ರಣಂ ಚಿತ್ರದ ನಿರ್ಮಾಪಕ ಸೇರಿದಂತೆ ನಾಲ್ವರಿಗೆ ಜಾಮೀನು ಮಂಜೂರು

ಪ್ರಕರಣದ ವಿಚಾರಣೆ ನಡೆಸಿದ ದೇವನಹಳ್ಳಿ ಸೆಷನ್ಸ್ ಕೋರ್ಟ್, ನಿರ್ಮಾಪಕ ಕನಕಪುರ ಶ್ರೀನಿವಾಸ್ ಸೇರಿದಂತೆ ನಾಲ್ವರಿಗೆ ಜಾಮೀನು ನೀಡಿದೆ. 50 ಸಾವಿರ ನಗದು, 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಿದೆ. 'ರಣಂ' ತೆಲುಗಿನ ಖ್ಯಾತ ನಿರ್ದೇಶಕ ಸಮುದ್ರ ನಿರ್ದೇಶಿಸುತ್ತಿದ್ದ ಚಿತ್ರ. ಚಿರು ಸರ್ಜಾ, ಆ ದಿನಗಳು ಚೇತನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

G Hareeshkumar | news18
Updated:April 16, 2019, 5:00 PM IST
ರಣಂ ಚಿತ್ರದ ನಿರ್ಮಾಪಕ ಸೇರಿದಂತೆ ನಾಲ್ವರಿಗೆ ಜಾಮೀನು ಮಂಜೂರು
ನಿರ್ಮಾಪಕ ಕನಕಪುರ ಶ್ರೀನಿವಾಸ್
G Hareeshkumar | news18
Updated: April 16, 2019, 5:00 PM IST
ಬೆಂಗಳೂರು (ಏ.16) : ರಣಂ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ‌  ಸಿಲಿಂಡರ್ ಸ್ಫೋಟದಿಂದ ತಾಯಿ, ಮಗು ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ  ಬಾಗಲೂರು ಪೊಲೀಸರು ಐವರನ್ನ ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ದೇವನಹಳ್ಳಿ ಸೆಷನ್ಸ್ ಕೋರ್ಟ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಸೇರಿದಂತೆ ನಾಲ್ವರಿಗೆ ಜಾಮೀನು ನೀಡಿದೆ. 50 ಸಾವಿರ ನಗದು, 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಿದೆ.

'ರಣಂ' ತೆಲುಗಿನ ಖ್ಯಾತ ನಿರ್ದೇಶಕ ಸಮುದ್ರ ನಿರ್ದೇಶಿಸುತ್ತಿದ್ದ ಚಿತ್ರ. ಚಿರು ಸರ್ಜಾ, ಆ ದಿನಗಳು ಚೇತನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಾಗಲೂರಿನಲ್ಲಿ 'ರಣಂ' ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ, ಸಿಲಿಂಡರ್ ಸ್ಫೋಟಗೊಂಡು ತಾಯಿ, ಮಗಳು ಜೀವ ಕಳೆದುಕೊಂಡಿದ್ದರು.

ಘಟನೆ ಸಂಭವಿಸಿದ ತಕ್ಷಣ ಸ್ಥಳದಿಂದ ಚಿತ್ರತಂಡದವರು ಕಾಲ್ಕಿತ್ತಿದ್ದರು. ಸದ್ಯ ನಿರ್ದೇಶಕ ಸಮುದ್ರ, ನಿರ್ಮಾಪಕ ಕನಕಪುರ ಶ್ರೀನಿವಾಸ್ ಹಾಗೂ ಸಾಹಸ ನಿರ್ದೇಶಕ ವಿಜಯನ್ ಮೊಬೈಲ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡು, ತಲೆಮರೆಸಿಕೊಂಡಿದ್ದರು. ಮೂರು ದಿನ ಕಳೆದರೂ ಒಬ್ಬರ ಬಂಧನವೂ ಆಗದೇ ಇರುವುದನ್ನು ನೋಡಿ, ಮೃತರ ಕುಟುಂಬದವರು ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಪ್ರತಿಭಟನೆ ಮಾಡಿದ್ದರು.

ಇದನ್ನೂ ಓದಿ : 'ರಣಂ' ಚಿತ್ರೀಕರಣದ ಸೆಟ್​ನಲ್ಲಿ ಅವಘಡ: ಸಾಹಸ ನಿರ್ದೇಶಕನ ಸಹಾಯಕ ಸುಭಾಷ್ ಬಂಧನ

ಈ ಚಿತ್ರದಲ್ಲಿ ಆದಿನಗಳು ಚೇತನ್‌ ಸಾಮಾಜಿಕ ಹೋರಾಟಗಾರನ ಪಾತ್ರದಲ್ಲಿ ನಟಿಸಿದರೆ, ಚಿರಂಜೀವಿ ಸರ್ಜಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೂಲತಃ ತೆಲುಗು ನಿರ್ದೇಶಕರಾಗಿರುವ ಸಮುದ್ರ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ.

 
First published:April 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ