• Home
  • »
  • News
  • »
  • state
  • »
  • Raichur: ಪೂಜಾರಿಯಿಂದ ಬಾಲಕಿ ಮೇಲೆ ಅತ್ಯಾಚಾರ ಆರೋಪ, ವಿಶೇಷ ಪೂಜೆ ಎಂದು ಮೋಸ?

Raichur: ಪೂಜಾರಿಯಿಂದ ಬಾಲಕಿ ಮೇಲೆ ಅತ್ಯಾಚಾರ ಆರೋಪ, ವಿಶೇಷ ಪೂಜೆ ಎಂದು ಮೋಸ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2-3 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೂಜೆಗಾಗಿ ಬಂದಿದ್ದ 8 ವರ್ಷದ ಬಾಲಕಿ ಮೇಲೆ ಬಾಗೂರು ಬಸವೇಶ್ವರ ದೇವಸ್ಥಾನದ ಪೂಜಾರಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

  • News18 Kannada
  • Last Updated :
  • Raichur, India
  • Share this:

ರಾಯಚೂರು(ನ.25): ದೇವಸ್ಥಾನದ ಪೂಜಾರಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ (Raichur District) ಜಾಲಹಳ್ಳಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 2-3 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೂಜೆಗಾಗಿ ಬಂದಿದ್ದ 8 ವರ್ಷದ ಬಾಲಕಿ ಮೇಲೆ ಬಾಗೂರು ಬಸವೇಶ್ವರ ದೇವಸ್ಥಾನದ ಪೂಜಾರಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.


ಕಳೆದೆರಡು ದಿನಗಳ ಹಿಂದೆ ಸಂತ್ರಸ್ತ ಬಾಲಕಿ ತಾಯಿ ತನ್ನ ಎಂಟು ವರ್ಷದ ಮಗಳೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಬಸವೇಶ್ವರ ದೇವಸ್ಥಾನದ ಪೂಜಾರಿ ಅಯ್ಯಪ್ಪ(48) ವಿಶೇಷ ಪೂಜೆ ಮಾಡಿ ತಾಯಿತ‌ ಕಟ್ಟುವುದಾಗಿ ಹೇಳಿದ್ದಾರೆ. ಮಾತಿನಲ್ಲೇ ನಂಬಿಸಿದ್ದ ಅರ್ಚಕ ಆ ದಿನ ರಾತ್ರಿ ದೇವಸ್ಥಾನದಲ್ಲಿ ಉಳಿಸಿಕೊಂಡಿದ್ದ. ಅಯ್ಯಪ್ಪನ ಮಾತು ನಂಬಿದ ತಾಯಿ ತನ್ನ ಮಗುವಿನೊಂದಿಗೆ ದೇವಸ್ಥಾನದಲ್ಲಿ ತಂಗಿದ್ದರು.


ಆದರೀಗ ಅರ್ಚಕ ರಾತ್ರಿ ಹೊತ್ತು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆನ್ನಲಾಗಿದೆ. ಸಂತ್ರಸ್ತ ಬಾಲಕಿ ಮಾರನೇ ದಿನ‌ ತಾಯಿ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಈ ಹಿನ್ನೆಲಡಯಲ್ಲಿ ಸದ್ಯ ಆರೋಪಿ ಪೂಜಾರಿ ಮೇಲೆ ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜಾಲಹಳ್ಳಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Published by:Precilla Olivia Dias
First published: