• Home
  • »
  • News
  • »
  • state
  • »
  • Chitradurga: ಸಿಪಿಐ ಉಮೇಶ್ ವಿರುದ್ಧ ರೇಪ್ ಕೇಸ್; ಸಹಾಯ ಮಾಡುವ ನೆಪದಲ್ಲಿ ಕರೆಸಿ ಅತ್ಯಾಚಾರ!

Chitradurga: ಸಿಪಿಐ ಉಮೇಶ್ ವಿರುದ್ಧ ರೇಪ್ ಕೇಸ್; ಸಹಾಯ ಮಾಡುವ ನೆಪದಲ್ಲಿ ಕರೆಸಿ ಅತ್ಯಾಚಾರ!

ಸಿಪಿಐ ಉಮೇಶ್

ಸಿಪಿಐ ಉಮೇಶ್

ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಉಮೇಶ್ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • News18 Kannada
  • Last Updated :
  • Chitradurga, India
  • Share this:

ಚಳ್ಳಕೆರೆ ಸಿಪಿಐ ಜಿ.ಬಿ.ಉಮೇಶ್ (CPI  G.B.Umesh) ವಿರುದ್ಧ ಅತ್ಯಾಚಾರ ಪ್ರಕರಣ (Rape Case) ದಾಖಲಾಗಿದೆ. ಸಹಾಯ ಮಾಡುವ ನೆಪದಲ್ಲಿ ಕರೆಸಿ ಯುವತಿಯನ್ನು ಅತ್ಯಾಚಾರ ಮಾಡಿರುವ ಆರೋಪ ಜಿ.ಬಿ.ಉಮೇಶ್ ವಿರುದ್ಧ ಕೇಳಿ ಬಂದಿದೆ. ಐದು ವರ್ಷಗಳ ಹಿಂದೆ ಉಮೇಶ್ ಇನ್ಸ್​ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಅತ್ಯಾಚಾರ ನಡೆದಿತ್ತು. ದಾವಣಗೆರೆಯಲ್ಲಿ (Davanagere) ನಿವೇಶನ ಸಮಸ್ಯೆ ಹೇಳಲು ಯುವತಿ ಠಾಣೆಗೆ ಬಂದಿದ್ದಳು. ಈ ಸಮಯದಲ್ಲಿ ಯುವತಿ ಬಿಎಡ್​ ವ್ಯಾಸಂಗ ಮಾಡುತ್ತಿದ್ದರು. ಸಹಾಯ ಮಾಡುವ ನೆಪದಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಉಮೇಶ್ ಅತ್ಯಾಚಾರ ಮಾಡಿ, ಐದು ಬಾರಿ ಗರ್ಭಪಾತ (Abortion) ಮಾಡಿಸಿರುವ ಆರೋಪಗಳು ಕೇಳಿ ಬಂದಿದೆ.


ಇನ್ನು ಸಿಪಿಐ ಉಮೇಶ್​ಗೆ ಇಬ್ಬರು ಹೆಂಡತಿಯರು. ಯುವತಿಗೆ ನೀನು ಬೇಕಾದ್ರೆ ಮೂರನೇ ಹೆಂಡತಿಯಾಗಿರುವಂತೆ ಹೇಳಿದ್ದ. ಈ ಸಂಬಂಧ ದೂರು ನೀಡಿದ್ರೆ ನೆಟ್ಟಗಿರಲ್ಲ ಎಂದು ಜೀವ ಬೆದರಿಕೆ ಸಹ ಹಾಕಿರುವ ಬಗ್ಗೆ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.


ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಉಮೇಶ್ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಚಾಕು ಇರಿತ, ಆರೋಪಿ ಅರೆಸ್ಟ್‌


ವೈಯುಕ್ತಿಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಬಿ.ಹೆಚ್. ರಸ್ತೆಯಲ್ಲಿ ನಡೆದಿದೆ. 23 ವರ್ಷದ ಶಕೀಲ್‌ಗೆ ಇರ್ಫಾನ್ ಎಂಬಾತ ಚಾಕುವಿನಿಂದ ಇರಿದಿದ್ದಾರೆ. ಶಕೀಲ್‌ಗೆ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ ಆರೋಪಿ ಇರ್ಫಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.


ನೀರಿನಲ್ಲಿ ಮುಳುಗಿ ಬಾಲಕ ನಾಪತ್ತೆ


ಚೆಕ್ ಡ್ಯಾಂನಲ್ಲಿ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ  ಹಿರಿಯೂರು ತಾಲ್ಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೆಜ್‌ನಲ್ಲಿ ಇಬ್ಬರು ಗೆಳೆಯರ ಜೊತೆ ಈಜಲು ತೆರಳಿದ್ದ ಬಾಲಕ ಕಣ್ಮರೆಯಾಗಿದ್ದಾನೆ. NDRF, ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನಿಗಾಗಿ ಹುಡುಕಾಡ್ತಿದ್ದಾರೆ.


ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು!


ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಜ್ಜಂಪುರ ತಾಲೂಕಿನ ಸುತ್ತಮತ್ತ ಹತ್ತಾರು ಗ್ರಾಮಗಳಲ್ಲಿ ಈರುಳ್ಳಿ ಬೆಳೆದ ರೈತರು ಇದೀಗ ಅಕ್ಷರಶಃ ಕಣ್ಣೀರು ಹಾಕ್ತಿದ್ದಾರೆ. ಮಳೆಯಿಂದಾಗಿ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ರೈತರ ಬದುಕು ಮೂರಾಬಟ್ಟೆಯಾಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ:  Mangaluru Commissioner: ಮಂಗಳೂರು ಕಮಿಷನರ್ ಸೀಟ್‌ನಲ್ಲಿ ಕುಳಿತ ಪುಟ್ಟ ಕಂದಮ್ಮ! ಇದರ ಹಿಂದಿನ ಕಥೆ ಕೇಳಿದ್ರೆ ಕಣ್ಣೀರು ಬರದೇ ಇರದು


ಕಳಪೆ ಮಟ್ಟದ ಸಿಹಿ ತಿಂಡಿಗಳ ಮಾರಾಟ?


ಕಳಪೆ ಗುಣಮಟ್ಟದ ಸಿಹಿ ತಿಂಡಿಗಳ ಮಾರಾಟ ಶಂಕೆ ಹಿನ್ನೆಲೆ ಯಾದಗಿರಿಯಲ್ಲಿ ಸ್ವೀಟ್ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ರು. ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ನೇತೃತ್ವದಲ್ಲಿ ದಾಳಿ ಮಾಡಿ ಸಿಹಿ ತಿಂಡಿಗಳ ಸ್ಯಾಂಪಲ್ ಸಂಗ್ರಹಿಸಿದ್ದು, ಆಹಾರ ಮಾದರಿಗಳ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬಂದ ನಂತರ ಅಧಿಕಾರಿಗಳು ಕ್ರಮಕೈಗೊಳ್ಳೋದಾಗಿ ಹೇಳಿದ್ದಾರೆ.


ರಸ್ತೆಗುಂಡಿಗೆ ಮತ್ತೊಂದು ಬಲಿ!


ಬೆಂಗಳೂರಿನ ರಸ್ತೆ ಗುಂಡಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿವೆ. ಇದೀಗ ಬೆಂಗಳೂರು ಹೊರವಲಯದ ರಸ್ತೆ ಗುಂಡಿಗೆ ಬೈಕ್​ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ 45 ವರ್ಷದ ಬೈಕ್ ಸವಾರ ತಿಪ್ಪೇಸ್ವಾಮಿ ಲಾರಿ ಚಕ್ರಕ್ಕೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿದ್ದಾನೆ.


ಇದನ್ನೂ ಓದಿ:  V Somanna: ಬೇಟಿ ಬಚಾವೋ ಘೋಷಣೆ ಗೌರವಿಸೋದಾದ್ರೆ ಸೋಮಣ್ಣರನ್ನು ವಜಾಗೊಳಿಸಿ: ಕಾಂಗ್ರೆಸ್ 


ಪಾವಗಡ ಮೂಲದ ತಿಪ್ಪೇಸ್ವಾಮಿ ಬೆಂಗಳೂರಿನ ಮಾದವಾರದಲ್ಲಿ ವಾಸಿಸುತ್ತಿದ್ದರು.  ದೀಪಾವಳಿ ಹಬ್ಬದ ಹಿನ್ನೆಲೆ ಊರಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಲಾರಿ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾರೆ.

Published by:Mahmadrafik K
First published: