ಯಡಿಯೂರಪ್ಪಗೆ ನೋವಾಗುವುದು ಸಹಜ, ಅವರಿಗೆ ಒಳ್ಳೆದಾಗಲಿ; ರಮೇಶ್​ ಕುಮಾರ್​

ಯಡಿಯೂರಪ್ಪರಿಗೆ ಈಗ 76 ವರ್ಷ ವಯಸ್ಸಾಗಿದೆ. ಹಾಗಾಗಿ ಈಗ ಅವರಿಗೆ ಒತ್ತಡ ಇರುತ್ತೆ ವಿಶ್ರಾಂತಿ ಅವಶ್ಯಕವಾಗಿದೆ

ಮಾಜಿ ಸ್ಪೀಕರ್ ರಮೇಶ್ ಕುಮಾರ್

ಮಾಜಿ ಸ್ಪೀಕರ್ ರಮೇಶ್ ಕುಮಾರ್

  • Share this:
ಕೋಲಾರ (ಜು. 26): ರಾಜಕೀಯ ನಾಯಕರು ಅಧಿಕಾರದಿಂದ ಕೆಳಗಿಳಿದಾಗ ಬೇಸರ  ಆಗುವುದು ಸಹಜ, ಈಗಲೂ ಯಡಿಯೂರಪ್ಪಗೆ ಆಗಿರುವುದು ಅದೆ.  ಆದರೆ,  ಒಂದೆರೆಡು ದಿನಗಳ‌ ನಂತರ ಎಲ್ಲವೂ ಸರಿಹೋಗಲಿದ್ದು, ಅವರು ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ಕಾಂಗ್ರೆಸ್​ ನಾಯಕ ರಮೇಶ್​ ಕುಮಾರ್​ ತಿಳಿಸಿದ್ದಾರೆ. ಯಡಿಯೂರಪ್ಪ ಪದತ್ಯಾಗದ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ  ರಾಜೀನಾಮೆ ಕಾಂಗ್ರೆಸ್​ ಪಕ್ಷಕ್ಕೆ  "ಪ್ಲಸ್​​  ಆಗಲ್ಲ,  ಮೈನಸ್ ಆಗಲ್ಲ.  ಇದು ಅವರ ಪಕ್ಷದ ಆಂತರಿಕ ವಿಚಾರ, ಪಕ್ಷ ಅವರಿಗೆ ಅವಕಾಶ ಕೊಟ್ಟಿತ್ತು.  ಪಕ್ಷ ಹೇಳಿದಂತೆ ಅವರು ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. 

ಯಡಿಯೂರಪ್ಪ ಕಳೆದ 40 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದಾರೆ, ಅವರಿಗೆ ಒಳ್ಳೆಯ ಆರೋಗ್ಯ ದೇವರು ಕೊಡಲಿ, ಮುಂದೆ ಅವರ ಎಲ್ಲಾ ಚಟುವಟಿಕೆಗಳು ಹೀಗೆ ಮುಂದುವರೆಯಲಿ, ಯಡಿಯೂರಪ್ಪರಿಗೆ ಈಗ 76 ವರ್ಷ ವಯಸ್ಸಾಗಿದೆ. ಹಾಗಾಗಿ ಈಗ ಅವರಿಗೆ ಒತ್ತಡ ಇರುತ್ತೆ ವಿಶ್ರಾಂತಿ ಅವಶ್ಯಕವಾಗಿದೆ ಎಂದರು.

ಇನ್ನ ಇದೇ ವೇಳೆ  ವಲಸಿಗ ಸಚಿವರು ಸ್ಥಾನಮಾನದ ಕುರಿತು ಮಾತನಾಡಿದ ಅವರು,  ಅವರು ಬಿಜೆಪಿ ಸಿದ್ದಾಂತ ನಂಬಿ ಹೋಗಿದ್ದಾರೋ ಅಥವಾ ಯಡಿಯೂರಪ್ಪ ಅವರ ಸಿದ್ದಾಂತ ನಂಬಿ ಹೋಗಿದ್ದಾರೊ  ಗೊತ್ತಿಲ್ಲ, ಅವರ ಭವಿಷ್ಯ ನನಗೆ ಗೊತ್ತಿಲ್ಲ, ಯಾರೂ ನನಗೆ ಏನೂ ಹೇಳಿಲ್ಲ ಎಂದರು.

ದೇಶದಲ್ಲಿ ಈಗಲೂ ತುರ್ತು ಪರಿಸ್ಥಿತಿ ವಾತವರಣವಿದೆ.

1975 ರಲ್ಲಿ   ಇಂದಿರಾಗಾಂಧಿಯವರು ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು ತಪ್ಪು,  ಆದರೆ ಈಗ  ನಮ್ಮ ದೇಶದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿಯ ವಾತಾವರಣವೇ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಂದು ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದರ ಕುರಿತು ಇಂದು  ಎಲ್ಲರೂ ಅದನ್ನು ಇಂದಿಗು ಚರ್ಚೆ ಮಾಡುತ್ತಿದ್ದಾರೆ, ಆದರೆ ಇವತ್ತಿನ ಅಘೋಷಿತ ತುರ್ತು ಪರಿಸ್ಥಿತಿ ಬಗ್ಗೆ ಯಾರು ಮಾತನಾಡುತ್ತಿಲ್ಲ, ದೇಶದ ಓರ್ವ ಗೃಹ ಮಂತ್ರಿ ಜನರನ್ನು ದೇಶದಿಂದ ಓಡಿಸುವುದಾಗಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಜನ ವಿರೋಧಿ ಕಾನೂನುಗಳು ಜಾರಿಯಾಗಿದೆ. ಆದರು ಯಾರೂ ಪ್ರಶ್ನೆ ಮಾಡದಂತಹ ವಾತಾವರಣ ನಿರ್ಮಾಣವಾಗಿದೆ, ನೋಟು ಅಮಾನ್ಯೀಕರಣ ಸೇರಿದಂತೆ ಕೇಂದ್ರ ಸರ್ಕಾರ ಕೈಗೊಂಡ ಹಲವು ಕ್ರಮಗಳಿಂದ ದೇಶಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು  ಕಿಡಿಕಾರಿದರು.

ಮೊದಲು ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವ ಉಳಿಸಿಕೊಳ್ಳಬೇಕು

ಇದೇ  ವೇಳೆ ಸ್ವ ಪಕ್ಷದ ವಿರುದ್ಧ ಕೂಡ ಮಾತನಾಡಿದ ಅವರು,  ಭ್ರಷ್ಟಾಚಾರ ಕುರಿತು ವಿಪಕ್ಷಗಳನ್ನ ಟೀಕಿಸುತ್ತಾ ನಮ್ಮಲ್ಲಿನ ತಪ್ಪುಗಳನ್ನು ಹೇಳಿಕೊಳ್ಳಬೇಕು, ಭ್ರಷ್ಟಾಚಾರ ಹೋರಾಟ ಎಲ್ಲರ ವಿರುದ್ದವು ಆಗಿರಬೇಕು, ಮೊದಲು ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವ ನಮ್ಮಲ್ಲಿ ಉಳಿಯಬೇಕು, ಆಡಳಿತ ಪಕ್ಷದವರು ತಪ್ಪು ಮಾಡಿದರೆ, ಮುಂದೆ ನಮಗೆ ಅಧಿಕಾರ ಸಿಗುತ್ತೆ ಎಂದು ಭಾವಿಸುವುದು ತಪ್ಪು, ಹಾಗಾದಲ್ಲಿ ಅದಕ್ಕೆ ಯಾವುದೇ ಅರ್ಥವಿರಲ್ಲ ಮೊದಲು ಪಕ್ಷವನ್ನ ತಳಮಟ್ಟದಿಂದ ಸಂಘಟಿಸಬೇಕು, ಕೇವಲ ಚುನಾವಣೆ ವೇಳೆ ಹಣ ಮಾಡುವ ಉದ್ದೇಶದಿಂದಲೇ ಬರುವ ನಾಯಕರನ್ನ ದೂರ ಇಡಬೇಕೆಂದು ಎಲ್ಲರಿಗೂ ಸಲಹೆ ನೀಡಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: