ಪ್ರಧಾನಿ ಮೋದಿಯನ್ನು 'ಕಳ್ಳ' ಎಂದ ರಮ್ಯಾ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲು

  • News18
  • Last Updated :
  • Share this:
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.26): ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಹೇಳನಕಾರಿ ಟ್ವೀಟ್​ ಮಾಡಿದ ಆರೋಪದ ಮೇಲೆ ಕಾಂಗ್ರೆಸ್​ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ವಿರುದ್ಧ ಉತ್ತರ ಪ್ರದೇಶದ ಗೋಮತಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋದಿ ಅವರ ಚಿತ್ರವನ್ನು ಫೋಟೊ ಶಾಪ್​ ಮಾಡಿ ಪ್ರಧಾನಿ ಕಳ್ಳ  ಎಂದು ಪೋಟೋವನ್ನು ಟ್ವೀಟ್​ ಮಾಡಿದ್ದರು. ಅಲ್ಲದೇ  'ಕಳ್ಳ ಪ್ರಧಾನಿ ಸಮ್ಮನಿದ್ದಾರೆ' ಎಂದು ಹ್ಯಾಷ್ ಟ್ಯಾಗ್​ ನಲ್ಲಿ ಬರೆದಿದ್ದರು.

 ರಮ್ಯಾ ಅವರ ಈ ಟ್ವೀಟ್​ ವಿರುದ್ಧ ಸಾಮಾಜಿಕ ಕಾರ್ಯಕರ್ತ, ವಕೀಲರಾದ ಸೈಯ್ಯದ್​ ರಿಜ್ವಾನ್​ ಅವರು ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಕಾಯ್ದೆ ಸೆಕ್ಷನ್​ 67 ಮತ್ತು ದೇಶದ್ರೋಹ (ಸೆಕ್ಷನ್​ 124ಎ) ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ.ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ​ ದಾಖಲಾಗಿರುವ ದೂರು ಪ್ರತಿಯನ್ನು ರಿಜ್ವಾನ್​ ಟ್ವೀಟ್​ ಮಾಡಿದ್ದು, ಪ್ರಧಾನಿ ಅವರ ಕಾನೂನು ತಂಡ ಈ ಬಗ್ಗೆ ಇನ್ನುಷ್ಟು ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ.ರಿಜ್ವಾನ್​ ದೂರು ದಾಖಲಾದ ಬಳಿಕವೂ ರಮ್ಯಾ ಈ ಟ್ವೀಟ್​ ಅನ್ನು ತಮ್ಮ ಖಾತೆಯಿಂದ ತೆಗೆಯಲು ನಿರಾಕರಿಸಿದ್ದಾರೆ. ರಮ್ಯಾ ಮಾಡಿರುವ ಈ ಟ್ವೀಟ್​ ನಮ್ಮ ಭಾರತದ ಗಣರಾಜ್ಯ ಹಾಗೂ ಪ್ರಧಾನಿಗೆ ಮಾಡಿರುವ ಅವಮಾನ. ದೂರು ದಾಖಲಿಸುವ ಮೂಲಕ ನಾನು ಆರ್​ಎಸ್​ಎಸ್​, ಬಿಜೆಪಿಗೆ ಏನು ಲಾಭಾ ಮಾಡುತ್ತಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.ಇನ್ನು ತಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿರುವುದನ್ನು ತಮ್ಮ ಹಿಂಬಾಲಕರಿಂದ ಟ್ವೀಟರ್​ನಲ್ಲಿ ತಿಳಿದ ರಮ್ಯಾ ಈ ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿದ್ದು, ಸ್ವಾಗತಿಸಿದ್ದಾರೆ.
First published: