• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramya Tweet: ಡಿ.ಕೆ ಶಿವಕುಮಾರ್, ಎಂ. ಬಿ ಪಾಟೀಲ್ ಕುಚಿಕು ಕುಚಿಕು; ಫೋಟೋಗೆ ರಮ್ಯಾ ಕೂಲ್ ಟ್ವೀಟ್

Ramya Tweet: ಡಿ.ಕೆ ಶಿವಕುಮಾರ್, ಎಂ. ಬಿ ಪಾಟೀಲ್ ಕುಚಿಕು ಕುಚಿಕು; ಫೋಟೋಗೆ ರಮ್ಯಾ ಕೂಲ್ ಟ್ವೀಟ್

ಡಿ.ಕೆ ಶಿವಕುಮಾರ್​, ಎಂ. ಬಿ ಪಾಟೀಲ್​

ಡಿ.ಕೆ ಶಿವಕುಮಾರ್​, ಎಂ. ಬಿ ಪಾಟೀಲ್​

ಎಂ.ಬಿ ಪಾಟೀಲ್​, ಡಿಕೆ ಶಿವಕುಮಾರ್​ ಹೆಗಲ ಮೇಲೆ ಕೈ ಹಾಕಿ ನಗ್ತಾ ಮಾತಾಡಿದ್ದಾರೆ. ಈ ಫೋಟೋಗೆ ಗುಡ್​ ಜಾಬ್​ ಎಂದು ರಮ್ಯಾ ಟ್ವೀಟ್​ ಮಾಡಿದ್ದಾರೆ. ​ರಮ್ಯಾ ಟ್ವೀಟ್​ ಬಳಿಕ ಡಿಕೆಶಿ ಹಾಗೂ ರಮ್ಯಾ ನಡುವಿನ ಟ್ವೀಟ್​ ವಾರ್​ಗೆ ತೆರೆಬೀಳೋ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

  • Share this:

ಬೆಂಗಳೂರು (ಮೇ 13): ರಮ್ಯಾ (Ramya) ಹಾಗೂ ಡಿ.ಕೆ ಶಿವಕುಮಾರ್ (D.K Shivakumar)​ ನಡುವಿನ ಟ್ವೀಟ್​ ವಾರ್​ಗೆ ಸದ್ಯಕ್ಕೆ ಬ್ರೇಕ್​ ಬೀಳೋ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ (Rajasthan) ನಡೆಯುತ್ತಿರೋ ಚಿಂತನ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ಎಂಬಿ ಪಾಟೀಲ್​ (M.B Patil) ಹೆಗಲ ಮೇಲೆ ಕೈ ಹಾಕಿ ನಗುತ್ತಾ ಮಾತಾಡ್ತಿರೋ ಫೋಟೋ ನೋಡಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಒಳ್ಳೆಯ ಕೆಲಸ ಎಂದು ಟ್ವೀಟ್ (Tweet) ಮಾಡಿದ ರಮ್ಯಾ, ರಾಜ್ಯ ಕಾಂಗ್ರೆಸ್​ ಘಟಕದ ಉಸ್ತುವಾರಿ ರಣದೀಪ್​ ಸುರ್ಜೇ​ವಾಲಾ ಅವರಿಗೆ ಟ್ವೀಟ್​ ಕಾಮೆಂಟ್​ ಟ್ಯಾಗ್ (Tag)​ ಮಾಡಿದ್ದಾರೆ. ರಾಜಸ್ಥಾನದಲ್ಲಿ ಡಿ.ಕೆ ಶಿವಕುಮಾರ್​ ಹಾಗೂ ಎಂ.ಬಿ ಪಾಟೀಲ್​ ಮುನಿಸಿನ ಬಗ್ಗೆ ಕೂಡ ರಾಜ್ಯ ನಾಯಕರು (Leaders) ಚರ್ಚೆ ಮಾಡಿದ್ದಾರೆ. ಇದನ್ನ ಮುಂದುವರಿಸೋದು ಬೇಡ ಎಂದು ಇಬ್ಬರಿಗೂ ಹಿರಿಯ ನಾಯಕರು ಸಲಹೆ ನೀಡಿದ್ದಾರೆ.


ಯಾರು ಏನೇ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ


ಡಿ.ಕೆ ಶಿವಕುಮಾರ್​ ವಿರುದ್ಧ ರಮ್ಯಾ ಟ್ವೀಟ್​ ವಿಚಾರಕ್ಕೆ ಸಂಬಂಧಿಸಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿದ್ದಾರೆ. ಈ ವಿಚಾರದ ಬಗ್ಗೆ ರಾಜಸ್ಥಾನದಲ್ಲೂ ರಾಜ್ಯ ನಾಯಕರು ಚರ್ಚೆ ನಡೆಸಿದ್ದಾರೆ. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ವೇಳೆ ಡಿಕೆ ಶಿವಕುಮಾರ್​ ಹಾಗೂ ಎಂಬಿ ಪಾಟೀಲ್​ ಅವರಿಗೆ ಇದನ್ನು ಮುಂದುವರಿಸೋದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.


ಇದನ್ನು ಓದಿ: ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್



ಗುಡ್​​ ಜಾಬ್​ ಎಂದು ರಮ್ಯಾ ಟ್ವೀಟ್​


ರಾಜಸ್ಥಾನದಲ್ಲಿ ನಡೀತಿರೋ ಕಾಂಗ್ರೆಸ್​ ಚಿಂತನ ಶಿಬರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಹ ಭಾಗಿಯಾಗಿದ್ರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ಎಂ.ಬಿ ಪಾಟೀಲ್​ ಮುಖಾಮುಖಿ ಆಗಿದ್ದಾರೆ. ಈ ವೇಳೆ ಎಂ.ಬಿ ಪಾಟೀಲ್​, ಡಿಕೆ ಶಿವಕುಮಾರ್​ ಹೆಗಲ ಮೇಲೆ ಕೈ ಹಾಕಿ ನಗ್ತಾ ಮಾತಾಡಿದ್ದಾರೆ. ಈ ಫೋಟೋಗೆ ಗುಡ್​ ಜಾಬ್​ ಎಂದು ರಮ್ಯಾ ಟ್ವೀಟ್​ ಮಾಡಿದ್ದಾರೆ. ​ರಮ್ಯಾ ಟ್ವೀಟ್​ ಬಳಿಕ ಡಿಕೆಶಿ ಹಾಗೂ ರಮ್ಯಾ ನಡುವಿನ ಟ್ವೀಟ್​ ವಾರ್​ಗೆ ತೆರೆಬೀಳೋ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.


ರಮ್ಯಾ ಟ್ವೀಟ್​ ಬಗ್ಗೆ ಆರ್​ ಅಶೋಕ್​ ವ್ಯಂಗ್ಯ


ದಿಲ್ಲಿಯಲ್ಲಿ ಹೇಗೆ ಕಾಂಗ್ರೆಸ್ ಹಿರಿಯ ಮುಖಂಡರ ಜಿ-23 ಪ್ರತ್ಯೇಕ ಬಣ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕೆ-23 ಬಣಕ್ಕೆ ನಟಿ ರಮ್ಯ ಮುಹೂರ್ತ ಫಿಕ್ಸ್ ಮಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.


ಕರ್ನಾಟಕದಲ್ಲಿ ಕೆ-23 ಭಿನ್ನಮತೀಯರ ಗ್ಯಾಂಗ್


ಕಾಂಗ್ರೆಸ್‌ ನಾಯಕರುಗಳ ಮಧ್ಯೆದ ಟ್ವಿಟರ್‌ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೊಂದಲದ ಗೂಡಾಗಿದೆ. ಹೊಂದಾಣಿಕೆ ಇಲ್ಲ. 224 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಆಗಲೇ ಟವೆಲ್ ಹಾಕಲು ಶುರು ಮಾಡಿದ್ದಾರೆ. ಆ ಟವೆಲ್ ಹಾಕಲು ಹೊರಟಿರುವುದರಿಂದಲೇ ಜಗಳ ಶುರುವಾಗಿದೆ. ಒಂದು ಕಡೆ ಜಮೀರ್ ಬಣ, ಇನ್ನೊಂದು ಕಡೆ ರಮ್ಯಾ ಎಂದು ಟೀಕಿಸಿದರು.


ಇದನ್ನೂ ಓದಿ: DKS v/s Ashwath: ನನ್ನನ್ನು ಟಚ್​ ಮಾಡಿ ಅವ್ರೇ ಕೆಟ್ರು; ರಮ್ಯಾ ಮಾತಿನಿಂದ ನನಗೆ ಖುಷಿಯಾಗಿದೆ- ಅಶ್ವತ್ಥ ನಾರಾಯಣ


ದಿಲ್ಲಿಯಲ್ಲಿ ಕಾಂಗ್ರೆಸ್​ನಲ್ಲಿ ಜಿ-23 ಭಿನ್ನಮತೀಯರ ಗ್ಯಾಂಗ್ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕೆ-23 ಭಿನ್ನಮತೀಯರ ಗ್ಯಾಂಗ್ ಪ್ರಾರಂಭವಾಗುತ್ತಿದೆ. ಅದಕ್ಕೆ ಕುಮಾರಿ ರಮ್ಯಾ ಮುಹೂರ್ತ ಇಡಲಿದ್ದಾರೆ. ರಮ್ಯಾ, ಎಂ.ಬಿ.ಪಾಟೀಲ್ ಪರ ಒಂದು ಟೀಂ, ಡಿಕೆಶಿ ನಲಪಾಡ್ ಪರ ಮತ್ತೊಂದು ಟೀಂ ಆಗಿದೆ. ಕಾಂಗ್ರೆಸ್​ನ ಗುಂಪುಗಳ ಬಯಲಾಟ ಇದು. ಆ ಗುಂಪುಗಳ ಬಯಲಾಟ ಈಗ ಬೀದಿಗೆ ಬಂದಿದೆ ಎಂದು ಸಚಿವ ಆರ್​ ಅಶೋಕ್​ ಹೇಳಿದ್ದಾರೆ.

First published: