ದೇಶ ದ್ರೋಹ ಪ್ರಕರಣಕ್ಕೂ ಜಗ್ಗದ ರಮ್ಯಾ; ಮತ್ತೆ ಮೋದಿಗೆ ಅವಮಾನ  

news18
Updated:September 27, 2018, 1:13 PM IST
ದೇಶ ದ್ರೋಹ ಪ್ರಕರಣಕ್ಕೂ ಜಗ್ಗದ ರಮ್ಯಾ; ಮತ್ತೆ ಮೋದಿಗೆ ಅವಮಾನ  
ರಮ್ಯಾ
  • News18
  • Last Updated: September 27, 2018, 1:13 PM IST
  • Share this:
ನ್ಯೂಸ್​ 18 ಕನ್ನಡ

ಲಕ್ನೋ (ಸೆ.27): ಪ್ರಧಾನಿಯನ್ನು 'ಕಳ್ಳ; ಎಂದು ಟ್ವಿಟರ್​ನಲ್ಲಿ ಅವಹೇಳನ ಮಾಡಿದ ರಮ್ಯಾ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಾಗಿತ್ತು. ಆದರೆ, ಇದಕ್ಕೆ ಸೊಪ್ಪು ಹಾಕದ  ಕಾಂಗ್ರೆಸ್​​ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮಾತ್ರ ತನ್ನ ನಿಲುವಿಗೆ ಬದ್ಧರಾಗಿದ್ದಾರೆ.

ತಮ್ಮ ವಿರುದ್ಧ ಎಫ್​ಐಆರ್​  ದಾಖಲಾಗಿ, ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಟೀಕೆಗೆ ಗುರಿಯಾಗಿದ್ದರು. ಆದರೆ ಇದಕ್ಕೆ ಜಗ್ಗದ ರಮ್ಯಾ ಮತ್ತೊಮ್ಮೆ 'ಪ್ರಧಾನಿ ಕಳ್ಳ' ಎಂದು  ಟ್ವೀಟ್​ ಮಾಡುವ ಮೂಲಕ ಟೀಕಾಕಾರರ ಬೆದರಿಕೆಗೆ  ಬೆದರುವುದಿಲ್ಲ ಎಂದು ತೋರಿಸಿದ್ದಾರೆ.

"ನನ್ನ ಟ್ವೀಟ್​ಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಇದೇ ರೀತಿ ನಿಮ್ಮ ಸಹಕಾರವಿರಲಿ. ಮುಂದೆ ಕೂಡ ಇದೇ ಶೈಲಿಯಲ್ಲಿ ಟ್ವೀಟ್​ ಮುಂದುವರೆಸುತ್ತೇನೆ. ಭಾರತ ದೇಶದ್ರೋಹ ಕಾನೂನಿನಿಂದ ದೂರವಿರಬೇಕು. ಈ ಕಾನೂನು ಅನಾದಿಕಾಲದಿಂದ ಇದ್ದು, ಇದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ" ಎಂದು ಟ್ವೀಟ್​ ಮಾಡಿದ್ದಾರೆ.ಅಷ್ಟೇ ಅಲ್ಲದೇ,  ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ ವಕೀಲರನ್ನು ಪರೋಕ್ಷವಾಗಿ ಉಲ್ಲೇಖಿಸಿ  'ಪ್ರಧಾನಿ ಕಳ್ಳ' ಎಂಬುದನ್ನು ಹೇಳಲು ರಮ್ಯಾ ಮರೆತಿಲ್ಲ.

ಪ್ರಧಾನಿ ಮೋದಿಯನ್ನು 'ಕಳ್ಳ' ಎಂದ ರಮ್ಯಾ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲು

ರಮ್ಯಾ ಅವರ ಈ ಟ್ವೀಟ್​ ವಿರುದ್ಧ ಸಾಮಾಜಿಕ ಕಾರ್ಯಕರ್ತ, ವಕೀಲರಾದ ಸೈಯ್ಯದ್​ ರಿಜ್ವಾನ್ ಉತ್ತರ ಪ್ರದೇಶದ ಗೋಮತಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ ಸೆಕ್ಷನ್​ 67 ಮತ್ತು ದೇಶದ್ರೋಹ (ಸೆಕ್ಷನ್​ 124ಎ) ಆಧಾರದ ಮೇಲೆ ರಮ್ಯಾ ವಿರುದ್ದ ದೂರು ದಾಖಲಾಗಿದೆ.
First published: September 27, 2018, 1:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading