Ramya on Twitter - ವರ್ಷದ ಬಳಿಕ ಟ್ವಿಟ್ಟರ್​ಗೆ ರಮ್ಯಾ ವಾಪಸ್; ಕೇಂದ್ರದ ವಿರುದ್ಧ ಮತ್ತದೇ ತಿವಿತ

ಜೂನ್ 1ರ ನಂತರ ಟ್ವಿಟ್ಟರ್​ಗೆ ಗುಡ್​ಬೈ ಹೇಳಿದ್ದ ರಮ್ಯಾ ಇದೀಗ 14 ತಿಂಗಳ ನಂತರ ಕಂಬ್ಯಾಕ್ ಮಾಡಿದ್ಧಾರೆ. ಮತ್ತದೇ ರಾಜಕೀಯ ಮೊನಚು ಮಾತುಗಳಿಂದ ಕೇಂದ್ರ ಸರ್ಕಾರವನ್ನು ತಿವಿಯಲು ಆರಂಭಿಸಿದ್ದಾರೆ.

ರಮ್ಯಾ (ದಿವ್ಯಾ ಸ್ಪಂದನ)

ರಮ್ಯಾ (ದಿವ್ಯಾ ಸ್ಪಂದನ)

 • News18
 • Last Updated :
 • Share this:
  ಬೆಂಗಳೂರು(ಆ. 18): ಕಾಂಗ್ರೆಸ್​ನ ಮಾಜಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ವರ್ಷದ ಬಳಿಕ ಟ್ವಿಟ್ಟರ್ ಲೋಕಕ್ಕೆ ಮರಳಿದ್ದಾರೆ. ಜೂನ್ ತಿಂಗಳಿಂದ ದಿಢೀರ್ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಅಕಾ ದಿವ್ಯಾ ಸ್ಪಂದನ ಅವರು ಇಂದು ಮಂಗಳವಾರ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಡಿದ ಟ್ವೀಟ್​ಗೆ ಖಾರದ ಪ್ರತಿಕ್ರಿಯೆಯಾಗಿ ರಮ್ಯಾ ಟ್ವೀಟ್ ಮಾಡಿದ್ದಾರೆ. 2019, ಜೂನ್ 1ರ ನಂತರ ಇದು ಅವರ ಮೊದಲ ಟ್ವೀಟ್ ಆಗಿದೆ.

  ಪಿಎಂ ಕೇರ್ಸ್ ನಿಧಿಯ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. ಪಿಎಂ ಕೇರ್ಸ್ ಪಂಡ್​ನ ಹಣವನ್ನು ಎನ್​ಡಿಆರ್​ಎಫ್​ಗೆ ವರ್ಗಾಯಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಲು ಕೋರ್ಟ್ ನಿರಾಕರಿಸಿದೆ. ಕೋರ್ಟ್​ನ ಈ ಸಂದೇಶ ಸ್ಪಷ್ಟವಾಗಿ ಗೊತ್ತಾಗಿರಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, “ಕ್ಲಿಯರ್ ಆ್ಯಸ್ ಬ್ರಾಡ್​ಲೈಟ್ - ದಾಲ್ ಮೇ ಡಿಫಿನೆಟ್ಲಿ ಕುಚ್ ಕಾಲಾ ಹೈ” (ಮೊಸರಲ್ಲಿ ಕಲ್ಲು ಇರುವುದು ಹಗಲಿನಷ್ಟೇ ಸ್ಪಷ್ಟವಿದೆ. ಎಂಬುದು ಭಾವಾರ್ಥ) ಎಂದು ವ್ಯಂಗ್ಯಾತ್ಮಕವಾಗಿ ಕುಟುಕಿದ್ದಾರೆ.  ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಉಸ್ತುವಾರಿ ಹೊತ್ತ ನಂತರ ರಮ್ಯಾ ಅವರು ಮೊನಚು ಹೇಳಿಕೆಗಳ ಟ್ವೀಟ್​ಗಳಿಂದ ಹೆಸರುವಾಸಿಯಾಗಿದ್ದರು. ಆದರೆ, ಈಗ ಮತ್ತದೇ ಲಯದೊಂದಿಗೆ ರಮ್ಯಾ ಮರಳಿದ್ಧಾರೆ. ಟ್ವಿಟ್ಟರ್​ನಿಂದ ಕಣ್ಮರೆಯಾಗಿದ್ದರೂ ಈ ಒಂದು ವರ್ಷ ಅವರು ಫೇಸ್​ಬುಕ್​ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ರಾಜಕೀಯ ಪೋಸ್ಟ್​ಗಳು ಬಹುತೇಕ ಕಡಿಮೆ ಆಗಿದ್ದವು. ಈಗ ಟ್ವಿಟ್ಟರ್​ನಲ್ಲಿ ಕೇಂದ್ರದ ವಿರುದ್ಧ ಕುಟುಕುತ್ತಲೇ ಕಂಬ್ಯಾಕ್ ಮಾಡಿದ್ಧಾರೆ.

  ಇದನ್ನೂ ಓದಿ: ಡಿ.ಜೆ. ಹಳ್ಳಿ ಗಲಭೆ ಮರೆಮಾಚಲು ಡಿಕೆಶಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ; ಡಿಸಿಎಂ ಅಶ್ವತ್ಥ್‌ ನಾರಾಯಣ್‌ ಕಿಡಿ

  ಟ್ವಿಟ್ಟರ್​ನಲ್ಲಿ ರಮ್ಯಾ ಅವರು 8 ಲಕ್ಷಕ್ಕೂ ಅಧಿಕ ಫಾಲೋಯರ್ಸ್ ಹೊಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ದಿಗ್ಗಜರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗಿಂತಲೂ ರಮ್ಯಾ ಮುಂದಿದ್ದಾರೆ.
  Published by:Vijayasarthy SN
  First published: