ಹುಬ್ಬಳ್ಳಿ: ಬಿಜೆಪಿಯ (BJP) ಸಿಎಂ ರೇಸ್ನಲ್ಲಿ ಹತ್ತಕ್ಕೂ ಹೆಚ್ಚು ಜನರಿದ್ದಾರೆ. ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿ, ಸಿ.ಟಿ.ರವಿ, ಮುರುಗೇಶ್ ನಿರಾಣಿ, ಶೋಭಾ ಕರಂದ್ಲಾಜೆ ಮೊದಲಾದವರು ಸಿಎಂ ರೇಸ್ನಲ್ಲಿದ್ದಾರೆ. ಆಗಾಗ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರದ್ದೂ ಟ್ಯುಬ್ ಲೈಟ್ ಬೆಳಗುತ್ತೆ. ನನ್ನ ನಂಬರ್ ಬರಬಹುದು ಅಂತ ಎದುರು ನೋಡ್ತಿದಾರೆ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣ್ದೀಪ್ ಸುರ್ಜೇವಾಲಾ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar, Former CM) ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ಮಾಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬೇರೆಯವರಿಗೆ ಖೆಡ್ಡಾ ತೋಡಲು ಹೋದವರೇ ಮೊದಲು ಅವರೇ ಖೆಡ್ಡಾಕ್ಕೆ ಬೀಳ್ತಾರೆ ಎಂದು ನಮ್ಮಲ್ಲಿ ಹಳೆ ಗಾದೆ ಮಾತಿದೆ. ಅದರಂತೆಯೇ ಬಿಜೆಪಿ ಕಥೆ ಆಗಲಿದೆ. ಬೇರೆಯವರಿಗೆ ಖೆಡ್ಡಾ ತೋಡಲು ಷಡ್ಯಂತ್ರ ರೂಪಿಸಿದೆ. ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಷಡ್ಯಂತ್ರ ಮಾಡಿದೆ. ಆದ್ರೆ ಅವರ ಷಡ್ಯಂತ್ರಕ್ಕೆ ಅವರೇ ಬಲಿಯಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬಂದಿದ್ದಾರೆ. ಅವರ ಬರುವಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಬಂದಿದೆ. ಬಿಜೆಪಿಯವರು ಕೆಲವೊಮ್ಮೆ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡ್ತಾರೆ. ಕೆಲವೊಮ್ಮೆ ದಲಿತರು, ಇತರೆ ಸಮುದಾಯ ಅಪಮಾನ ಮಾಡ್ತಾರೆ. ಒಬಿಸಿ, ಒಕ್ಕಲಿಗ ಸಮುದಾಯವನ್ನು ಟಾರ್ಗೆಟ್ ಮಾಡ್ತಿದೆ ಎಂದರು.
ಕರ್ನಾಟಕದ ಅಸ್ಮಿತೆಗೆ ಧಕ್ಕೆ
ಕರ್ನಾಟಕದ ಅಸ್ಮಿತೆಗೆ ಧಕ್ಕೆ ಬಂದ್ರೂ ಬಿಜೆಪಿ ನಿರ್ಲಕ್ಷ್ಯ ಮಾಡ್ತಿದೆ. ಕರ್ನಾಟಕದ 800 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರ ಹೆಲ್ತ್ ಸ್ಕೀಂ ಜಾರಿ ಮಾಡಿದ್ರೂ ಕಣ್ಣು ಮುಚ್ಚಿ ಕುಳಿತಿದೆ. ಅಮಿತ್ ಶಾ ಬರ್ತಾರೆ, ನಂದಿನ ಬ್ರ್ಯಾಂಡ್ಗೂ ದಾಳಿ ತರ್ತಾರೆ. ನಂದಿನಿ ಇಲ್ಲಿನ ರೈತರ ಜೀವಾಳ. ಆದ್ರೆ ನಂದಿನಿ ಉತ್ಪನ್ನಗಳ ಮೇಲೆ ಗದಾಪ್ರಹಾರ ಮಾಡ್ತಿದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ ಬ್ರ್ಯಾಂಡ್ ಮೇಲೆ ಗದಾಪ್ರಹಾರ
ಲಕ್ಷಾಂತರ ರೈತರಿಗೆ, ಪಶುಪಾಲಕರು ಅನ್ಯಾಯ ಮಾಡ್ತಿದೆ. ಮತ್ತೊಂದೆಡೆ ತೆರಿಗೆ ಹಣದಲ್ಲಿಯೂ ಅನ್ಯಾಯ ಮಾಡಲಾಗ್ತಿದೆ. ಒಂದು ರೂಪಾಯಿ ತೆರಿಗೆ ಹಣದಲ್ಲಿ 15 ಪೈಸೆ ಹಣ ಮಾತ್ರ ವಾಪಸ್ ಕೊಡ್ತಿದೆ. ಸಾವಿರಾರು ಕೋಟಿ ಜಿಎಸ್ಟಿ. ಹಣ ಕೇಂದ್ರದಿಂದ ಬಾಕಿ ಇದೆ. ನೇಮಕಾತಿಯಲ್ಲಿಯೂ ಸ್ಥಳೀಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಬ್ರ್ಯಾಂಡ್ ಕರ್ನಾಟಕದ ಮೇಲೂ ಗದಾಪ್ರಹಾರ ನಡೆಯುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಹಾನಿಕಾರಕ
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದ ಪ್ರಗತಿಗೂ ಹಿನ್ನಡೆಯಾಗಿದೆ. 40 ಪರ್ಸೆಂಟ್ ಸರ್ಕಾರ 40 ಸೀಟುಗಳಿಗೆ ಸೀಮಿತ. ಬಿಜೆಪಿಯಲ್ಲಿ ಕೆಲವೇ ಸಜ್ಜನ ರಾಜಕಾರಣಿಗಳಿದ್ದರು. ಆದ್ರೆ ಅವರೆಲ್ಲರನ್ನೂ ಹೊರ ಹಾಕುವ ಕೆಲಸ ಮಾಡಿದೆ. ಹೀಗಾಗಿ ಶೆಟ್ಟರ್ ಕಾಂಗ್ರೆಸ್ ಗೆ ಬಂದಿದ್ದಾರೆ.
ಕೇವಲ ಸೆಂಟ್ರಲ್, ಧಾರವಾಡ ಜಿಲ್ಲೆಗಳಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಬಲ ಬಂದಿದೆ. ನಮ್ಮದು ವಿಜನ್ 150 ಪ್ಲಸ್, ನಮ್ಮ ಗುರಿ ಮುಟ್ಟಿಯೇ ತೀರುತ್ತೇವೆ. ಸದೃಢ ನಾಯಕತ್ವದ ಕಾರಣದಿಂದಾಗಿ ನಮ್ಮ ಗುರಿ ಮುಟ್ಟುತ್ತೇನೆ. ಆಯಾ ರಾಂ ಗಯಾರಾಂ ರಾಜಕಾರಣ ಜೋರಾಗಿದೆ. ಹೀಗಾಗಿ ರಾಜ್ಯದಲ್ಲಿ ಯಾರಿಗೇ ಆಗಲಿ ಪೂರ್ಣ ಪ್ರಮಾಣದ ಸರ್ಕಾರ ಬರಬೇಕಿದೆ. ರಾಜ್ಯದಲ್ಲಿ ಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಮತ ಮತ್ತು ನಿಮ್ಮ ವಿಶ್ವಾಸವನ್ನು ಖರೀದಿಸುವ ಹುನ್ನಾರ ನಡೆದಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದ್ರೋಹ. ಬೊಮ್ಮಾಯಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಮಾರಕ. ಹೀಗಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಬಲಿಸಬೇಕು ಎಂದು ಮನವಿ ಮಾಡಿಕೊಂಡರು.
ಬಿಜೆಪಿಗೆ 40 ಸೀಟ್ ಬರೋದು ಸಹ ಕಷ್ಟ
ಬಿಜೆಪಿಯವರಿಗೆ 40 ಸೀಟು ಬರೋದು ಕಷ್ಟವಿದೆ. ಆದ್ರೆ 50 ಜನ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ನಾವು ಪದವಿಗಾಗಿ ಹೋರಾಟ ಮಾಡ್ತಿಲ್ಲ. ಸಿಎಂ ವಿಚಾರ ಬಂದಾಗ ದೆಹಲಿಯಲ್ಲಿ ನಮ್ಮ ನಾಯಕರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka High court: ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ್ ಭಟ್ಗೆ ಬಿಗ್ ರಿಲೀಫ್
ಸಿಎಂ ರೇಸ್ ನಲ್ಲಿರೊ ನಾಯಕರೆಲ್ಲಾ ಕೈ ಕೈ ಹಿಡಿದು ಪದವಿಗಾಗಿ ಕಿತ್ತಾಟ ಮಾಡಲ್ಲ. ಕಾಂಗ್ರೆಸ್ ವಿಕಾಸಕ್ಕಾಗಿ ಹೋರಾಟ ಮಾಡ್ತೇವೆ. ರಾಜ್ಯ, ದೇಶದ ವಿಕಾಸಕ್ಕಾಗಿ ಹೋರಾಟ ಮಾಡೋ ಸಂಕಲ್ಪ ಮಾಡಿದ್ದಾರೆ ಎಂದು ರಣದೀಪ್ ಸುರ್ಜೆವಾಲಾ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ