• Home
  • »
  • News
  • »
  • state
  • »
  • Student Protest: ವಿವಿಯ ಒಂದು ಸುತ್ತೋಲೆಯಿಂದ ಸಿಡಿದೆದ್ದ ವಿದ್ಯಾರ್ಥಿಗಳು

Student Protest: ವಿವಿಯ ಒಂದು ಸುತ್ತೋಲೆಯಿಂದ ಸಿಡಿದೆದ್ದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಪ್ರತಿಭಟನೆ

ವಿದ್ಯಾರ್ಥಿಗಳ ಪ್ರತಿಭಟನೆ

ರಾಣಿ ಚನ್ನಮ್ಮ ವಿವಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಕಾಳಜಿ ವಹಿಸಬೇಕು. ಆಡಳಿತ ಮಂಡಳಿ ದುರಾಡಳಿತಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಕೇವಲ ಪ್ರತಿಭಟನೆ ಮಾಡುವುದೇ ಕೆಲಸ ಆಗಿದೆ. ನಮಗೆ ಆಶ್ವಾಸನೆ ನೀಡುವುದು ಬೇಡ ಸ್ಥಳದಲ್ಲೇ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

  • Share this:

ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದಿದ್ರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ (Government) ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದರು. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (Rani Channamma University Belagavi) ಆಡಳಿತ ಮಂಡಳಿ ಕಚೇರಿ ಎದುರು ಪ್ರತಿಭಟನೆ (Student Protest) ನಡೆಸಿದ್ದಾರೆ. ಆಡಳಿತ ಮಂಡಳಿ ಕಚೇರಿಗೆ ನುಗ್ಗಲು ಯತ್ನಿಸಿದ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ (Security Staff) ಹರಸಾಹಸಪಟ್ಟರು. ಪ್ರತಿರೋಧ ನಡುವೆಯೂ ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.


ಸ್ಥಳಕ್ಕೆ ಆಗಮಿಸಿದ ವಿವಿಯ ಹಿರಿಯ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಮನವೊಲಿಸಲು ಕಾರ್ಯ ನಡೆಯಿತು. ಈ ಪ್ರತಿಭಟನೆಗೆ ಕಾರಣ ರಾಣಿ ಚನ್ನಮ್ಮ ವಿಶ್ವವಿದ್ಯಾಯಲದ ಈ ಒಂದು ಸುತ್ತೋಲೆ. ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯವೇತನ ಮಂಜೂರಾಗಿದ್ದು, ಮಂಜೂರಾದ ಮೊತ್ತದಲ್ಲಿ ನೀಡಿದ ಮೊತ್ತಕ್ಕಿಂತ ಕಡಿಮೆ ಶಿಷ್ಯ ವೇತನ ಜಮೆಯಾಗಿದೆ.


ಬಾಕಿ ಮೊತ್ತ ಪಾವತಿಸುವಂತೆ ಸುತ್ತೋಲೆ


ಹೀಗಾಗಿ ಉಳಿದ ಮೊತ್ತವನ್ನು ಡಿಸಿಬಿ ಪ್ರಕಾರ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕದವರ ಸೂಚನೆ ಮೇರೆಗೆ ವಿದ್ಯಾರ್ಥಿಗಳು ಶುಲ್ಕದ ಬಾಕಿ ಮೊತ್ತ ಪಾವತಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ರಾಣಿ ಚನ್ನಮ್ಮ ವಿವಿ ಹೊರಡಿಸಿದ ಸುತ್ತೋಲೆ ವಿರೋಧಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದರು‌‌.


Rani Channamma University student protest in belagavi csb mrq
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ


ಕಳೆದ ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿವಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಪರೀಕ್ಷೆಗಳು ಸಮೀಪಿಸುವಾಗಲೇ ರಾಣಿ ಚನ್ನಮ್ಮ ವಿವಿ ಈ ರೀತಿ ಸುತ್ತೋಲೆ ಹೊರಡಿಸುತ್ತಿದ್ದಾರೆ ಎಂದು ಗರಂ ಆದ್ರು‌.‌‌ ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ನಿನ್ನೆ ಬೆಂಗಳೂರಿಗೆ ತೆರಳಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಭೇಟಿಯಾಗಿ ಮನವಿ ಮಾಡಿ ಬಂದಿದ್ದಾಗಿ ತಿಳಿಸಿದರು.


ಇದನ್ನೂ ಓದಿ:  108 Ambulance: 108 ಆ್ಯಂಬುಲೆನ್ಸ್​ಗೆ ಕಾಲ್ ತಾಗ್ತಿಲ್ವೇ? ಈ ಸಂಖ್ಯೆಗೆ ಕರೆ ಮಾಡಿ


ವಿದ್ಯಾರ್ಥಿಗಳು ಹೇಳದ್ದೇನು?


ಪ್ರತಿಭಟನಾನಿರತ ವಿದ್ಯಾರ್ಥಿನಿ ವಿದ್ಯಾ ಕಾಂಬಳೆ ಮಾತನಾಡಿ, ನಮಗೆ ನೀಡುವ ಶಿಷ್ಯವೇತನದಲ್ಲಿಯೇ ನಮ್ಮ ಶಿಕ್ಷಣ ಮುಗಿಯುತ್ತದೆ ಎಂದು ‌ನಾವು ರಾಣಿ ಚನ್ನಮ್ಮ ವಿವಿಗೆ ಪ್ರವೇಶಾತಿ ಪಡೆದಿದ್ದೆವು‌. ನಾನು ಮೊದಲ ವರ್ಷ 4,030 ರೂ. ಪಾವತಿಸಿದ್ದರೆ, ಎರಡನೇ ವರ್ಷ 3 ಸಾವಿರ ರೂ. ಕಟ್ಟಿದ್ದೇನೆ. ಎಕ್ಸಿಟ್ ಫೀ ಎಂದು ಹತ್ತು ಸಾವಿರ, ಇಪ್ಪತ್ತು ಸಾವಿರ ಶುಲ್ಕ ವಿಧಿಸಿದರೇ ಹೇಗೆ? ಸೆ.27ರಂದು ಪರೀಕ್ಷೆ ಇದೆ, ಈಗ ಪ್ರತಿಭಟನೆ‌ ಮಾಡುತ್ತಿದ್ದಾರೆ.


ರಾಣಿ ಚನ್ನಮ್ಮ ವಿವಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಕಾಳಜಿ ವಹಿಸಬೇಕು. ಆಡಳಿತ ಮಂಡಳಿ ದುರಾಡಳಿತಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಕೇವಲ ಪ್ರತಿಭಟನೆ ಮಾಡುವುದೇ ಕೆಲಸ ಆಗಿದೆ. ನಮಗೆ ಆಶ್ವಾಸನೆ ನೀಡುವುದು ಬೇಡ ಸ್ಥಳದಲ್ಲೇ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ.


Rani Channamma University student protest in belagavi csb mrq
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ


ಮುರ್ಮು ಸ್ವಾಗತಕ್ಕೆ ಭರ್ಜರಿ ತಯಾರಿ


ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಕ್ಕೆ ಹುಬ್ಬಳ್ಳಿಯಲ್ಲಿ ಸಿದ್ಧತೆ ಪೂರ್ಣಗೊಂಡಿವೆ. ಇಂದು ಬೆಳಗ್ಗೆ ಹುಬ್ಬಳ್ಳಿಯ ಜಿಮ್ ಖಾನಾ ಮೈದಾನದಲ್ಲಿ ಮಹಾನಗರ ಪಾಲಿಕೆಯಿಂದ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.


ಇದನ್ನೂ ಓದಿ:  Hubballi: ಮುರ್ಮು ಭೇಟಿ; ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಹರಸಾಹಸ, ಡ್ರೈನೇಜ್​​​​ಗಳಿಗೂ ಹಸಿರು ಹೊದಿಕೆ


ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 12.15ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ದ್ರೌಪದಿ ಮುರ್ಮು ನೇರವಾಗಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ. 12.45ಕ್ಕೆ ರಾಷ್ಟ್ರಪತಿಗಳಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Published by:Mahmadrafik K
First published: