Rahul Gandhi: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಲಿದ್ದಾರೆ; ರಣ್ದೀಪ್ ಸುರ್ಜೆವಾಲಾ!

ಕಾಂಗ್ರೆಸ್ ಕಾರ್ಯಕಾರಿ ಸಭೆ ಹಾಗೂ ಕೋರ್ ಕಮಿಟಿ ಸಭೆ ಎರಡರಲ್ಲೂ ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ಸಾರಾಸಗಟಾಗಿ ತಳ್ಳಿಹಾಕಲಾಗಿದೆ. ಅಲ್ಲದೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ನೇತೃತ್ವದಲ್ಲಿ ರಾಹುಲ್ ಗಾಂಧಿಯ ಮನವೋಲೈಸಲು ಎಲ್ಲಾ ನಾಯಕರು ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ ಎಂದು ರಣ್ದೀಪ್​ ಸುರ್ಜೆವಾಲಾ ತಿಳಿಸಿದ್ದಾರೆ.

MAshok Kumar | news18
Updated:June 13, 2019, 11:30 AM IST
Rahul Gandhi: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಲಿದ್ದಾರೆ; ರಣ್ದೀಪ್ ಸುರ್ಜೆವಾಲಾ!
ರಾಹುಲ್​ ಗಾಂಧಿ.
  • News18
  • Last Updated: June 13, 2019, 11:30 AM IST
  • Share this:
ನವ ದೆಹಲಿ (ಜೂನ್​.13); ಕಾಂಗ್ರೆಸ್​ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ರಾಹುಲ್​ ಗಾಂಧಿಯವರೇ ಮುಂದುವರಿಯಲಿದ್ದಾರೆ ಎಂದು ಮಾಜಿ ಸಚಿವ ಹಾಗೂ ಪಕ್ಷದ ವಕ್ತಾರ ರಣ್ದೀಪ್​ ಸುರ್ಜೆವಾಲಾ ತಿಳಿಸಿದ್ದಾರೆ

ಕಾಂಗ್ರೆಸ್ ಪಕ್ಷದ ಭವಿಷ್ಯದ ರೂಪುರೇಶೆಗಳು ಹಾಗೂ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಸಲು ಬುಧವಾರ ನವ ದೆಹಲಿಯಲ್ಲಿ ಪಕ್ಷದ ಕೋರ್​ ಕಮಿಟಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಹಮದ್​ ಪಟೇಲ್, ಗುಲಾಂ ನಭಿ ಆಜಾದ್, ಪಿ. ಚಿದಂಬರ್​, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್, ಆನಂದ್ ಶರ್ಮಾ ಹಾಗೂ ರಣ್ದೀಪ್​ ಸುರ್ಜೆವಾಲಾ ಸೇರಿದಂತೆ ಅನೇಕ ಭಾಗವಹಿಸಿದ್ದರು.

ಈ ಸಭೆಗೆ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸೇರಿದಂತೆ ಮೂವರೂ ಗೈರಾಗಿದ್ದರು. ಕಳೆದ ಎರಡು ದಶಕದ ಅವಧಿಯಲ್ಲಿ ಗಾಂಧಿ ಕುಟುಂಬದ ವ್ಯಕ್ತಿಗಳಿಲ್ಲದೆ ನಡೆದ ಮೊದಲ ಕಾಂಗ್ರೆಸ್ ನಾಯಕರ ಸಭೆ ಇದಾಗಿದೆ.

ಇದನ್ನೂ ಓದಿ : ಕಾಂಗ್ರೆಸ್​ ಕೋರ್​ ಕಮಿಟಿ ಸಭೆ; ಚಿದಂಬರ ರಹಸ್ಯವಾಗಿ ಉಳಿಯಲಿದೆಯೇ ಪಕ್ಷದ ಅಧ್ಯಕ್ಷ ಗಾದಿ ವಿಚಾರ?

ಈ ಸಭೆಯ ಬಳಿಕ ಮಾತನಾಡಿದ ಪಕ್ಷದ ವಕ್ತಾರ ರಣ್ದೀಪ್​ ಸುರ್ಜೆವಾಲಾ, “ಕಾಂಗ್ರೆಸ್ ಕಾರ್ಯಕಾರಿ ಸಭೆ ಹಾಗೂ ಕೋರ್ ಕಮಿಟಿ ಸಭೆ ಎರಡರಲ್ಲೂ ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ಸಾರಾಸಗಟಾಗಿ ತಳ್ಳಿಹಾಕಲಾಗಿದೆ. ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ನೇತೃತ್ವದಲ್ಲಿ ರಾಹುಲ್ ಗಾಂಧಿಯ ಮನವೋಲೈಸಲು ಎಲ್ಲಾ ನಾಯಕರು ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ರಾಹುಲ್ ಮನವೊಲಿಸಿ ಪಕ್ಷದ ಅಧ್ಯಕ್ಷರನ್ನಾಗಿ ಅವರನ್ನೇ ಮುಂದುವರೆಸಲಾಗುವುದು. ಈ ನಿರ್ಣಯಕ್ಕೆ ಎಲ್ಲರೂ ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿಗೆ ಹೊಣೆಹೊತ್ತು ರಾಹುಲ್ ಗಾಂಧಿ ಕಳೆದ ತಿಂಗಳೇ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಹಿಂದುಳಿದ ಅಥವಾ ದಲಿತ ಸಮಾಜದ ವ್ಯಕ್ತಿಯನ್ನು ಈ ಸ್ಥಾನಕ್ಕೆ ನೇಮಿಸುವಂತೆಯೂ ಸೂಚನೆ ನೀಡಿದ್ದರು. ಆದರೆ, ಅವರ ರಾಜೀನಾಮೆಯನ್ನು ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ತಿರಸ್ಕರಿಸಲಾಗಿತ್ತು.

ಇದನ್ನೂ ಓದಿ : ಸಮ್ಮಿಶ್ರ ಸರ್ಕಾರದ ವಿರುದ್ಧ ನಾಳೆಯಿಂದ 2 ದಿನ ಹಗಲು ರಾತ್ರಿ ಸತ್ಯಾಗ್ರಹ; ಬಿ.ಎಸ್​. ಯಡಿಯೂರಪ್ಪ
First published: June 13, 2019, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading