Ramesh Aravind: ರಮೇಶ್‌ ಅರವಿಂದ್‌ ಸಾಧನೆಗೆ ಮತ್ತೊಂದು ಗರಿ, ಖ್ಯಾತ ನಟ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ನಟ ರಮೇಶ್​ ಅರವಿಂದ ನಾನು ಯಾವುದೇ ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನವುದಾಗಿ ಸ್ಪಷ್ಟನೆ ನೀಡಿದ್ದಾರೆ. ಪ್ರತಿಷ್ಠಿತ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡುವ ಭರದಲ್ಲಿ ಕುಲಪತಿ ಎಡವಟ್ಟು ಮಾಡಿದ್ರಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ರಾಣಿ ಚೆನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್​ ಘೋಷಣೆ

ರಾಣಿ ಚೆನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್​ ಘೋಷಣೆ

  • Share this:
ಬೆಳಗಾವಿ (ಸೆ.12): ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (Rani Chennamma University) 10ನೇ ಘಟಿಕೋತ್ಸವ ಇದೇ 14ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ. ಘಟಿಕೋತ್ಸವ ಸಂದರ್ಭದಲ್ಲಿ ಮೂರು ಜನರಿಗೆ ಗೌರವ ಡಾಕ್ಟರೇಟ್ (Honorary Doctorate) ಪ್ರಧಾನ ಮಾಡಲು ವಿವಿಯ ಹೆಸರು ಘೋಷಣೆ ಮಾಡಿದೆ. ನಟ ರಮೇಶ ಅರವಿಂದ, ಸಮಾಜ ಸೇವೆ ಕ್ಷೇತ್ರದಲ್ಲಿ ವಿ. ರವಿಚಂದರ್, ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಅಕ್ಕ ಅನ್ನಪೂರ್ಣತಾಯಿ ಹೆಸರು ಘೋಷಣೆ ಮಾಡಿದೆ. ಆದರೇ ಕುಲಪತಿಗಳ ದ್ವಂದ್ವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಗೌರವ ಡಾಕ್ಟರೇಟ್ ನೀಡಲು ಅರ್ಜಿ ಆಹ್ವಾನ

ಕೆಲ ತಿಂಗಳ ಮೊದಲು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ಅರ್ಜಿ ಆಹ್ವಾನ ಮಾಡಲಾಗಿತ್ತು. ಪತ್ರಿಕೆಯಲ್ಲಿ ಈ ಬಗ್ಗೆ ಅರ್ಜಿ ಆಹ್ವಾನದ ಜಾಹೀರಾತು ನೀಡಲಾಗಿತ್ತು. ಇದನ್ನು ನೋಡಿದ ವಿವಿಧ ಕ್ಷೇತ್ರ 15ಕ್ಕೂ ಹೆಚ್ಚು ಸಾಧಕರು ಅರ್ಜಿ ಸಹ ಸಲ್ಲಿಕೆ ಮಾಡಿದ್ದಾರೆ.  ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ಸಮಿತಿಯೊಂದನ್ನು ರಾಜ್ಯಪಾಲರು ರಚನೆ ಮಾಡಿದ್ದರು.



3 ಜನರ ಹೆಸರನ್ನು ಅಂತಿಮಗೊಳಿಸಿದೆ

ಸಮಿತಿ ಅರ್ಜಿಗಳ ಪರಿಶೀಲನೆ ನಡೆಸಿ 3 ಜನರ ಹೆಸರನ್ನು ಅಂತಿಮಗೊಳಿಸಿದೆ. ಅರ್ಜಿ ಸಲ್ಲಿಕೆ ಮಾಡದವರಿಗೆ ಬಿಟ್ಟು ಬೇರೆಯವರಿಗೆ ಗೌರವ ಡಾಕ್ಟರೇಟ್ ಕೊಡುವ ಅಧಿಕಾರ ಇಲ್ಲ ಎಂದು ವಿವಿ ಕುಲಪತಿ ಪ್ರೋ. ರಾಮಚಂದ್ರಗೌಡ ಹೇಳಿದ್ದಾರೆ. ಆದರೇ ನಟ ರಮೇಶ್​ ಅರವಿಂದ ನಾನು ಯಾವುದೇ ಅರ್ಜಿ ಸಲ್ಲಿಕೆ ಮಾಡಿಲ್ಲ ಎನ್ನವುದಾಗಿ ಸ್ಪಷ್ಟನೆ ನೀಡಿದ್ದಾರೆ. ಪ್ರತಿಷ್ಠಿತ ವ್ಯಕ್ತಿಗೆ ಗೌರವ ಡಾಕ್ಟರೇಟ್ ನೀಡುವ ಭರದಲ್ಲಿ ಕುಲಪತಿ ಎಡವಟ್ಟು ಮಾಡಿದ್ರಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ: BJP ಕೆಣಕಲು RSS ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್​! ಸಂಸದ ತೇಜಸ್ವಿ ಸೂರ್ಯ ಕೆಂಡಾಮಂಡಲ

ಪ್ರತಿಭೆ ಹೊಂದಿದವರಿಗೆ ಅನ್ಯಾಯ ಆಗಬಾರದು

ವಿವಿಯ ಘಟಿಕೋತ್ಸವದ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೋ  ಎಂ ರಾಮಚಂದ್ರಗೌಡ ಮಾತನಾಡಿದರು. ಅರ್ಜಿ ಆಹ್ವಾನ ಮಾಡಬೇಕು ಬೇಡ ಎಂಬುದು ಆ್ಯಕ್ಟ್ ನಲ್ಲಿ ಇಲ್ಲ, ಕಳೆದ ಸಲ ಕೇವಲ ಐದು ಅರ್ಜಿ ಸಲ್ಲಿಕೆಯಾಗಿದ್ದವು. ಈ ವರ್ಷ ಹೆಚ್ಚಿನ ಪ್ರಚಾರ ನೀಡಲು ವಿವಿಯಿಂದ ಪ್ರಯತ್ನ ಮಾಡಿದ್ದೇವೆ. ಪ್ರತಿಭೆ ಹೊಂದಿದವರಿಗೆ ಅನ್ಯಾಯ ಆಗಬಾರದು ಎಂಬುದೇ ನಮ್ಮ ಉದ್ದೇಶ. ಪ್ರಭಾವಿಗಳು 10-20 ಜನ ಶಾಸಕರ ಪತ್ರ ಸಮೇತ ಅರ್ಜಿ ಸಲ್ಲಿಕೆ ಮಾಡುತ್ತಾರೆ.

ನಟ ರಮೇಶ್​ ಅರವಿಂದ್​ ಅವರಿಗೆ ಗೌರವ ಡಾಕ್ಟರ್​

ಇದನ್ನು ತಪ್ಪಿಸಲು ನಿಜವಾದ ಅರ್ಹರನ್ನು ಗುರುತಿಸಲು ನಾವು ಪ್ರಯತ್ನ ಮಾಡಿದ್ದೇವೆ. ಗೌಡ ಕೊಡಬೇಕಾದ್ರೆ ವಿವಿಯಿಂದಲೇ ಅರ್ಹರನ್ನು ಗುರುತಿಸಬೇಕು, ಈ ವರ್ಷ 16 ಜನರಿಂದ ಗೌರವ ಡಾಕ್ಟರೇಟ್ ಪಡೆಯಲು ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಕೆ ಮಾಡದವರಿಗೆ ಬಿಟ್ಟು ಬೇರೆಯವರಿಗೆ ಗೌರವ ಡಾಕ್ಟರೇಟ್ ಕೊಡುವ ಅಧಿಕಾರ ಇಲ್ಲ. ರಾಜ್ಯಪಾಲರು ಒಂದು ಸಮಿತಿಯೊಂದನ್ನು ರಚನೆ ಮಾಡಿರುತ್ತಾರೆ. ಎಲ್ಲಾ ಅರ್ಜಿ ಪರಿಶೀಲಿಸಿ ಯಾರಿಗೆ ಗೌಡ ಕೊಡಬೇಕು ಎಂದು ಸಮಿತಿ ನಿರ್ಧಾರ ಮಾಡುತ್ತದೆ. ನಟ ರಮೇಶ ಅರವಿಂದ ಸಹ ಗೌರವ ಡಾಕ್ಟರೇಟ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ರು. ರಾಜ್ಯಪಾಲರ ಅನುಮತಿ ಪಡೆದ ಮೇಲೆ ನಮಗೆ ಮಾಹಿತಿ ಬಂದಿದೆ ಎಂದರು.

ಇದನ್ನೂ ಓದಿ: H D Kumaraswamy: ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಅತಿದೊಡ್ಡ ಹಗರಣ ಬಯಲಿಗೆಳೆಯುವೆ; ಎಚ್​ಡಿಕೆ ಹೊಸ ಬಾಂಬ್​

ರಾಣಿ ಚನ್ನಮ್ಮ ವಿವಿಯಿಂದ ನಟ ರಮೇಶ್​ ಅರವಿಂದ್​ ಗೌರವ ಡಾಕ್ಟರೇಟ್​ ಘೋಷಣೆ ಬಗ್ಗೆ ನಟ ರಮೇಶ್​ ಅರವಿಂದ್​ ನೀಡಿದ ಸ್ಪಷ್ಟನೆ ವೈರಲ್ ಆಗಿದೆ. ಗೌರವ ಡಾಕ್ಟರೇಟ್ ಪಡೆಯಲು ನಾನು ಯಾವುದೇ ಅರ್ಜಿ ಸಲ್ಲಿಕೆ ಮಾಡಿಲ್ಲ. ವಿವಿಯಿಂದ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಬಂದಿದೆ ಅಷ್ಟೇ, ಗೌರವ ಡಾಕ್ಟರೇಟ್ ನೀಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಘಟಿಕೋತ್ಸವಕ್ಕೆ ಬರುವಂತೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಕೇವಲ ಆಹ್ವಾನ ಪತ್ರಿಕೆ ಮಾತ್ರ ನೀಡಿದ್ದಾರೆ ಅಷ್ಟೇ ಬೇರೆನೂ ಇಲ್ಲ ಎಂದಿದ್ದಾರೆ.
Published by:ಪಾವನ ಎಚ್ ಎಸ್
First published: