Ramya: ಎಂಎಲ್‌ಎ, ಎಂಪಿಗಳ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಿಂದ ಬೆಂಗಳೂರು ಮುಳುಗುತ್ತಿದೆ! ಜನಪ್ರತಿನಿಧಿಗಳ ವಿರುದ್ಧ ರಮ್ಯಾ ಕಿಡಿ

ವೋಟ್ ಮಾಡುವಾಗ ಎಲ್ಲಾ ಯೋಚಿಸಬೇಕು, ವೋಟ್‌ಗೂ ಮುನ್ನ ಸಂಪೂರ್ಣ ತಿಳಿದುಕೊಳ್ಳಬೇಕು. ಉತ್ತಮ ಕೆಲಸ ಮಾಡುವ ವ್ಯಕ್ತಿಗಳ ಆಯ್ಕೆ ಇರಬೇಕು ಒತ್ತುವರಿಯಿಂದ ಈ ರೀತಿಯ ಪರಿಸ್ಥಿತಿ ಬಂದಿದೆ ಎಂದು ರಮ್ಯಾ ಹೇಳಿದ್ದಾರೆ.

ರಮ್ಯಾ, ಬೆಂಗಳೂರು ಮಳೆ ಅವಾಂತರ

ರಮ್ಯಾ, ಬೆಂಗಳೂರು ಮಳೆ ಅವಾಂತರ

  • Share this:
ಬೆಂಗಳೂರಿನಲ್ಲಿ (Bengaluru) ಮಳೆ ಸೃಷ್ಟಿಸಿರೋ ಅವಾಂತರ ಹಾಗೂ ಅವ್ಯವಸ್ಥೆ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ನಿನ್ನೆ (ಆಗಸ್ಟ್​​ 06)ರಂದು ಕಿಡಿಕಾರಿದ್ರು. ಇದೀಗ MLA, MPಗಳ ಬಗ್ಗೆ ರಮ್ಯಾ ಟ್ವೀಟ್​ (Ramya) ಮಾಡಿದ್ದು ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರು ದಿನೇ ದಿನೇ ಮುಳುಗಲು ಏನು ಕಾರಣ ಎನ್ನುವುದನ್ನು ತಿಳಿಸೋ ಪ್ರಯತ್ನ ಮಾಡಿದ್ದಾರೆ. ಮಳೆಯಿಂದ ಸೃಷ್ಟಿ ಆಗಿರೋ ಅವಾಂತರಕ್ಕೆ ಶಾಸಕರು ಹಾಗೂ ಜನಪ್ರತಿನಿಧಿಗಳೇ ಕಾರಣ ಎಂದು ರಮ್ಯಾ ಸರಣಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ. 

ಶಾಸಕರಿಂದ ಮಿತಿ ಮೀರಿದ ರಿಯಲ್ ಎಸ್ಟೇಟ್​ ಬ್ಯುಸಿನೆಸ್

ಮಿತಿಮೀರಿದ ರಿಯಲ್ ಎಸ್ಟೇಟ್​ ಬ್ಯುಸಿನೆಸ್​ನಿಂದಲೇ ಬೆಂಗಳೂರು ಮುಳುಗುತ್ತಿದೆ ಎಂದು ಟ್ವೀಟ್ ಮಾಡಿರೋ ರಮ್ಯಾ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಎಷ್ಟು ಮಂದಿ ಎಂಎಲ್‌ಎ ಹಾಗೂ ಎಂಪಿಗಳು ರಿಯಲ್‌ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿದೆಯೇ? 28 ಮಂದಿ ಎಂಎಲ್‌ಎಗಳಲ್ಲಿ 26 ಮಂದಿ ಬಳಿ ರಿಯಲ್‌ ಎಸ್ಟೇಟ್ ಬ್ಯುಸಿನೆಸ್‌ ಇದೆ ಎಂದು ಯಾರೋ ಹೇಳಿದ್ರು. ಅಂತ ರಮ್ಯಾ ಟ್ವೀಟ್ ಮಾಡಿದ್ದಾರೆ.

How many MLA’s and MP’s of Karnataka have real estate business’ would you know? Someone said 26 out of 28 mla’s are into real estate 😵‍💫 That’s a staggering number!

— Divya Spandana/Ramya (@divyaspandana) September 6, 2022



ಯೋಚನೆ ಮಾಡಿ ವೋಟ್ ಹಾಕಿ

ಈ 26 ರಿಯಲ್‌ ಎಸ್ಟೇಟ್ ಎಂಎಲ್‌ಎಗಳನ್ನು ಆಯ್ಕೆ ಮಾಡಿದ್ದು ಜನರೇ. ಇವರೆಲ್ಲರೂ ಜನರ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಮೊದಲು ಮತ ಚಲಾಯಿಸಿ. ಹಾಗೇ ಯೋಚನೆ ಮಾಡಿ ವೋಟ್ ಹಾಕಿ. ಕೆಲವರು ಮತವನ್ನೇ ಚಲಾಯಿಸುವುದಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಜನರು ವೋಟ್ ಮಾಡುವುದಿಲ್ಲ. ಆ ಮೇಲೆ ನಾವು ದೋಷಿಸಲು ಆರಂಭಿಸುತ್ತೇವೆ. ಎಂದು ಟ್ವೀಟ್ ಮಾಡಿದ್ದಾರೆ ರಮ್ಯಾ.





ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾಗ್ತಾರೆ

ರಾಜಕೀಯದಲ್ಲಿ ದುಡ್ಡಿದ್ದವರಿಗೆ, ರಿಯಲ್ ಎಸ್ಟೇಟ್​ನಲ್ಲಿದ್ದವರಿಗೆ ಟಿಕೆಟ್ ಸಿಕ್ತಿದೆ.  ಶಾಸಕ ಸ್ಥಾನಕ್ಕೆ ಸ್ಪರ್ಧಿಸೋರು 40 ಲಕ್ಷ ಖರ್ಚು ಮಾಡಲು ಅವಕಾಶ
ಆದ್ರೆ ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾಗ್ತಾರೆ. ಬೆಂಗಳೂರಿನ ಇಂದಿನ ಸ್ಥಿತಿ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.





ನ್ಯೂಸ್ ​18 ಕನ್ನಡದ ಜೊತೆ ರಮ್ಯಾ ಮಾತು

ಇನ್ನು ನ್ಯೂಸ್ ​18 ಕನ್ನಡದ ಜೊತೆ ನಟಿ ರಮ್ಯಾ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಬೆಂಗಳೂರಿನ ಈ ಪರಿಸ್ಥಿತಿ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ಹಾಗೇ ಜನಪ್ರತಿನಿಧಿಗಳ ನಡೆಗೆ ಆಕ್ರೋಶವೂ ವ್ಯಕ್ತಪಡಿಸಿದ್ದಾರೆ. ಬರೀ ರಾಜಕಾರಣಿಗಳನ್ನ ದೂರಿದರೆ ತಪ್ಪಾಗುತ್ತೆ.  ಬೆಂಗಳೂರಿನ ಈ ಪರಿಸ್ಥಿತಿಗೆ ಜನರೂ ಕಾರಣನೇ ಎಂದ್ರು.

ಇದನ್ನೂ ಓದಿ: Ramya: ಬೆಂಗಳೂರಿನಲ್ಲಿ ಮಳೆಯಿಂದಾದ ಅವಾಂತರಕ್ಕೆ ನಟಿ ರಮ್ಯಾ ಕಿಡಿ, ಇವರಿಗೆ ನನ್ನ ಮತ ಎಂದ ಮೋಹಕ ತಾರೆ!

ವೋಟ್ ಮಾಡುವಾಗ ಎಲ್ಲಾ ಯೋಚಿಸಬೇಕು, ವೋಟ್‌ಗೂ ಮುನ್ನ ಸಂಪೂರ್ಣ ತಿಳಿದುಕೊಳ್ಳಬೇಕು. ಉತ್ತಮ ಕೆಲಸ ಮಾಡುವ ವ್ಯಕ್ತಿಗಳ ಆಯ್ಕೆ ಇರಬೇಕು ಒತ್ತುವರಿಯಿಂದ ಈ ರೀತಿಯ ಪರಿಸ್ಥಿತಿ ಬಂದಿದೆ. ಮನೆಗಳೇ ಮುಳುಗುತ್ತಿದ್ರೆ ಜನ ಎಲ್ಲಿಗೆ ಹೋಗ್ಬೇಕು?. ಎಲೆಕ್ಷನ್ ಬಂದಾಗ ಮಾತ್ರ ಜನಪ್ರತಿನಿಧಿಗಳು ಬರ್ತಾರೆ ಹಾಗಾಗಿ, ಜನರು ಮಾಡುವ ಆಯ್ಕೆ ಸರಿಯಾಗಿರಬೇಕು. ಈ ಪಕ್ಷ ಆ ಪಕ್ಷ ಅಂತ ನಾನು ದೂರೋದಿಲ್ಲ. ಎಲ್ಲರೂ ರಿಯಲ್‌ ಎಸ್ಟೇಟ್‌ನಲ್ಲಿ ಇದ್ದಾರೆ ಹಾಗಾಗಿ ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸಲ್ಲ ಎಂದು ರಮ್ಯಾ ಹೇಳಿದ್ರು.
Published by:Pavana HS
First published: