ನಮ್ಮಿಂದ ಗೂಂಡಾಗಿರಿ ನಡೆದಿಲ್ಲ; ಯಾರು ಮಾಡಿದ್ದಾರೆಂದು ಜನರಿಗೆ ಗೊತ್ತಿದೆ: ರಾಣೇಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್

ಕಾಂಗ್ರೆಸ್ ಅಭ್ಯರ್ಥಿ ಕೆ ಬಿ ಕೋಳಿವಾಡ ಏನು ಅಂತಾ ತಾಲೂಕಿನ ಜನಕ್ಕೆ ಗೊತ್ತಿದೆ. ಕೋಳಿವಾಡ ಸೋಲಿನ ಭಯದಿಂದ ಹತಾಶರಾಗಿ ಮಾತನ್ನಾಡುತ್ತಿದ್ದಾರೆ. ನಮ್ಮ ನಾಯಕರ ಕಾರನ್ನು ಚಕ್ ಪೋಸ್ಟನಲ್ಲಿ ಚೆಕ್ ಮಾಡಿದ್ದಾರೆ.

G Hareeshkumar | news18-kannada
Updated:December 4, 2019, 4:42 PM IST
ನಮ್ಮಿಂದ ಗೂಂಡಾಗಿರಿ ನಡೆದಿಲ್ಲ; ಯಾರು ಮಾಡಿದ್ದಾರೆಂದು ಜನರಿಗೆ ಗೊತ್ತಿದೆ: ರಾಣೇಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್
ಬಿಜೆಪಿ ಅಭ್ಯರ್ಥಿ ಅರುಣಕುಮಾರ್​​ ಪೂಜಾರ್
  • Share this:
ಹಾವೇರಿ(04) : ನಮ್ಮ‌ ನಾಯಕರು ಎಂದೆಂದೂ ಗುಂಡಾಗಿರಿ ಮಾಡಿಲ್ಲಾ. ನಾವು ಅಂತಹ ಕೆಲಸ ಮಾಡುವುದಿಲ್ಲ. ಯಾರು ಗುಂಡಾಗಿರಿ ಮಾಡಿದ್ದಾರೆ ಎನ್ನವುದು ತಾಲೂಕಿನ ಜನಕ್ಕೆ ಗೊತ್ತಿದೆ ಎಂದು ರಾಣೇಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ತಿಳಿಸಿದ್ದಾರೆ. 

ರಾಣೇಬೆನ್ನೂರು ಬಿಜೆಪಿ ಕಛೇರಿಯಲ್ಲಿ  ಮಾತನಾಡಿದ ಅವರು, ನಮ್ಮ ಪಕ್ಷ ಒಡೆದಾಗ ಇವರು ಗೆದ್ದು ಬಂದಿದಾರೆ ಅಷ್ಟೇ ನಮ್ಮ ಪಕ್ಷದ ಅಭ್ಯರ್ಥಿ ಮೇಲೆ ಪ್ರಕರಣಗಳು ಇವೆ ಅಂತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಿಮ್ಮ ಹಾಗೇ ಗುಂಡಾಗಿರಿ ಮಾಡೊಲ್ಲಾ ಪೋಲಿಸರನ್ನು ಕರೆಸಿ ಹೆದರಿಸುವುದಿಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಕೆ ಬಿ ಕೋಳಿವಾಡ ಏನು ಅಂತಾ ತಾಲೂಕಿನ ಜನಕ್ಕೆ ಗೊತ್ತಿದೆ. ಕೋಳಿವಾಡ ಸೋಲಿನ ಭಯದಿಂದ ಹತಾಶರಾಗಿ ಮಾತನ್ನಾಡುತ್ತಿದ್ದಾರೆ. ನಮ್ಮ ನಾಯಕರ ಕಾರನ್ನು ಚಕ್ ಪೋಸ್ಟನಲ್ಲಿ ಚೆಕ್ ಮಾಡಿದ್ದಾರೆ. ಅಂತದರಲ್ಲಿ ಮನೆ ಮೇಲೆ ದಾಳಿ ಮಾಡಿದ್ದನ್ನು ಈ ಥರ ಬಳಸಿಕೊಳ್ಳುತ್ತಿದ್ದಾರೆ. ಯಾವುದು ವರ್ಕೌಟ್ ಆಗದಿದ್ದಕ್ಕೆ ನಾಯಕರ ಮೇಲೆ ಅಪಾದನೆ ಮಾಡುತ್ತಿದ್ದಾರೆ ಎಂದು ಕೆ ಬಿ ಕೋಳಿವಾಡ ವಿರುದ್ದ  ಅರುಣ್ ಕುಮಾರ್​ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :  ಸಿದ್ದರಾಮಯ್ಯ ಮೂಲೆಗುಂಪು ಮಾಡಲು ಹೊರಟಿದ್ದ ಜೋಡೆತ್ತುಗಳ ಯೋಜನೆ ಸಂಪೂರ್ಣ ವಿಫಲ ; ಯತ್ನಾಳ

ನಮ್ಮ ನಾಯಕರ ಬಗ್ಗೆ ಮಾತಾಡುವ ಮುನ್ನ ಎಚ್ಚರದಿಂದ ಇರಬೇಕು. ನೀವೂ ಹಿರಿಯರು ಇದ್ದಿರಾ ಎಚ್ಚರವಹಿಸಿ ಮಾತನಾಡಿ.  ನಿಮಗೆ ನಮ್ಮ ಜನರು ತಕ್ಕ ಪಾಠ ಕಲಿಸಿಯೇ ಕಲಿಸುತ್ತಾರೆ.  ಇದನ್ನು ರಾಜಕೀಯವಾಗಿ ಬಳಸಿಕೊಳ್ಳೊಕೆ ನೋಡಿದ್ರೆ ಅದು ಆಗೊಲ್ಲಾ ಅವರು ಮಾಡುವ ಆರೋಪ ಸತ್ಯಕ್ಕೆ ದೂರವಾದ ವಿಚಾರ ಎಂದು  ಹೇಳಿದರು.
First published: December 4, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading