೆಸರಿನಲ್ಲಿ ಪಡಿತರ ಅಕ್ಕಿ; ಸರ್ಕಾರಕ್ಕೆ ವಂಚಿಸಿದ ವಿತರಕ
ಸತ್ತವರ ಹೆಸರಿನಲ್ಲಿ ಸರ್ಕಾರ ದಿಂದ ರೇಷನ್ ಪಡೆದು ಪಡಿತರದಾರಿಗೆ ವಿತರಿಸದೆ ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿ ವಂಚಿಸಿರುವ ಬಗ್ಗೆ ಊರಿನ ಗ್ರಾಮಸ್ಥರು ಇದೀಗ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ
  • Share this:
ಮಂಡ್ಯ (ಫೆ. 26):  ಸಕ್ಕರೆನಾಡಿನಲ್ಲಿ  ಸರ್ಕಾರ ಬಡವರಿಗಾಗಿ ನೀಡುತ್ತಿರುವ  ಪಡಿತರ ಅಕ್ಕಿಯನ್ನು ವಿತರಕ ಬಡವರಿಗೂ ಹಂಚದೆ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ ಸರ್ಕಾರ ದಿಂದ ರೇಷನ್ ಪಡೆದು ಪಡಿತರದಾರಿಗೆ ವಿತರಿಸದೆ ಲಕ್ಷಾಂತರ ರೂ ಮೌಲ್ಯದ ಪಡಿತರ ಅಕ್ಕಿ ವಂಚಿಸಿರುವ ಬಗ್ಗೆ ಊರಿನ ಗ್ರಾಮಸ್ಥರು ಇದೀಗ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಜನರ ದೂರಿನ ಮೇರೆಗೆ ಜಿಲ್ಲಾಡಳಿತ ಅಂಗಡಿಯ ಲೈಸನ್ಸ್ ರದ್ದುಗೊಳಿಸಿ, ವಿತರಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ. ತಾಲೂಕಿನ  ಬಸರಾಳು ಹೋಬಳಿಯಲ್ಲಿರೋ ಹುನುಗನಹಳ್ಳಿ ಗ್ರಾ ಮದಲ್ಲಿ ಪಡಿತರ ಅಕ್ಕಿಯಲ್ಲಿ ವಿತರಕ ಅಕ್ರಮ ಎಸಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿ‌ ಸತ್ತವರ ಹೆಸರಲ್ಲಿ ಸರ್ಕಾರದಿಂದ ಪಡಿತರ ಅಕ್ಕಿಯನ್ನುಪಡೆದು ಕಾರ್ಡ್ ದಾರರಿಗೆ ವಿತರಿಸದೆ ವಂಚನೆ ಮಾಡ್ತಿ  ರೋದಾಗಿ ಊರಿನ ಗ್ರಾಮಸ್ಥರು ದಾಖಲೆ ಸಮೇತ  ಆರೋಪಿಸಿದ್ದಾರೆ‌.

ಕಳೆದ ಮೂರ್ನಾಲ್ಕು ವರ್ಷದಿಂದ ಈ ವಿತರಕ ಗ್ರಾಮದಲ್ಲಿ ಮೃತಪಟ್ಟವರ ಹೆಸರಲ್ಲಿ ಸರ್ಕಾರದಿಂದ ಬರುವ ಅಕ್ಕಿಯನ್ನು ಪೆಡಿದು ಕಾರ್ಡ್ ದಾರರಿಗೆವಿತರಿಸದೆ ಬೇರೆಡೆ ಮಾರಾಟ ಮಾಡಿಕೊಂಡು ಲಕ್ಷಾಂತ ರ ರೂ ವಂಚಿಸಿ ದ್ದಾನೆ. ಅಂದಿನಿಂದ ಸುಮಾರು750 ಕ್ವಿಂಟಾಲ್ ಅಕ್ಕಿಯನ್ನು ಪಡೆದಿ ರೋದಾಗಿ ಆರೋಪಿಸಿ ವಿತರಕನ ವಿರುದ್ದ ಗಂಭೀರ ಆ ರೋಪ ಮಾಡಿ ಈ ಕು ರಿತು ನ್ಯಾಯಬೆಲೆ ಅಂಗಡಿಯ ವಿರುದ್ದ ಕ್ರಮ ಕೈಗೊ ಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.



ಇನ್ನು ಈ ಗ್ರಾಮದ ಪಡಿತರ ಅಂಗಡಿ ಮಾಲೀಕ ಶಿವರಾಜು ಎಂಬಾತ ಈ ರೀತಿಯಾಗಿ ವಂಚನೆ ಮಾ ಡಿದ್ದಾನೆ. ಈತ ಗ್ರಾಮದಲ್ಲಿ ಮರಣ ಹೊಂದಿದ ಜನರ ಹೆಸರಿನಲ್ಲಿ ಮೂರು ವರ್ಷಗಳಿಂದ ಅಕ್ಕಿ ಪಡೆದಿದ್ದಾನೆ. ಪಡೆದ ಅಕ್ಕಿಯನ್ನು ಕಾರ್ಡ್​ದಾರರಿಗೆ ವಿತರಿಸದೆ ತಾನೇ ಮಾರಾಟ ಮಾಡಿಕೊಂಡಿದ್ದಾನೆ. ಈತ ಸುಮಾರು 750 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪಡೆದಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂ ವಂಚನೆ ಮಾಡಿದ್ದಾನೆ. ಇತ್ತೀಚೆಗೆ ಮಹಿಳೆಯೊಬ್ಬರ ಕಾರ್ಡ್ ಪರಿಶೀಲನೆ ವೇಳೆ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ ಜಿಲ್ಲಾಡಳಿತಗ್ರಾಮಸ್ಥರ ದೂರು ಆಧರಿಸಿ ಗ್ರಾಮದ ಆ ಸೊಸೈಟಿಯ ಲೈಸೆನ್ಸ್ ಅಮಾನತ್ತು ಮಾಡಿದೆ.ಅಲ್ದೆ  ಸೊಸೈಟಿಯ ವಿ ತರಕನ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿ ವಿಚಾ ರಣೆ  ಕಾಯ್ದಿರಿಸಿದೆ.

ಒಟ್ಟಾರೆ ಸರ್ಕಾರ ಒಂದ್ಕಡೆ ಅಕ್ರಮ ಬಿಪಿಎಲ್ಕಾರ್ಡ್ ಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದು ಕೊಡ್ತಿರೊ ಅಕ್ಕಿಯಹೊರೆ ಇಳಿಸಲು ಮುಂದಾಗಿದೆ.ಅಂತಹದರಲ್ಲಿ  ಸೊಸೈಟಿ ವಿತರಕರೇ ಈ ರೀತಿ ಸರ್ಕಾರಕ್ಕೆ ವಂಚಿಸಿ ಬಡ ವರ ಅಕ್ಕಿಯನ್ನು ದುರ್ಬಳಕೆ ಮಾಡಿಕೊಳ್ತಿರೋ ಪ್ರಕರಣಗಳು ಬೆಳಕಿಗೆ ಬರ್ತಿವೆ. ಸರ್ಕಾರ ಮೊದಲು ಇಂತಹ ದಂಧೆಕೋರ ವಿತರಕರಿಗೆ ಕಡಿವಾಣ ಹಾಕುವ ಮೂಲಕಬಡವರ ಅಕ್ಕಿಯ ದುರ್ಬಳಕೆ ತಪ್ಪಿಸಬೇಕಿದೆ.
Published by: Seema R
First published: February 26, 2021, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories