• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ

Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ

ಮೆಟ್ರೋ ಉದ್ಘಾಟನೆ ಆಗಮಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ

ಮೆಟ್ರೋ ಉದ್ಘಾಟನೆ ಆಗಮಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ನಕಲಿ ವೈದ್ಯರಂತಾಗಿದ್ದು, ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಅವರು ಆರಂಭ ಹಾಗೂ ಅಂತಿಮ ಸ್ಥಳ ನಿಗದಿಯಾಗದೆ ಇರುವ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ಹುಚ್ಚಿಗೆ ಸಾರ್ವಜನಿಕರ ಸುರಕ್ಷತೆ ಹಾಗೂ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ರಣದೀಪ್ ಸುರ್ಜೇವಾಲಾ ಟೀಕೆ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ವಿರುದ್ಧ ಕಾಂಗ್ರೆಸ್ (Congress) ಕಿಡಿಕಾರಿದೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಉದ್ಘಾಟನೆ ಮಾಡಲಾಗುತ್ತಿದೆ. ಬೆಂಗಳೂರು ಏರ್​ಪೋರ್ಟ್ ಟರ್ಮಿನಲ್ (Bengaluru Airport Terminal), ಮೆಟ್ರೋ (Namma Metro), ಬೆಂಗಳೂರು-ಮೈಸೂರು ಹೆದ್ದಾರಿ (Bengaluru Mysuru Highway ) ಕಾಮಗಾರಿಯೇ ಅಂತ್ಯವಾಗಿಲ್ಲ. ಆದರೂ ಪ್ರಧಾನಿ ಮೋದಿ ಉದ್ಘಾಟನೆ ಮಾಡಲು ಆಗಮಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala) ಹೇಳಿದ್ದಾರೆ.


ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ


ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಸುದೀರ್ಘ ಮಾಹಿತಿ ಹಂಚಿಕೊಂಡಿರುವ ರಣದೀಪ್ ಸುರ್ಜೇವಾಲಾ  ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಕಲಿ ವೈದ್ಯರಂತಾಗಿದ್ದು, ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಅವರು ಆರಂಭ ಹಾಗೂ ಅಂತಿಮ ಸ್ಥಳ ನಿಗದಿಯಾಗದೆ ಇರುವ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ಹುಚ್ಚಿಗೆ ಸಾರ್ವಜನಿಕರ ಸುರಕ್ಷತೆ ಹಾಗೂ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.


ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ ಎಂಬುದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ಮೋದಿ ಸರ್ಕಾರಕ್ಕೆ ಮನವರಿಕೆಯಾಗಿದ್ದು, ಅವರು ಉದ್ದೇಶಪೂರ್ವಕವಾಗಿ ಪ್ರಚಾರ ಪಡೆಯುವ ಗೀಳು ಹತ್ತಿಸಿಕೊಂಡಿದ್ದಾರೆ. ಆದರೆ ಅವರು ಪ್ರತಿ ಪ್ರಯತ್ನದಲ್ಲೂ ಮುಖಭಂಗ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: Koppal: ಅರ್ಧ ಸುಟ್ಟ ಸ್ಥಿತಿಯಲ್ಲಿ ಬಾಣಂತಿ ಶವ ಪತ್ತೆ; ನಿಧಿಗಾಗಿ ಅಮಾವಾಸ್ಯೆಯಂದು ಬಲಿ ಶಂಕೆ?


ಕಾಂಗ್ರೆಸ್ ಪಕ್ಷದ ಆರೋಪಗಳೇನು?


22, ನವೆಂಬರ್ 2022ರಂದು ಪ್ರಧಾನಿ ಮೋದಿ ಅವರು ಅಪೂರ್ಣಗೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾ 2ನೇ ಟರ್ಮಿನಲ್ ಉದ್ಘಾಟಿಸಿದರು. ಆದರೆ ಈ ದಿನದವರೆಗೂ ಈ ಟರ್ಮಿನಲ್ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭವಾಗಿಲ್ಲ. ಈ ಟರ್ಮಿನಲ್ ಗೆ ಅಂತಾರಾಷ್ಟ್ರೀಯ ವಿಮಾನಗಳು ಸ್ಥಳಾಂತರವಾಗುವುದಕ್ಕೆ 2 ವರ್ಷಗಳು ಬೇಕಾಗಲಿದೆ. ಈ ಟರ್ಮಿನಲ್ ನಲ್ಲಿ ಪ್ರಾದೇಶಿಕ ವಿಮಾನಗಳ ಕಾರ್ಯಾಚರಣೆ ಆರಂಭವಾಗುವುದು ಮೇ ಹಾಗೂ ಜೂನ್ ತಿಂಗಳವರೆಗೂ ಕಾಯಬೇಕು.


ಫೆಬ್ರವರಿ 27, 2023ರಂದು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಇದುವರೆಗೂ ಅಲ್ಲಿ ಒಂದೇ ಒಂದು ವಿಮಾನ ಕೂಡ ಕಾರ್ಯಾಚರಣೆ ಆರಂಭ ಮಾಡಿಲ್ಲ.c




ಮಾರ್ಚ್ 12, 2023ರಂದು ಮೋದಿ ಅವರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮಾಡಿದ್ದು, ಇದುವರೆಗೂ ಈ ರಸ್ತೆ ಪೂರ್ಣ ಕಾಮಗಾರಿಯಾಗಿಲ್ಲ. ಸರ್ವೀಸ್ ರಸ್ತೆಗಳು, ಅಂಡರ್ ಪಾಸ್, ಓವರ್ ಪಾಸ್, ಪಾದಚಾರಿ ಅಂಡರ್ ಪಾಸ್ ಪೂರ್ಣಗೊಂಡಿಲ್ಲ. ಇದೆಲ್ಲದರ ಜತೆಗೆ ಮಳೆ ನೀರು ರಸ್ತೆ ಮೇಲೆ ನಿಂತು ಅಪಘಾತಕ್ಕೆ ಕಾರಣವಾಗುತ್ತಿವೆ.


ಆಮೂಲಕ ಅಪೂರ್ಣ ಯೋಜನೆಗಳ ಉದ್ಘಾಟನೆಯನ್ನು ಮುಂದುವರಿಸುತ್ತಾ ಮಾರ್ಚ್ 25, 2023ರಂದು ಪ್ರಧಾನಿ ಮೋದಿ ಅವರು ಆರಂಭದಿಂದ ಅಂತಿಮ ಸ್ಥಳ ನಿಗದಿಯಾಗದ ಮೆಟ್ರೋ ಮಾರ್ಗ ಉದ್ಘಾಟಿಸುತ್ತಿದ್ದಾರೆ. ಇದು ಬೆಂಗಳೂರಿಗರ ಸಮಸ್ಯೆಗೆ ಪರಿಹಾರ ನೀಡುವ ಬದಲು ಹೆಚ್ಚು ಅಡಚಣೆ ಸೃಷ್ಟಿಸಲಿದೆ. ಈ ಕಾರ್ಯಕ್ರಮದಿಂದ ಆಗುವ ಲಾಭ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳಲ್ಲಿ ಸಿಗುವ ಪ್ರಚಾರ ಮಾತ್ರ. ಈ ಮೆಟ್ರೋ ಮಾರ್ಗ ಹಾಲಿ ಇರುವ ಮೆಟ್ರೋ ಮಾರ್ಗವನ್ನು ಸಂಪರ್ಕಿಸುವುದಿಲ್ಲ ಹಾಗಾಗಿ ಇದರಿಂದ ಸಾರ್ವಜನಿಕರ ಸುರಕ್ಷತೆಗೂ ಅಪಾಯಕಾರಿಯಾಗಿದೆ.


ಕಾಂಗ್ರೆಸ್​​ ಪಕ್ಷ ಬಿಡುಗಡೆ ಮಾಡಿರುವ ಅಂಶಗಳ ಪಟ್ಟಿ:


1.ಪ್ರಸ್ತುತ ಬೆಂಗಳೂರಿನ ಮೆಟ್ರೋದ ನೇರಳೆ ಬಣ್ಣದ ಮಾರ್ಗ ಬೈಯಪ್ಪನಹಳ್ಳಿಗೆ ಅಂತ್ಯವಾಗಲಿದ್ದು, ಈ ಮಾರ್ಗವನ್ನು ಬೈಯ್ಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಐಟಿ ಕಾರಿಡಾರ್ ಗೆ ಸಂಪರ್ಕಿಸಲಾಗುವುದು. ಈ ಮಾರ್ಗ ವಿಸ್ತರಣೆಯು 3 ವರ್ಷಗಳ ವಿಳಂಬದಲ್ಲಿದೆ.


2.ಇನ್ನು ಬೈಯ್ಯಪ್ಪನಹಲ್ಳಿ ಮೆಟ್ರೋ ನಿಲ್ದಾಣದಿಂದ ಕೆ.ಆರ್ ಪುರಂ ಮೆಟ್ರೋ ನಿಲ್ದಾಣದ ನಡುವಣ ಮಾರ್ಗ ಇನ್ನು ಪೂರ್ಣಗೊಂಡಿಲ್ಲ. ಈ ಮಾರ್ಗವು ವಿದ್ಯುತ್ ಚಾಲಿತ ರೈಲ್ವೇ ಮಾರ್ಗದ ಮೇಲ್ಭಾಗದಲ್ಲಿ ಹಾದುಹೋಗಲಿದ್ದು, ಮುಂದಿನ ಆರು ತಿಂಗಳವರೆಗೆ ಈ ಮಾರ್ಗ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಈ ಎರಡೂ ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಪೂರ್ಣಗೊಂಡಿಲ್ಲ.


3.ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೆ.ಆರ್ ಪುರಂ ಹಾಗೂ ವೈಟ್ ಫೀಲ್ಡ್ ನಡುವಣ ಮೆಟ್ರೋ ಮಾರ್ಗವನ್ನು ಉದ್ಘಾಟಿಸುತ್ತಿದ್ದು, ಈ ಮೆಟ್ರೋ ಮಾರ್ಗ ಎರಡೂ ಕಡೆಯಿಂದಲೂ ಹಾಲಿ ಮೆಟ್ರೋ ಮಾರ್ಗಕ್ಕೆ ಸಂಪರ್ಕ ಸಾಧಿಸಿಲ್ಲ.


4.ಇನ್ನು ಸರ್ಕಾರ ಬೈಯಪ್ಪನಹಳ್ಳಿ ಹಾಗೂ ಕೆ.ಆರ್ ಪುರಂ ಮೆಟ್ರೋ ನಿಲ್ದಾಣದ ಮಧ್ಯೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವುದಾಗಿ ಸಮರ್ಥನೆ ನೀಡುತ್ತಿದ್ದು, ಈಗಾಗಲೇ ಬಿಎಂಟಿಸಿಯಲ್ಲಿ 8 ಸಾವಿರ ಬಸ್ಗಳ ಕೊರತೆ ಎದುರಾಗಿದೆ. ಹೀಗಾಗಿ ಹಾಲಿ ಸಂಚಾರದಲ್ಲಿರುವ ಮಾರ್ಗಗಳ ಬಸ್ ಗಳನ್ನು ತಂದು ಇಲ್ಲಿ ಓಡಾಡಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಹೆಚ್ಚು ತೊಂದರೆ ಆಗಲಿದೆ.


5.ಇನ್ನು ಕೆ.ಆರ್ ಪುರಂ, ವೈಟ್ ಫೀಲ್ಡ್ ನಡುವಣ ಮೆಟ್ರೋ ಮಾರ್ಗ ಅಪೂರ್ಣವಾಗಿದೆ. ಮೆಟ್ರೋ ಲೈನ್, ನಿಲ್ದಾಣ, ಪ್ಲಾಟ್ ಫಾರ್ಮ್ ಗಳ ಮಾರ್ಗ ಪೂರ್ಣಗೊಂಡಿಲ್ಲ. ಹೀಗಾಗಿ ದು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತರಲಿದೆ.


6.ಇನ್ನು ಈ ಮಾರ್ಗದ ಮೆಟ್ರೋ ನಿಲ್ದಾಣಗಳ ಕಾಮಗಾರಿ ಅಪೂರ್ಣಗೊಂಡಿದೆ. ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣ ಕೂಡ ಅಪೂರ್ಣಗೊಂಡಿದ್ದು ಅದರ ಫೋಟೋವನ್ನು ಮಾಧ್ಯಮಗಳಿಗೆ ನೀಡಲಾಗಿದೆ.


7.27 ಫೆಬ್ರವರಿ 2023ರಂದು ಮೆಟ್ರೋ ರೈಲು ಸುರಕ್ಷತೆ ಆಯುಕ್ತರು ಈ ಮಾರ್ಗದಲ್ಲಿ 58 ದೊಡ್ಡ ಹಾಗೂ ಸಣ್ಣ ಪ್ರಮಾಣದ ನ್ಯೂನ್ಯತೆಗಳನ್ನು ಪಟ್ಟಿ ಮಾಡಿದ್ದಾರೆ. ಅವರ ನ್ಯೂನ್ಯತೆ ಪಟ್ಟಿಯ ಪತ್ರವನ್ನು ಕೂಡ ಈ ಪ್ರಕಟಣೆಯಲ್ಲಿ ಲಗತ್ತಿಸಲಾಗಿದೆ.



•ಈ ಮಾರ್ಗದಲ್ಲಿ ಹೋಗುವ ಹಾಗೂ ಬರುವ ಎರಡು ಮಾರ್ಗದ ಬದಲು ಗರುಡಾಚಾರ್ಯಪಾಳ್ಯದಿಂದ ಕೆ.ಆರ್ ಪುರಂ ವರೆಗೆ ಕೇವಲ ಒಂದು ಮಾರ್ಗ ಮಾತ್ರ ಇದ್ದು, ಈ ಒಂದು ಮಾರ್ಗದಲ್ಲಿ ಮೆಟ್ರೋ ರೈಲುಗಳು ದ್ವಿಮುಖವಾಗಿ ಚಲಿಸಬೇಕಿದೆ. ಇದು ಪ್ರಯಾಣಿಕರನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಮೆಟ್ರೋ ರೈಲಿನ ಸುಗಮ ಸಂಚಾರಕ್ಕೂ ಅಡಚಣೆಯಾಗಲಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ಈ ಮಾರ್ಗದಲ್ಲಿ ಹೆಚ್ಚಾಗಲಿದೆ.


•ಪರಿಕ್ಷಾರ್ಥ ಸಂಚಾರದ ಸಮಯದಲ್ಲಿ ಉದ್ದೇಶಿತ ವೇಗಕ್ಕೂ ಹಾಗೂ ಇಂಜಿನಿಯರ್ ಗಳು ನಿಗದಿ ಮಾಡಿರುವ ವೇಗಕ್ಕೂ ಸಂಬಂಧವಿಲ್ಲದಂತಾಗಿದೆ.


•ಮೆಟ್ರೋ ಸುರಕ್ಷತೆಯಲ್ಲಿ ಸ್ಥಳಾಂತರ ಮಾರ್ಗಗಳು ಪ್ರಮುಖವಾಗಿದ್ದು, KM 33/200 to KM 33/300 and KM 32/800 to KM 33/000 R ಈ ಮಾರ್ಗದಲ್ಲಿ ಸ್ಥಳಾಂತರ ಮಾರ್ಗಗಳು ಇಲ್ಲವಾಗಿವೆ.


•ಕಾಡುಗೋಡಿ ಮತ್ತು ಪಟ್ಟಂದುರು ಅಗ್ರಹಾರದಲ್ಲಿ ನಿಯಂತ್ರಿತ ಬಾಗಿಲ ವ್ಯವಸ್ಥೆಗಳಿಲ್ಲವಾಗಿದೆ.


•ಬಹು ಮೆಟ್ರೋ ನಿಲ್ದಾಣಗಳಲ್ಲಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ನಿರ್ಮಾಣ ಸಲಕರಣೆಗಳು ಪ್ರಯಾಣಿಕರ ಓಡಾಟದ ಪ್ರದೇಶದಲ್ಲಿ ಹಾಕಲಾಗಿರುತ್ತದೆ.


•ಅಗ್ನಿ ಶಾಮಕ ಹಾಗೂ ಬೆಂಕಿ ನಂದಿಸುವ ವ್ಯವಸ್ಥೆಗಳನ್ನು ಅಳವಡಿಸಿಲ್ಲ.


•ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಸಂಬಂಧಿಸಿದ ಕೆಲಸಗಳು ಇನಷ್ಟೇ ಪೂರ್ಣಗೊಳ್ಳಬೇಕಿದೆ.


•ಮಹದೇವಪುರ ನಿಲ್ದಾಣ ವಿಸ್ತೃತ ಸಂಪರ್ಕ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡಿಲ್ಲ. ಇನ್ನು 58 ನ್ಯೂನ್ಯತೆಗಳನ್ನು ಸರಿಪಡಿಸಿರುವ ಬಗ್ಗೆ ಸುರಕ್ಷತೆಯ ಪರೀಕ್ಷೆ ಮಾಡದೇ ಮರು ಪರಿಶಿಲನೆ ನಡೆಸದೇ ಮೆಟ್ರೋ ಮಾರ್ಗ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ.



•ಬೆಂಗಳೂರು ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಅನೇಕ ಅವಘಡಗಳು ಸಂಭವಿಸಿದ್ದು, ಮಾನ್ಯ ಮುಖ್ಯಮಂತ್ರಿಗಳು ಫೆ.17 2023ರಂದು ವಿಧಾನ ಪರಿಷತ್ ನಲ್ಲಿ ಕೊಟ್ಟ ಉತ್ತರದ ಪ್ರಕಾರ ಮೆಟ್ರೋ ಕಾಮಗಾರಿ ವೇಳೆ ಇದುವರೆಗೂ 38 ಬೆಂಗಳೂರು ನಾಗರೀಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.


ಜನವರಿ 12, 2023ರಂದು ನಡೆದ ದುರ್ಘಟನೆಯಲ್ಲಿ ಮೆಟ್ರೋ ಆಧಾರಸ್ತಂಭ ಕುಸಿದ ಪರಿಣಾಮ ತಾಯಿ ಹಾಗೂ ಮಗು ಪ್ರಾಣ ಕಳೆದುಕೊಂಡಿದ್ದರು. ಪ್ರಸ್ತುತಮೆಟ್ರೋ ಕಾಮಗಾರಿಗಳ ಸ್ಥಳಗಳಲ್ಲಿ ಸುರಕ್ಷತಾ ಆಡಿಟ್ ನಡೆಸುವಂತೆ ಬಿಎಂಆರ್ಸಿಎಲ್ ಒಕ್ಕೂಟ ಕೂಡ ಪತ್ರ ಬರೆದಿತ್ತು.


ಹೀಗಾಗಿ ಅಪೂರ್ಣಗೊಂಡಿರುವ ಕೆ.ಆರ್ ಪುರಂ ಹಾಗೂ ವೈಟ್ ಫೀಲ್ಡ್ ನಡುವಣ ಮೆಟ್ರೋ ಮಾರ್ಗ ಸಾರ್ವಜನಿಕಪ ಸುರಕ್ಷತೆಗೆ ಅಪಾಯಕಾರಿಯಾಗಿದ್ದು ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ.




ಕಾಂಗ್ರೆಸ್​​ ಪಕ್ಷ ಮುಂದಿಟ್ಟಿರೋ ಪ್ರಶ್ನೆಗಳು


ಕೆ.ಆರ್ ಪುರಂ ನಿಲ್ದಾಣ ಹಾಗೂ ವೈಟ್ ಫೀಲ್ಡ್ ನಿಲ್ದಾಣಗಳಿಂದ ಬೈಯಪ್ಪನಹಳ್ಳಿ ಮೆಟ್ರೋಗೆ ಸಂಪರ್ಕವಿಲ್ಲದ ಅಪೂರ್ಣಗೊಂಡಿರುವ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೇದಿ ಅವರು ಉದ್ಘಾಟಿಸುತ್ತಿರುವುದೇಕೆ?


ಬೈಯಪ್ಪನಹಳ್ಳಿ ಹಾಗೂ ಕೆ.ಆರ್ ಪುರಂ ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಸಾಧಿಸಲು ಇನ್ನು ಆರು ತಿಂಗಳ ಕಾಲಾವಕಾಶ ಅಗತ್ಯವಿದೆ. ಆಗಿದ್ದರೂ ಮೋದಿ ಅವರು ಈ ನೇರಳೆ ಮಾರ್ಗವನ್ನು ಉದ್ಘಾಟಿಸುತ್ತಿರುವುದೇಕೆ?


ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳ ಕೊರತೆ ಇರುವಾಗ ಬೈಯಪ್ಪನಹಳ್ಳಿ ಹಾಗೂ ಕೆ.ಆರ್ ಪುರಂ ಮೆಟ್ರೋ ನಿಲ್ದಾಣದ ನಡುವೆ ಬಿಎಂಟಿಸಿ ಬಸ್ ಸಂಚಾರಕ್ಕೆ ಒತ್ತಡ ಮಾಡುತ್ತಿರುವುದೇಕೆ?


ಮೆಟ್ರೋ ರೈಲ್ವೇ ಸುರಕ್ಷತೆಯ ಆಯುಕ್ತರು 58 ದೊಡ್ಡ ಹಾಗೂ ಸಣ್ಣ ದೋಷಗಳನ್ನು ಗುರುತಿಸಿದ್ದು, ಮೋಟ್ರೋ ಮಗಾರಿ ಅಪೂರ್ಣಗೊಂಡಿರುವುದು ಸತ್ಯವಲ್ಲವೇ? ಗರುಡಾಚಾರ್ಯಪಾಳ್ಯ ಹಾಗೂ ಕೆ.ಆರ್ ಪುರಂ ಮೆಟ್ರೋ ನಿಲ್ದಾಣ ನಡೆವ ಒಂದು ಭಾಗದ ಮೆಟ್ರೋ ಲೈನ್ ಇಲ್ಲದಿರುವುದು ಸಾರ್ವಜನಿಕರ ಸುರಕ್ಷತೆಗೆ ಅಪಾಯವಲ್ಲವೇ? ಉದ್ಘಾಟನೆಯಾಗುವ ಮುನ್ನ ಈ ಮಾರ್ಗದಲ್ಲಿ ಆಯುಕ್ತರು ಹೊಸತಾಗಿ ಸುರಕ್ಷತಾ ಪರಿಶೀಲನೆ ನಡೆಸಬೇಕಲ್ಲವೇ?

top videos


    ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಇದುವರೆಗೂ 38 ಮಂದಿ ಬಲಿಯಾಗಿದ್ದರೂ ಮೋದಿ ಹಾಗೂ ಬೊಮ್ಮಾಯಿ ಅವರಿಗೆ ಬೆಂಗಳೂರು ಜನರ ಸುರಕ್ಷತೆಗಿಂತ ತಮ್ಮ ಚುನಾವಣೆ ಪ್ರಚಾರವೇ ಹೆಚ್ಚಾಯಿತೇ?

    First published: