ಮತ್ತೆ ಬಣ್ಣ ಹಚ್ಚುತ್ತಾರಾ ಸ್ಯಾಂಡಲ್​ವುಡ್ ಕ್ವೀನ್..? ಟ್ವಿಟರ್​ನಲ್ಲಿ ಸುಳಿವು ನೀಡಿದ ರಮ್ಯಾ


Updated:July 14, 2018, 1:26 PM IST
ಮತ್ತೆ ಬಣ್ಣ ಹಚ್ಚುತ್ತಾರಾ ಸ್ಯಾಂಡಲ್​ವುಡ್ ಕ್ವೀನ್..? ಟ್ವಿಟರ್​ನಲ್ಲಿ ಸುಳಿವು ನೀಡಿದ ರಮ್ಯಾ

Updated: July 14, 2018, 1:26 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಜು.14): ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರೆದರೆ ಮಾಜಿ ಸಂಸದೆ ರಮ್ಯಾ ಸಿನಿಮಾ ಕಡೆ ಹೆಜ್ಜೆ ಹಾಕುತ್ತಾರಾ? ಎಂಬ ಲೆಕ್ಕಾಚಾರ ಶುರುವಾಗಿದೆ. ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾದರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟು ಕೊಡುವ ಮಾತುಕತೆ ನಡೆಯುತ್ತಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ರಮ್ಯಾಗೆ ಈ ಬಾರಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಎಐಸಿಸಿ ಸೋಷಿಯಲ್ ಮೀಡಿಯಾದಲ್ಲಿ ತೊಡಗಿಸಿಕೊಂಡಿರುವ ರಮ್ಯಾ. ದೆಹಲಿ ಮಟ್ಟದಲ್ಲಿ ಪಕ್ಷವನ್ನ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಹೀಗಾಗಿ, ರಮ್ಯಾ ಪರ ಕಾಂಗ್ರೆಸ್ ಹೈಕಮಾಂಡ್ ನಿಲ್ಲುತ್ತಾ..? ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ, ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಮೈತ್ರಿ ಬೇಕಾದರೆ ಮಂಡ್ಯ ಬಿಟ್ಟು ಕೊಡಿ ಎಂದು ಜೆಡಿಎಸ್ ಪಟ್ಟು ಹಿಡಿದಿದ್ದು, ಈ ಬೆಳವಣಿಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಇರಿಸು ಮುರುಸು ಉಂಟುಮಾಡಿದ್ದು,  ಶಾಸಕ ಚೆಲುವರಾಯಸ್ವಾಮಿ ಸಹ ಮಂಡ್ಯ ಲೋಕಸಭಾ ಚುನಾವಣೆ ಮೈತ್ರಿಗೆ ಆಕ್ರೋಶ ಹೊರಹಾಕಿದ್ದರು. ಒಂದೊಮ್ಮೆ ಜೆಡಿಎಸ್ ಒತ್ತಾಯಕ್ಕೆ ಮಣಿದು ಮಂಡ್ಯ ಬಿಟ್ಟುಕೊಟ್ಟರೆ ರಮ್ಯಾ ರಾಜಕೀಯಕ್ಕೆ ಬಹುತೇಕ ಗುಡ್ ಬೈ ಹೇಳಬೇಕಾಗುತ್ತದೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ರಮ್ಯಾ ಸುಳಿವು ನೀಡಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ ನಾರಾಯಣ ಸಿನಿಮಾ ಟ್ರೈಲರ್ ಗೆ ಟ್ವೀಟ್ ಮಾಡಿದ್ದು, 2019ರ ನಂತರ ಸಿನಿಮಾಗೆ ಎಂಟ್ರಿಕೊಡುವುದಾಗಿ ಹೇಳಿದ್ದಾರೆ.


Loading...

ನಾನು ನಿಮ್ಮ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಕನ್ನಡ ಸಿನಿಮಾಗಳಿಗೆ ನೀವು ಸರಿಯಾದ ವ್ಯಕ್ತಿ. ಹೊಸ ಸಿನಿಮಾಗಳನ್ನು ಕನ್ನಡ ಜನತೆಗೆ ನೀಡುವ ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ನಿಮ್ಮ ಸಿನಿಮಾಗೆ ಶುಭವಾಗಲಿ ಎಂದು ರಮ್ಯಾ ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತ್ ಶೆಟ್ಟಿ, ನೀವು ಸ್ಯಾಂಡಲ್ ವುಡ್ ಕ್ವೀನ್ ಮತ್ತೆ ನಿಮ್ಮನ್ನ ತೆರೆಮೇಲೆ ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.ರಕ್ಷಿತ್ ಶೆಟ್ಟಿ ಟ್ವೀಟ್​ಗೆ ಸ್ಪಂದಿಸಿರುವ ರಮ್ಯಾ 2019ರ ನಂತರ ಎನ್ನುವ ಮೂಲಕ ಚಿತ್ರರಂಗಕ್ಕೆ ವಾಪಸ್ ಆಗುವ ಸುಳಿವು ನೀಡಿದ್ದಾರೆ.

ಒಟ್ಟಿನಲ್ಲಿ ಅವರ ಟ್ವೀಟ್ ಗಮನಿಸಿದರೆ ಮಂಡ್ಯದಿಂದ ತಮ್ಮ ಸ್ಪರ್ಧೆ ಕಷ್ಟ ಎಂಬ ಸುಳಿವು ಸಿಕ್ಕಂತಿದೆ. ಹೀಗಾಗಿಯೇ ಅವರು ಕಾದುನೋಡುವ ತಂತ್ರಕ್ಕೆ ಮೊರೆಹೋದಂತಿದೆ. ಒಂದೊಮ್ಮೆ ಮಂಡ್ಯದಿಂದ ಟಿಕೆಟ್ ಸಿಗದಿದ್ದರೆ ಮತ್ತೆ ಚಿತ್ರರಂಗದತ್ತ ಮುಖಮಾಡುವ ಚಿಂತನೆಯಲ್ಲಿದ್ದಾರೆ ರಮ್ಯಾ.

 

 

 
First published:July 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ