ಅತ್ಯಾಚಾರ ಆರೋಪಿ ನಿತ್ಯಾನಂದನ ಪಾಲಿಗೆ ವರವಾದ ಕೊರೋನಾ; ಏಪ್ರಿಲ್​ 15ಕ್ಕೆ ವಿಚಾರಣೆ ಮುಂದೂಡಿಕೆ

ಈ ಪ್ರಕರಣದ ವಿಚಾರಣೆ ಇವತ್ತಿನ ದಿನಾಂಕಕ್ಕೆ ಕೋರ್ಟ್ ನಿಗದಿಪಡಿಸಿತ್ತು. ನ್ಯಾಯಾಧೀಶರಾದ ಸಿದ್ದಲಿಂಗಪ್ರಭುರಿಂದ ಈ ಆದೇಶವಾಗಿತ್ತು. ಆದರೆ ಇವತ್ತಿನ ಕೋರ್ಟ್ ವಿಚಾರಣೆ ಕೊರೋನಾ ಭೀತಿಯಿಂದಾಗಿ ಮತ್ತೆ ಮುಂದೂಡಲಾಗಿದೆ. ಹಾಗಾಗಿ ಕೊರೋನಾ ನಿತ್ಯಾನಂದನ ಪಾಲಿಗೆ ವರವಾಗಿದೆ.

news18-kannada
Updated:March 23, 2020, 6:12 PM IST
ಅತ್ಯಾಚಾರ ಆರೋಪಿ ನಿತ್ಯಾನಂದನ ಪಾಲಿಗೆ ವರವಾದ ಕೊರೋನಾ; ಏಪ್ರಿಲ್​ 15ಕ್ಕೆ ವಿಚಾರಣೆ ಮುಂದೂಡಿಕೆ
ನಿತ್ಯಾನಂದ.
  • Share this:
ರಾಮನಗರ(ಮಾ.23): ಆರತಿರಾವ್ ಮೇಲಿನ ನಿತ್ಯಾನಂದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ರಾಮನಗರದ 3 ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಆದರೆ ಕೊರೋನಾ ಭೀತಿಯಿಂದಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಎಲ್ಲಾ ವಿಚಾರಣೆಗಳನ್ನು  ಸ್ಥಗಿತ ಮಾಡಲಾಗಿದ್ದು, ಏಪ್ರಿಲ್​ 15ಕ್ಕೆ ವಿಚಾರಣೆ ಮುಂದೂಡಲಾಗಿದೆ. ಮಾರ್ಚ್​​ 4ರಂದು ನಡೆದ ವಿಚಾರಣೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಾದ ನಿತ್ಯಾನಂದ, ಗೋಪಾಲ ಶೀಲಂ ರೆಡ್ಡಿ ವಿಚಾರಣೆಗೆ ಗೈರಾಗಿದ್ದರು.

ಈಗಾಗಲೇ ರಾಮನಗರ ಜಿಲ್ಲಾ 3 ನೇ ಸತ್ರ ನ್ಯಾಯಾಲಯದಿಂದ ನಿತ್ಯಾನಂದನ ವಿರುದ್ಧ ದಿನಾಂಕ ರಹಿತ ಬಂಧನದ ವಾರೆಂಟ್ ಜಾರಿಯಾಗಿದೆ. ಇನ್ನು 3 ರಿಂದ 6 ನೇ ಆರೋಪಿಗಳ ಪರವಾಗಿ ವಕೀಲರು ವಿಚಾರಣೆ ಗೈರು ಹಾಜರಾಗಿರುವುದಕ್ಕೆ ವಿನಾಯಿತಿ ಅರ್ಜಿ ಸಲ್ಲಿಸಿದ್ದರು, ಅರ್ಜಿಯನ್ನ ನ್ಯಾಯಾಧೀಶರು ಪುರಸ್ಕರಿಸಿದ್ದರು. ಪ್ರಕರಣದ ಪ್ರಮುಖ ಸಾಕ್ಷಿದಾರ ಲೆನಿನ್ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಲೆನಿನ್ ಸಹ ವಿಚಾರಣೆಗೆ ಗೈರು ಹಾಜರಾಗುತ್ತಿದ್ದ ಹಿನ್ನೆಲೆ ಬಂಧನದ ವಾರೆಂಟ್ ಜಾರಿ ಮಾಡಿತ್ತು. ಹಾಗಾಗಿ ಮಾರ್ಚ್​​ 4ರ ವಿಚಾರಣೆಗೆ ಹಾಜರಾಗಿದ್ದ ಹಿನ್ನೆಲೆ ಲೆನಿನ್ ಮೇಲಿದ್ದ ಬಂಧನದ ವಾರೆಂಟ್ ರದ್ದಾಗಿತ್ತು.

ಕೊರೋನಾ ಭೀತಿ: ಮುಂಬೈನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಮುಂದೂಡಿಕೆ

ಪ್ರಕರಣದ ಮೊದಲನೇ ಆರೋಪಿ ನಿತ್ಯಾನಂದ, ಎರಡನೇ ಆರೋಪಿ ಗೋಪಾಲಶೀಲಂರೆಡ್ಡಿ ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಸೂಚನೆ ನೀಡಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆ ಪೂರ್ವಭಾವಿಯಾಗಿ ನಿತ್ಯಾನಂದನ ಹಾಗೂ ಗೋಪಾಲಶೀಲಂರೆಡ್ಡಿ ಆಸ್ತಿ ವಿವರವನ್ನ ಕಲೆಹಾಕಲು ಕೋರ್ಟ್ ಸೂಚಿಸಿತ್ತು. ಈ ಬಗ್ಗೆ ತನಿಖಾಧಿಕಾರಿಗಳಿಗೆ ಆಸ್ತಿ ವಿವರ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿ ಮುಂದಿನ ವಿಚಾರಣೆಗಳಿಗೆ 1 ನೇ ಆರೋಪಿ 2 ನೇ ಆರೋಪಿ ಬರದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಮಾಡಲಾಗುವುದೆಂದು ಕೋರ್ಟ್ ತಿಳಿಸಿತ್ತು.

ಈ ಪ್ರಕರಣದ ವಿಚಾರಣೆ ಇವತ್ತಿನ ದಿನಾಂಕಕ್ಕೆ ಕೋರ್ಟ್ ನಿಗದಿಪಡಿಸಿತ್ತು. ನ್ಯಾಯಾಧೀಶರಾದ ಸಿದ್ದಲಿಂಗಪ್ರಭುರಿಂದ ಈ ಆದೇಶವಾಗಿತ್ತು. ಆದರೆ ಇವತ್ತಿನ ಕೋರ್ಟ್ ವಿಚಾರಣೆ ಕೊರೋನಾ ಭೀತಿಯಿಂದಾಗಿ ಮತ್ತೆ ಮುಂದೂಡಲಾಗಿದೆ. ಹಾಗಾಗಿ ಕೊರೋನಾ ನಿತ್ಯಾನಂದನ ಪಾಲಿಗೆ ವರವಾಗಿದೆ.

(ವರದಿ: ಎ.ಟಿ.ವೆಂಕಟೇಶ್​)
First published: March 23, 2020, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading