Rape: ಅಪ್ಪನ ಮೇಲಿನ ದ್ವೇಷಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ; ಕಾಫಿನಾಡನ್ನು ಬೆಚ್ಚಿಬೀಳಿಸಿದ ನೀಚನ ಕೃತ್ಯ

ಆರು ತಿಂಗಳ ಹಿಂದೆ ಕೆಲಸದಿಂದ ತೆಗೆದ ಹಿನ್ನಲೆ ದ್ವೇಷ ಸಾಧನೆಗೆ ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಚಿಕ್ಕಮಗಳೂರು (ಮಾ. 5) : ಕೆಲಸದಿಂದ ತೆಗೆದು ಹಾಕಿದ  ಅಪ್ಪನ ಮೇಲಿನ ದ್ವೇಷಕ್ಕೆ ಮಗಳ ಮೇಲೆ ಅತ್ಯಾಚಾರಗೈದು ಕೀಚಕನೊಬ್ಬ ಸೇಡು ತೀರಿಸಿಕೊಂಡಿರುವ ನೀಚ ಕೃತ್ಯ ಕಾಫಿನಾಡಿನಲ್ಲಿ ನಡೆದಿದೆ. ಜಿಲ್ಲೆಯ ಮಲೆನಾಡುತಾಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ಮೇಲೆ ಮಹೇಶ್ ಎಂಬಾತ ಕ್ರೌರ್ಯ ಎಸಗಿದ್ದಾನೆ. ಕೆಲಸ ಬಿಟ್ಟು ಆರು ತಿಂಗಳಾದರೂ ಆತ ಈ ದ್ವೇಷ ಸಾಧಿಸಿದ್ದಾರೆ. ಹಿಟಾಚಿ ಮಾಲೀಕನ ಮಗಳ ಮೇಲೆ ಮೋಹವಿಟ್ಟಿದ್ದ ನೀಚ, ಆಕೆಯನ್ನು ಪುಸಲಾಯಿಸಿ  ಶಾಲೆಯಿಂದ ಕರೆದೊಯ್ದು ಕಾಡಿನಲ್ಲಿ ಅತ್ಯಾಚಾರಗೈದಿದ್ದಾನೆ. ಹೇಯ ಕೃತ್ಯ ಎಸಗುವ ಮುನ್ನ ಬಾಲಕಿಗೆ ಕುಡಿಯುವ ನೀರಿನಲ್ಲಿ ಅಮಲು ಬರುವ ಪುಡಿಯನ್ನ ಬೆರೆಸಿ ಅತ್ಯಾಚಾರಗೈದಿದ್ದಾನೆ ಎನ್ನಲಾಗಿದೆ. ತನ್ನ ಮೇಲೆ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ಪೋಷಕರಿಗೆ ಹೇಳಿಕೊಂಡು ಬಾಲಕಿ ಕಣ್ಣೀರು ಹಾಕಿದ್ದಾಳೆ. ಮಗಳ ಅಸಹಾಯಕತೆಯನ್ನ ಕೇಳಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪೋಷಕರು ದೂರು ದಾಖಲಿಸಿದ ಪರಿಣಾಮ, ಆರೋಪಿ ಮಹೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ತನ್ನ ತಂದೆಯ ಕೈ ಕೆಳಗೆ ಮಹೇಶ್​ ಕೆಲಸ ಮಾಡುತ್ತಿದ್ದ ಹಿನ್ನಲೆ ಆತನ ಪರಿಚಯ ಬಾಲಕಿದೆ ಇದೆ. ಇದೇ ಹಿನ್ನಲೆ ದುಷ್ಕರ್ಮಿ ನಿನ್ನ ತಂದೆಗೆ ಹುಷಾರಿಲ್ಲ. ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ  ಎಂದು ಆಕೆಯನ್ನು ಶಾಲೆಯಿಂದ ಪುಸಲಾಯಿಸಿ ಕರೆದೊಯ್ದಿದ್ದಾನೆ.   8ನೇ ತರಗತಿ ಅಪ್ರಾಪ್ತ ಬಾಲಕಿ ಕೂಡ ಆತನ ಮೋಸ ಅರಿಯದೇ ಹೋಗಿದ್ದಾಳೆ.

ಇದನ್ನು ಓದಿ: ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ಇಲ್ಲ ನೀರು; ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಸುಮಾರು 40 ಕಿ.ಮೀ ಸಾಗಿದ ಬೈಕ್ ಊರಿನ ದಾರಿ ಹಿಡಿಯದ ಕಾರಣ ಬಾಲಕಿ ಕೇಳಿದಾಗ ಒಂದೊಂದು ಊರಿನ ಹೆಸರೇಳಿ  ದೂರದ ಕಾಡಿಗೆ ಕರೆದೊಯ್ದು ನೀಚಕೃತ್ಯ ಎಸಗಿದ್ದಾನೆ. ಬಾಲಕಿಯನ್ನ ಕರೆದುಕೊಂಡು ಹೋಗುವಾಗ ಬಾಲಕಿ ಸುಸ್ತಾಗಿ ನೀರು ಕೇಳಿದಾಗ ಅಮಲು ಬರುವ ಪುಡಿಯನ್ನ ನೀರಲ್ಲಿ ಬೆರೆಸಿ ಕುಡಿಸಿದ್ದಾನೆ. ಜ್ಞಾನ ತಪ್ಪಿದ ಬಾಲಕಿ ಮೇಲೆ ಕಾಮದಾಹ ತೀರಿಸಿಕೊಂಡಿದ್ದಾನೆ. ಬಾಲಕಿ ಎಚ್ಚರವಾದಾಗ ನಿಮ್ಮ ಅಪ್ಪನ ಮೇಲಿನ ದ್ವೇಷಕ್ಕೆ ಹೀಗೆ ಮಾಡಿದೆ ಎಂದಿದ್ದಾನೆ ದುರಳ. ಬಳಿಕ ಬಾಲಕಿಯನ್ನ ತಂದು ಶಾಲೆ ಬಳಿ ಬಿಟ್ಟು ಹೋಗಿದ್ದಾನೆ. ಮಗಳ ಮೇಲೆ ನಡೆದ ದೌರ್ಜನ್ಯ ತಿಳಿದ ಕೂಡಲೇ ಪೋಷಕರು ಪೋಲೀಸರ ಮೊರೆ ಹೋಗಿದ್ದು ಪ್ರಕರಣ ದಾಖಲಿಸಿಕೊಂಡಿರೋ ತನಿಖೆ ಆರಂಭಿಸಿ, ಆರೋಪಿಯನ್ನ ಜೈಲಿಗೆ ಕಳಿಸಿದ್ದಾರೆ.

ಒಟ್ಟಾರೆ, ಸದ್ಯ ಆರೋಪಿಯನ್ನ ಬಂಧಿಸಿರುವ ಪೋಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಬಾಲಕಿ ಮೇಲಿನ ಮೋಹ. ಆಕೆ ಅಪ್ಪನ ಮೇಲಿನ ದ್ವೇಷ ಮುಗ್ಧೆಯ ಬಾಳಲ್ಲಿ ಈತ ಬಿರುಗಾಳಿಯಂತಾಗಿದ್ದಾನೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಆಗುತ್ತಿರುವ ಅತ್ಯಾಚಾರಕ್ಕೆ ಲೆಕ್ಕವೇ ಇಲ್ಲಂದತಾಗಿದೆ. ಈಗಾಗಲೇ ಸಾಮೂಹಿಕ ಅತ್ಯಾಚಾರ, ಹೆದರಿಸಿ ನೀಚಕೃತ್ಯ ಎಸಗಿರೋದು ಸೇರಿದಂತೆ ಈ ರೀತಿಯ ಪ್ರಕರಣಗಳಿಂದ ಇಡೀ ರಾಜ್ಯದಲ್ಲೇ ಅತಿಹೆಚ್ಚು ಪೋಸ್ಕೋ ಪ್ರಕರಣಗಳು ದಾಖಲಾದ ಕುಖ್ಯಾತಿಗೂ ಕಾಫಿನಾಡು ಪಾತ್ರವಾಗಿರುವುದು ನಿಜಕ್ಕೂ ದುರಂತವೇ ಸರಿ.
Published by:Seema R
First published: