• Home
 • »
 • News
 • »
 • state
 • »
 • Congress: ಬಸ್​ ಯಾತ್ರೆಗೆ ಯಾರೂ ಕಂಡಿಷನ್ ಹಾಕುವಂತಿಲ್ಲ; ರಾಜ್ಯ ನಾಯಕರಿಗೆ ರಣ್​ದೀಪ್​ ಸುರ್ಜೇವಾಲಾ ಎಚ್ಚರಿಕೆ

Congress: ಬಸ್​ ಯಾತ್ರೆಗೆ ಯಾರೂ ಕಂಡಿಷನ್ ಹಾಕುವಂತಿಲ್ಲ; ರಾಜ್ಯ ನಾಯಕರಿಗೆ ರಣ್​ದೀಪ್​ ಸುರ್ಜೇವಾಲಾ ಎಚ್ಚರಿಕೆ

ರಣ್​ದೀಪ್ ಸುರ್ಜೇವಾಲಾ

ರಣ್​ದೀಪ್ ಸುರ್ಜೇವಾಲಾ

ಎಸ್ ಸಿ, ಎಸ್ ಟಿ ಹಿಂದುಳಿದ ವರ್ಗ ಸೇರಿ ಎಲ್ಲಾ ಸಮುದಾಯಗಳ ಕಲ್ಯಾಣಕ್ಕಾಗಿ ಅಜೆಂಡಾ ರೂಪಿಸಿದ್ದೇವೆ. ಈ ಸಂಬಂಧ ಚುನಾವಣಾ ಪ್ರಣಾಳಿಕೆ ರೂಪಿಸಿ ಶೀಘ್ರವೇ ಬಿಡುಗಡೆ ಮಾಡ್ತೇವೆ ಎಂದು ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

 • News18 Kannada
 • 4-MIN READ
 • Last Updated :
 • Hubli-Dharwad (Hubli), India
 • Share this:

ಹುಬ್ಬಳ್ಳಿ : ಬಸ್ ಯಾತ್ರೆಗೆ (Bus Yatre) ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಯಾವುದೇ ಕಂಡಿಷನ್ ಹಾಕಿಲ್ಲ, ಬಸ್ ಯಾತ್ರೆಗೆ ಯಾರೂ ಕಂಡಿಷನ್ ಹಾಕುವಂತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Congress Leader Randeep Surjewala) ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಜನವರಿ 09 ರ ನಂತರ ರಾಜ್ಯಾದ್ಯಂತ ಬಸ್ ಯಾತ್ರೆ ನಡೆಸುತ್ತೇವೆ. ಎಲ್ಲಾ ನಾಯಕರೂ ಬಸ್ ಯಾತ್ರೆಯಲ್ಲಿ ಭಾಗಿಯಾಗ್ತಾರೆ. ಬಸ್ ಯಾತ್ರೆಯಲ್ಲಿ ಭಾಗಿಯಾಗೋಕೆ ಸಿದ್ದರಾಮಯ್ಯ ಕಂಡಿಷನ್ ಹಾಕಿರೋ ವಿಚಾರ ನನಗೆ ಗೊತ್ತಿಲ್ಲ‌ ಎಂದರು. 


ಸಿದ್ದರಾಮಯ್ಯ ನನಗೆ ಯಾವುದೇ ರೀತಿಯ ಕಂಡಿಷನ್ ಹಾಕಿಲ್ಲ. ಯಾವುದೇ ನಾಯಕರಾಗಲಿ ಅಥವಾ ನಾಯಕಿಯಾಗಲಿ ಕಂಡಿಷನ್ ಹಾಕಿಲ್ಲ. ನಮ್ಮ ನಾಯಕತ್ವ ಒಗ್ಗಟ್ಟಾಗಿದೆ ಎಂದು ಹೇಳಿದರು.


ನಮ್ಮ ನೀತಿಯೂ ಒಗ್ಗಟ್ಟಾಗಿದೆ. ದೆಹಲಿ ಮಾಧ್ಯಮಗಳಿಂದ ಪ್ರಭಾವಿತರಾಗಬೇಡಿ. ಗಾಸಿಪ್ ವಿಚಾರಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ರಾಜ್ಯದ ಜನರ ಸೇವೆ ಮಾಡುವ, ರಾಜ್ಯದಲ್ಲಿ ಸುಧಾರಣೆ ತರಲು ಕಾಂಗ್ರೆಸ್ ಬದ್ಧ ಎಂದು ಭರವಸೆ ನೀಡಿದರು.


ಎಸ್ ಸಿ, ಎಸ್ ಟಿ ಹಿಂದುಳಿದ ವರ್ಗ ಸೇರಿ ಎಲ್ಲಾ ಸಮುದಾಯಗಳ ಕಲ್ಯಾಣಕ್ಕಾಗಿ ಅಜೆಂಡಾ ರೂಪಿಸಿದ್ದೇವೆ. ಈ ಸಂಬಂಧ ಚುನಾವಣಾ ಪ್ರಣಾಳಿಕೆ ರೂಪಿಸಿ ಶೀಘ್ರವೇ ಬಿಡುಗಡೆ ಮಾಡ್ತೇವೆ ಎಂದು ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.


ಬಿಜೆಪಿ ವಿರುದ್ಧ ಹರಿಹಾಯ್ದ ಸುರ್ಜೆವಾಲಾ


ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ಅರ್ಹತೆ ಕಳೆದುಕೊಂಡಿದೆ ಎಂದು ರಣದೀಪ್ ಸುರ್ಜೆವಾಲಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.


ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ. ಬಿಜೆಪಿ ಭ್ರಷ್ಟಾಚಾರದ ಸಮುದ್ರದಲ್ಲಿ ಮುಳುಗಿ ಹೋಗಿದೆ. ಪ್ರಜಾಪ್ರಭುತ್ವ ಮೌಲ್ಯವನ್ನು ಗಾಳಿಗೆ ತೂರಿದ ಬಿಜೆಪಿಯದ್ದು ಅನೈತಿಕ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.


ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿ ಹೋಗಿದೆ


ಎರಡೂ ಕೈಯಲ್ಲಿ ಲಂಚ ತೆಗೆದುಕೊಳ್ಳುತ್ತಾ ಬಿಜೆಪಿ ರಾಜ್ಯದಲ್ಲಿ ಲೂಟಿ ಮಾಡ್ತಿದೆ. ದೇಶದ ಅತ್ಯಂತ ಭ್ರಷ್ಟ ಸರ್ಕಾರ ಬೊಮ್ಮಾಯಿ ಸರ್ಕಾರವಾಗಿದೆ. 40 ರಿಂದ 50  ಪರ್ಸೆಂಟೇಜ್ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿ ಹೋಗಿದೆ. ಮಠಗಳಿಗೆ ನೀಡುವ ಅನುದಾನದಲ್ಲಿಯೂ ಭ್ರಷ್ಟಾಚಾರ ನಡೆಸಿದೆ. ಶೇ. 5  ಡಿಸ್ಕೌಂಟ್ ನೀಡಿ 35  ಪರ್ಸೆಂಟ್  ಕಮಿಷನ್ ಹೊಡೆದಿದೆ ಎಂದು ಸುರ್ಜೇವಾಲಾ ಆರೋಪಿಸಿದರು.


ಇದನ್ನೂ ಓದಿ: Siddaramaiah: ಡಿಕೆಶಿ ಟೆರರಿಸಂ ಸಪೋರ್ಟ್ ಮಾಡ್ತೀನಿ ಅಂತ ಹೇಳಿದ್ರಾ? ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ


ಕರ್ನಾಟಕದಲ್ಲಿ 40% ಹೊರತಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ನೌಕರಿಗಳು ಬಿಕರಿಗೆ ಇಡಲಾಗಿದೆ. ಪಿಎಸ್ಐ ಹಗರಣ ನೇರವಾಗಿ  ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಬಾಗಿಲಿಗೆ ಬಂದಿದೆ. ಡಿಜಿಪಿ ಮಟ್ಟದ ಅಧಿಕಾರಿಯೊಬ್ಬರ ಬಂಧನ ಆಗಿರೋದು ಇತಿಹಾಸದಲ್ಲಿ ಇದೇ ಮೊದಲು. ಬಿಜೆಪಿ ಮಟ್ಟದ ಅಧಿಕಾರಿಗೆ ಮುಟ್ಟಿದೆ ಅಂದ್ರೆ  ಮೇಲಿನ ಗೃಹ ಸಚಿವರಿಗೂ ಮುಟ್ಟಿದೆ ಎಂದರ್ಥ.


ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ


ಇದರ ತನಿಖೆಯನ್ನು ಯಾರು ಮಾಡಬೇಕು. ಸರ್ಕಾರದಿಂದ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೆಲ್ಲಕ್ಕೂ ಅಂತ್ಯ ಹಾಡುವ ಸಮಯ ಬಂದಿದೆ. ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಸಹ ಈ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ.


ಕೃಷ್ನಾ ನದಿ ನೀರಿನ ಬಳಕೆ ಕುರಿತಾಗಿ ಡಿಸೆಂಬರ್ 30 ರಂದು ವಿಜಯಪುರದಲ್ಲಿ ಹೋರಾಟ ಮಾಡ್ತೇವೆ. ಮಹಾದಾಯಿ ವಿಚಾರವಾಗಿ ಹುಬ್ಬಳ್ಳಿ‌ - ಧಾರವಾಡದಲ್ಲಿ ಜನವರಿ 2 ಕ್ಕೆ ಹೋರಾಟ ಮಾಡಲಾಗುವುದು.


ಚಿತ್ರದುರ್ಗದಲ್ಲಿ ಬೃಹತ್ ಜಾಥಾ


ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ಜಾಥಾ ಆಯೋಜನೆ ಮಾಡ್ತಿದ್ದೇವೆ ರಣದೀಪ್ ಸುರ್ಜೆವಾಲ ತಿಳಿಸಿದ್ದಾರೆ.

Published by:Mahmadrafik K
First published: