Ramzan in Haveri - ಮನೆಯಲ್ಲಿಯೇ ಪ್ರಾರ್ಥನೆ ಮೂಲಕ ರಂಜಾನ್ ಆಚರಣೆ

ಕೆಲ ಮುಸ್ಲಿಂ ಬಾಂಧವರು ಊಟೋಪಚಾರದ ಖರ್ಚುನ್ನು ಬಡವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.

ಹಾವೇರಿಯಲ್ಲಿ ರಂಜಾನ್ ಆಚರಣೆ

ಹಾವೇರಿಯಲ್ಲಿ ರಂಜಾನ್ ಆಚರಣೆ

  • Share this:
ಹಾವೇರಿ(ಮೇ 25): ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮಗಳ ಅನ್ವಯ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು  ಇಂದು ಸರಳವಾಗಿ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ಹಾವೇರಿ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ಸಹ ಸರಳವಾಗಿ ಆಚರಿಸಲಾಯಿತು.

ಕೆಲ ಮುಸ್ಲಿಂ ಬಾಂಧವರು ಊಟೋಪಚಾರದ ಖರ್ಚುನ್ನು ಬಡವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ರಂಜಾನ್ ತಿಂಗಳ ಉಪವಾಸ ಕೈಗೊಂಡಿದ್ದ ಮುಸ್ಲಿಂ ಬಾಂಧವರು ತಮ್ಮ ಕುಟುಂಬದವರೊಂದಿಗೆ ತಮ್ಮ ಮನೆಗಳಲ್ಲೇ ಶೃದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು.

ಇದನ್ನೂ ಓದಿ: WhatsApp Sticker – ವಾಟ್ಸಾಪ್​ನಲ್ಲಿ ಈದ್ ಶುಭಾಶಯದ ಸ್ಟಿಕರ್ ಮಾಡುವುದು ಹೀಗೆ

ಪ್ರತಿವರ್ಷ ಈ ಹಬ್ಬವನ್ನು ಹೊಸ ಬಟ್ಟೆ, ಫ್ಯಾನ್ಸಿ, ಪಾದರಕ್ಷೆಗಳ ಖರೀದಿ, ಇತ್ಯಾದಿ ಶಾಪಿಂಗ್ ಮೂಲಕ ಸಂಭ್ರಮದಿಂದ ಎದುರುಗೊಳ್ಳುತ್ತಿದ್ದರು. ಆದರೆ ಪ್ರಸಕ್ತ ವರ್ಷ ಕೋವಿಡ್-19 ಸೋಂಕು ಜನರನ್ನು ಸಂಕಷ್ಟಕ್ಕೆ ತಳ್ಳಿರುವ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಿದರು.

First published: