• Home
  • »
  • News
  • »
  • state
  • »
  • Satish Jarkiholi: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ! ರಣದೀಪ್ ಸುರ್ಜೇವಾಲ ಖಂಡನೆ

Satish Jarkiholi: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ! ರಣದೀಪ್ ಸುರ್ಜೇವಾಲ ಖಂಡನೆ

ಸತೀಶ್ ಜಾರಕಿಹೊಳಿ ಹೇಳಿಕೆಗೆ ರಣದೀಪ್ ಸುರ್ಜೇವಾಲ ಖಂಡನೆ

ಸತೀಶ್ ಜಾರಕಿಹೊಳಿ ಹೇಳಿಕೆಗೆ ರಣದೀಪ್ ಸುರ್ಜೇವಾಲ ಖಂಡನೆ

ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ವೇವಾಲ ಅವರೇ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ, ಸತೀಶ್ ಹೇಳಿಕೆಯನ್ನು ಖಂಡಿಸಿದ್ದಾರೆ.

  • Share this:

ಬೆಂಗಳೂರು: ಹಿಂದೂ ಧರ್ಮ (Hinduism) ಹಾಗೂ ಹಿಂದೂ (Hidnu) ಎಂಬ ಪದದ ಕುರಿತಂತೆ ಕಾಂಗ್ರೆಸ್ ನಾಯಕ, ಹಾಲಿ ಶಾಸಕ, ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. “ಹಿಂದೂ ಎನ್ನುವುದರ ಅರ್ಥ ಅಶ್ಲೀಲವಾಗಿದೆ” ಅಂತ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ (controversial statement) ನೀಡಿದ್ದರು. ಸತೀಶ್ ಹೇಳಿಕೆಗೆ ಬಿಜೆಪಿ ನಾಯಕರು, ಹಿಂದೂಪರ ಸಂಘಟನೆ ಸದಸ್ಯರು, ಜನಸಾಮಾನ್ಯರು ಕಿಡಿಕಾರಿದ್ದರು. ಇದೀಗ ಖುದ್ದು ಕಾಂಗ್ರೆಸ್ ನಾಯಕರೇ (Congress Leaders) ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ State Congress in-charge) ರಣದೀಪ್ ಸಿಂಗ್ ಸುರ್ವೇವಾಲ (Randeep Singh Survewala) ಅವರೇ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕಾರ ಅರ್ಹ. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ” ಅಂತ ಹೇಳಿದ್ದಾರೆ.


ಸತೀಶ್ ಜಾರಕಿಹೊಳಿ ಹೇಳಿದ್ದೇನು?


ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಬುದ್ಧ ಅಂಬೇಡ್ಕರ್ ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಅವರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.




“ಹಿಂದೂ ಎನ್ನುವುದೇ ಅಶ್ಲೀಲ ಅರ್ಥ”


ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದರು. ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ. ಅದನ್ನು ನೀವು ಕೇಳಿದ್ರೆ ನಾಚಿಕೆ ಪಡುತ್ತೀರಿ ಎಂದಿದ್ದಾರೆ. ಬೇಕಾದರೆ ಯಾರಾದರೂ ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಬಹುದು ಅಂತ ಅವರು ಹೇಳಿದ್ದರು.


ಇದನ್ನೂ ಓದಿ: Satish Jarkiholi Hindu Controversy: ಹಿಂದೂ ಪದದ ಅರ್ಥವೇ ಅಶ್ಲೀಲ! ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ


“ಹಿಂದೂ ಪದ ನಮ್ಮದು ಹೇಗೆ ಆಯಿತು ಗೊತ್ತಾಗಬೇಕು”


ಮುಂದುವರೆದು ಮಾತನಾಡಿದ ಸತೀಶ್ ಜಾರಕಿಹೊಳಿ, 'ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ ಎಂದಿದ್ದರು.




“ಎಲ್ಲಿಂದರೋ ಬಂದಿರುವ ಧರ್ಮವನ್ನು ಹೇರಲಾಗುತ್ತಿದೆ”


ಎಲ್ಲಿಂದಲೋ ಬಂದಿರೋ ಹಿಂದೂ ಧರ್ಮವನ್ನು ತಂದು ಭಾರತದಲ್ಲಿ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಅವರು ಹೇಳಿದ್ದರು. ಹಿಂದೂ ಧರ್ಮಕ್ಕೂ ನಮ್ಮ ಭಾರತಕ್ಕೂ ಏನು ಸಂಬಂಧ ಹೇಳಿ? ನಾವು ಹಿಂದೂಗಳು ಎಂದು ಬೀಗುವ ಇಂದಿನ ಯುವಕರು ತಮ್ಮ ವಾಟ್ಸಾಪ್ ಗಳಲ್ಲಿ, ಗೂಗಲ್ ನಲ್ಲಿ, ವಿಕಿಪೀಡಿಯಾದಲ್ಲಿ ಹಿಂದೂ ಎಂಬ ಪದದ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆ ಪದವನ್ನು ನಮ್ಮ ಮೇಲೆ ಏಕೆ ಬಲವಂತವಾಗಿ ಹೇರಿದರು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅದರ ನಿಜವಾದ ಅರ್ಥ ಗೊತ್ತಾದಾಗ, ಅವರಿಗೆ ಹಿಂದುತ್ವ ನಮ್ಮದಲ್ಲ ಎಂದು ತಿಳಿಯುತ್ತದೆ. ಆಗ ಅದನ್ನು ಪೂಜ್ಯನೀಯ ಭಾವದಿಂದ ನೋಡುವುದನ್ನು ಬಿಡುತ್ತಾರೆ ಅಂತ ತಮ್ಮ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.


ಇದನ್ನೂ ಓದಿ: Congress Twitter: ಕಾಂಗ್ರೆಸ್‌ಗೆ ಕೆಜಿಎಫ್‌ ಕಂಟಕ! ಅನುಮತಿ ಇಲ್ಲದೇ ಹಾಡು ಬಳಸಿದ್ದಕ್ಕೆ ಟ್ವಿಟರ್ ಅಕೌಂಟ್ ಬ್ಲಾಕ್!



ಸತೀಶ್ ಹೇಳಿಕೆಗೆ ರಣದೀಪ್ ಸಿಂಗ್ ಸುರ್ವೇವಾಲ ಖಂಡನೆ


ಇನ್ನು ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ವೇವಾಲ ಖಂಡಿಸಿದ್ದಾರೆ. ಹಿಂದೂ ಧರ್ಮ ಒಂದು ಜೀವನ ವಿಧಾನವಾಗಿದೆ. ಪ್ರತಿಯೊಂದು ಧರ್ಮ ಮತ್ತು ನಂಬಿಕೆಯನ್ನು ಗೌರವಿಸಿಕೊಂಡು ಕಾಂಗ್ರೆಸ್ ರಾಷ್ಟ್ರವನ್ನು ನಿರ್ಮಿಸಿದೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯು ಅತ್ಯಂತ ದುರದೃಷ್ಟಕರ ಮತ್ತು ತಿರಸ್ಕಾರ ಅರ್ಹವಾಗಿದೆ. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಅಂತ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

Published by:Annappa Achari
First published: