ಕಾಲೇಜ್​ ಆಡ್ಮಿಷನ್​ ನೆಪದಲ್ಲಿ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿ ಕೊಲೆ; ಆರೋಪಿ ವಶಕ್ಕೆ ಪಡೆದ ಬ್ಯಾಡರಹಳ್ಳಿ ಪೊಲೀಸರು

ನಗರದ ಖಾಸಗಿ ಕಾಲೇಜಿನಲ್ಲಿ ದಾಖಲಾತಿ ಪಡೆದಿದ್ದ ಯುವತಿ ಲಾಕ್​ಡೌನ್​ ಹಿನ್ನಲೆ ಒಂದು ಕಂತಿನ ಕಾಲೇಜ್​ ಫೀಸ್​ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕಟ್ಟಲು ನಗರಕ್ಕೆ ಆಗಮಿಸಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಡಿ. 16): ಕಾಲೇಜಿಗೆ ದಾಖಲಾತಿ ಮಾಡಿಸುತ್ತೇನೆಂದು ತನ್ನ ರೂಮ್​ಗೆ ಕರೆಸಿಕೊಂಡ ಸ್ನೇಹಿತನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹೊರರಾಜ್ಯದಿಂದ ಇಲ್ಲಿಗೆ ಆಗಮಿಸಿದ್ದ ಯುವತಿಯನ್ನು ಆಕೆಯ ಸಹಪಾಠಿ ಯುವಕನೇ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಲಾಕ್​ಡೌನ್​ ಹಿನ್ನಲೆ ಒಂದು ಕಂತಿನ ಫೀಜ್​ ಅನ್ನುಬಾಕಿ ಉಳಿಸಿಕೊಂಡಿದ್ದು, ಅದನ್ನು  ಕಟ್ಟಲು ಆಕೆ ನಗರಕ್ಕೆ ಆಗಮಿಸಿದ್ದಳು.  ಈ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಬಳಿಕ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ನಂಬಿಸುವ ಪ್ರಯತ್ನ ನಡೆಸಿದ್ದು, ವೈದ್ಯರ ತನಿಖೆಯಲ್ಲಿ ಅಸಲಿ ವಿಷಯ ಬಯಲಾಗಿದೆ. 

ನಗರದ ಖಾಸಗಿ ಕಾಲೇಜಿನಲ್ಲಿ ದಾಖಲಾತಿ ಪಡೆದಿದ್ದ ಯುವತಿ ಲಾಕ್​ಡೌನ್​ ಹಿನ್ನಲೆ ಒಂದು ಕಂತಿನ ಕಾಲೇಜ್​ ಫೀಸ್​ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕಟ್ಟಲು ನಗರಕ್ಕೆ ಆಗಮಿಸಿದ್ದಳು. ಈ ವೇಳೆ ಸಹಾಯಮಾಡುವುದಾಗಿ ಆಕೆಯನ್ನು ಆರೋಪಿ ಸ್ನೇಹಿತ ರೂಮ್​ಗೆ ಕರೆಸಿಕೊಂಡಿದ್ದಾನೆ.

ನಂತರ ರೂಂಗೆ ಬಂದ ಸ್ನೇಹಿತೆಯನ್ನು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ.
ಬಳಿಕ ಅದೇ ಬಿಲ್ಡಿಂಗ್ ನ ಕೆಳ ಮಹಡಿಗೆ ಬಂದ ಆರೋಪಿ ಸ್ನೇಹಿತರಿಗೆ ತನ್ನ ಸ್ನೇಹಿತೆ ಪ್ರಜ್ಞೆ ಕಳೆದು ಕೊಂಡು ಬಿದ್ದಿದ್ದಾಳೆ ಎಂದಿದ್ದಾನೆ. ಈ ವೇಳೆ ಆರೋಪಿ ಸ್ನೇಹಿತರು ಯುವತಿಯನ್ನು  ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಯುವತಿ ಸಾವನ್ನಪ್ಪಿದ್ದು, ಈ ಕುರಿತು ಪೊಲೀಸ್​ ಪ್ರಕರಣ ದಾಖಲಿಸಲಾಗಿದೆ.
Published by:Seema R
First published: