Bengaluru: ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ Rapido ಸವಾರ ಅರೆಸ್ಟ್

ರ‍್ಯಾಪಿಡೋ (ಸಾಂದರ್ಭಿಕ ಚಿತ್ರ)

ರ‍್ಯಾಪಿಡೋ (ಸಾಂದರ್ಭಿಕ ಚಿತ್ರ)

Rapido Bike: ಯುವತಿ ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡಿಕೊಂಡಿದ್ದು, ಘಟನೆ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು

  • News18 Kannada
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ Rapido ಬೈಕ್ ಸವಾರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಆಂಧ್ರ ಪ್ರದೇಶ ಮೂಲದ ದೀಪಕ್ ರಾವ್ ಬಂಧಿತ ಆರೋಪಿ. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. Rapido ಸವಾರನೋರ್ವ ಯುವತಿಗೆ (Young Girl) ಲೈಂಗಿಕ ಕಿರುಕುಳ (Sexual Harassment) ನೀಡಿದ ಘಟನೆ ಯಲಹಂಕ ಉಪನಗರ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಬಳಿ ನಡೆದಿತ್ತು. ಸವಾರನ ಕಿರುಕುಳಕ್ಕೆ ಬೇಸತ್ತ ಯುವತಿ ಬೈಕ್​ನಿಂದ ಜಂಪ್ ಮಾಡಿದ್ದರು. ಏಪ್ರಿಲ್ 21ರಂದು ಯುವತಿ ಯಲಹಂಕದಿಂದ ಇಂದಿರಾ ನಗರಕ್ಕೆ (Yelhanka To Indira Nagara) ತೆರಳಲು Rapido ಬುಕ್ ಮಾಡಿದ್ದರು.


ಬೈಕ್ ಹತ್ತಿದ ಬಳಿಕ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಯುವತಿಯ ಮೊಬೈಲ್ ಕಸಿಯಲು ಸಹ ಯತ್ನಿಸಿದ್ದನು. ಲೈಂಗಿಕ ಕಿರುಕುಳ ಸಹಿಸಲಾಗದೇ ಬೈಕ್​ನಿಂದ ಯುವತಿ ಜಿಗಿದಿದ್ದರು.


ಯುವತಿ ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡಿಕೊಂಡಿದ್ದು, ಘಟನೆ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.


ಲೊಕೇಶನ್ ಚೇಂಜ್ ಆಗ್ತಿದ್ದಂತೆ ಯುವತಿ ಅಲರ್ಟ್ 


ಯುವತಿ ಯಲಹಂಕದಿಂದ ಇಂದಿರಾ ನಗರಕ್ಕೆ ಬೈಕ್ ಬುಕ್ ಮಾಡಿದ್ದರು. ಆದರೆ ಆರೋಪಿ ರಾಜಾನುಕುಂಟೆ ಕಡೆಗೆ ಕರೆದುಕೊಂಡು ಹೋಗಿದ್ದಾನೆ. ಲೊಕೇಶನ್ ಚೇಂಜ್ ಆಗ್ತಿದ್ದಂತೆ ಯುವತಿಗೆ ಭಯವಾಗಿತ್ತು. ಇದರಿಂದ ಭಯಗೊಂಡಿದ್ದ ಯುವತಿ‌‌ ಸವಾರನನ್ನು ಪ್ರಶ್ನೆ ಮಾಡಿದ್ದಾರೆ. ಭಯಗೊಂಡ ಯುವತಿ ಬಿಎಮ್ಎಸ್ಐಟಿ ಕಾಲೇಜು ಮುಂಭಾಗ ಜಂಪ್ ಮಾಡಿ ಹಿಂಬದಿ ಬರ್ತಿದ್ದ ಮತ್ತೋರ್ವರ ಬೈಕ್ ಸವಾರನ ಸಹಾಯಕ್ಕೆ ಮನವಿ‌ ಮಾಡಿಕೊಂಡಿದ್ದರು.
ಇದನ್ನೂ ಓದಿ:  Black Magic: ಮೂವರು ಯುವತಿಯರ ವಶೀಕರಣಕ್ಕೆ ಬೆತ್ತಲೆ ಪೂಜೆ; ಫೋಟೋ ಇರಿಸಿ ವಾಮಾಚಾರ


ಯುವತಿ ಬೈಕ್​ನಿಂದ ಜಂಪ್ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಕ್ಲಿಪ್ ನ್ಯೂಸ್​ 18ಗೆ ಲಭ್ಯವಾಗಿದೆ.

First published: