• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar​ ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ

DK Shivakumar​ ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ

ರಮ್ಯಾ- ಡಿಕೆ ಶಿವಕುಮಾರ್​​

ರಮ್ಯಾ- ಡಿಕೆ ಶಿವಕುಮಾರ್​​

ಇದೊಂದು ಸೌಹರ್ದಯುತ ಭೇಟಿ ಆಗಿರಬಹುದು. ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ

  • Share this:

ಬೆಂಗಳೂರು (ಮೇ. 11): ಸಚಿವ ಅಶ್ವತ್ಥ್​ ನಾರಾಯಣ್​ (Ashwath Narayan)  ಮಾಜಿ ಸಚಿವ ಎಂಬಿ ಪಾಟೀಲ್ (MB Patil)​ ಭೇಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)  ಹೇಳಿಕೆಗೆ ಮಾಜಿ ಸಂಸದೆ, ನಟಿ ರಮ್ಯಾ (Ramya) ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಕ್ಷಣೆಗಾಗಿ ಅಶ್ವತ್ಥ್​ ನಾರಾಯಣ್​ ಎಂಬಿ ಪಾಟೀಲ್​ ಮೊರೆ ಹೋಗಿರುವ ಸಾಧ್ಯತೆ ಇದೆ ಎಂಬ ತಮ್ಮ ಪಕ್ಷದ ನಾಯಕರ ಹೇಳಿಕೆಗೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಎಂಬಿ ಪಾಟೀಲ್​ ಪರ ಬ್ಯಾಟಿಂಗ್ ನಡೆಸಿರುವ ಅವರು, ಇದೊಂದು ಸೌಹರ್ದಯುತ ಭೇಟಿ ಆಗಿರಬಹುದು. ಡಿ.ಕೆ. ಶಿವಕುಮಾರ್ ಅವರು ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.


ಎಂಬಿ ಪಾಟೀಲ್​ ಪರ ರಮ್ಯಾ ಬ್ಯಾಟಿಂಗ್​​​


ಈ ಸಂಬಂಧ ಟ್ವೀಟ್​ ಮಾಡಿರುವ ಮಾಜಿ ಸಂಸದೆ ರಮ್ಯಾ, ಪಕ್ಷಾತೀತವಾಗಿ ನಾಯಕರು ಭೇಟಿಯಾಗುವುದು ಹೊಸದಲ್ಲ. ಪಕ್ಷ ಭೇದ ಮರೆತು ಅನೇಕ ನಾಯಕರು ಒಟ್ಟಿಗೆ ಸಮಾರಂಭಗಳಿಗೆ ಹೋಗುವುದು ಸಹಜ.  ಬೇರೆ ಬೇರೆ ಪಕ್ಷಗಳಲ್ಲಿರುವ ನಾಯಕರು ಎರಡೂ ಕುಟುಂಬಗಳ ನಡುವೆ ಮದುವೆ ಸಂಬಂಧ ಬೆಳೆಸಿರುವ ಉದಾಹರಣೆ ಇದೆ. ಇಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್​​ ಅವರ ಹೇಳಿಕೆ ನನಗೆ ಆಶ್ವರ್ಯ ಮೂಡಿಸಿದೆ.  ಎಂಬಿ ಪಾಟೀಲ್​ ಕಟ್ಟಾ ಕಾಂಗ್ರೆಸ್ಸಿಗ. ಚುನಾವಣಾ ಹೊತ್ತಲ್ಲಿ ಈ ರೀತಿ ಹೇಳಿಕೆ ಸಲ್ಲ ಎಂದಿರುವ ಅವರು ನಾವು ಒಟ್ಟಿಗೆ ಚುನಾವಣೆ ಎದುರಿಸಬೇಕು ಅಲ್ಲವೇ ಎನ್ನುವ ಮೂಲಕ ಚುನಾವಣೆ ಹೊತ್ತಲ್ಲಿ ಪಕ್ಷದ ನಾಯಕರೊಳಗೆ ಈ ರೀತಿ ಭಿನ್ನಾಭಿಪ್ರಾಯ ಇರುವುದು ಬೇಡ ಎಂಬ ಎಂಬ ಅರ್ಥದಲ್ಲಿ ಟ್ವೀಟ್​ ಮಾಡಿದ್ದಾರೆ



ಪಕ್ಷಕ್ಕೆ ಮುಜುಗರ ಮೂಡಿಸಿದ ಡಿಕೆ ಶಿವಕುಮಾರ್​ ಹೇಳಿಕೆ
ಈಗಾಗಲೇ ಡಿಕೆ ಶಿವಕುಮಾರ್ ಹೇಳಿಕೆ ಕಾಂಗ್ರೆಸ್​ಗೆ ಮುಜಗರ ಉಂಟುಮಾಡಿದೆ. ಈ ಕುರಿತು ಮಾತನಾಡಿದ್ದ ಎಂಬಿ ಪಾಟೀಲ್​, ಡಿಕೆಶಿ ಈ ರೀತಿ ಹೇಳುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸುತ್ತೇನೆ ಎಂದಿದ್ದರು. ಈ ವಿಚಾರದ  ಮೂಲಕ ಪಕ್ಷದ ನಾಯಕರಲ್ಲೇ ಭಿನ್ನಾಭಿಪ್ರಾಯ ಎದುರಾಗಿದೆ ಎಂಬುದು ತೋರುವಂತೆ ಆಗಿದೆ. ಈ ಹಿನ್ನಲೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಇಬ್ಬರು ನಾಯಕರಿಗೂ ಕೂಡ ಸೂಚನೆ ನೀಡಲಾಗಿದೆ.


ಇದನ್ನು ಓದಿ: ಕಬ್ಬಿನ ಹಣ ಬಾಕಿ ಪಾವತಿ: ರಾಜಕೀಯ ಪಕ್ಷದ ಮಾಲೀಕರು ಎಂದು ನೋಡದೇ ಎಲ್ಲರ ವಿರುದ್ಧ ಕ್ರಮ


ಜಮೀರ್​ ಪ್ರಾರ್ಥನೆ ವಿಚಾರಕ್ಕೆ ಪ್ರತಿಕ್ರಿಯಿಸದ ಡಿಕೆ ಶಿ
ಇನ್ನು ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಪ್ರತಿಯೊಬ್ಬರು ಪ್ರಾರ್ಥಿಸಿ ಎಂಬ ಜಮೀರ್ ಹೇಳಿಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರು, ಜಮೀರ್ ಹೇಳಿಕೆ ವೈಯುಕ್ತಿಕವಾದುದು. ಕಾಂಗ್ರೆಸ್​​​ನಲ್ಲಿ ವೈಯುಕ್ತಿಕ ಹೇಳಿಕೆಗೆ ಅವಕಾಶವಿದೆ. ಸಿಎಂ ಯಾರು ಅನ್ನೋದನ್ನು ಜಮೀರ್ ತೀರ್ಮಾನಿಸಲ್ಲ. ನಮ್ಮ ಪಕ್ಷದ ಶಾಸಕರು ಸಿಎಂ ಯಾರೆಂದು ಹೇಳುತ್ತಾರೆ. ಹೈಕಮಾಂಡ್ ಅದನ್ನ ಪುರಸ್ಕರಿಸುತ್ತದೆ. ಜಮೀರ ಅಹ್ಮದ್​ ಅವರು ಪ್ರಾರ್ಥನೆ ಮಾಡಿ ಎಂದಿದ್ದಾರೆ. ನೀವು ಪ್ರಾರ್ಥನೆ ಮಾಡಿ ಎಂದರು


ಪ್ರಭು ಚೌಹಾಣ್​ ವಿರುದ್ದ ಕ್ರಮಕ್ಕೆ ಒತ್ತಾಯ


ಸುದ್ದಿಗೋಷ್ಠಿಯಲ್ಲಿ ಮುಂದುವರೆದು ಮಾತನಾಡಿದ ಡಿಕೆ ಶಿವಕುಮಾರ್​, ಪ್ರಭು ಚೌಹಾಣ್ ಕೂಡ ಸುಳ್ಳು ದಾಖಲೆ ನೀಡಿದ್ದರು. ಸರ್ಕಾರದ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ‌ಮಾಡಿ ರವೀಂದ್ರನಾಥ ಮನವಿ ಕೊಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಅವರ ಜಾತಿ ಎಸ್ಸಿಗೆ ಸೇರಲ್ಲ. ಹಾಗಾಗಿ ಅವರ ಸರ್ಟಿಫಿಕೇಟ್ ಪರಿಶೀಲಿಸಬೇಕು. ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.


ಇದನ್ನು ಓದಿ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ 1.53 ಕೋಟಿ ದೇಣಿಗೆ ಸಂಗ್ರಹ


ಸುಳ್ಳು ಜಾತಿ ಪ್ರಮಾ ಸಲ್ಲಿಕೆ ವಿಚಾರದಲ್ಲಿ ಯಾರೇ ಆದ್ರೂ ಕಾನೂನು ಕ್ರಮಜರುಗಿಸಬೇಕು. ಸುಳ್ಳು ದಾಖಲೆ ನೀಡಿದ 1097 ಕೇಸ್​​​ಗಳು ಇವೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ನ್ಯಾಯದ ಪರ ಹೋರಾಟಮಾಡುವವರನ್ನು ಬಿಡಬೇಡಿ. ಇಂತಹ ಅಧಿಕಾರಿಗಳನ್ನ ಬಿಡಬೇಡಿ ಎಂದರು

First published: