Ramesh Kumar: ಬೆಲೆ ಏರಿಕೆ ವಿರುದ್ಧ ಈ ಹಿಂದೆ ಇದ್ದ ಜನರ ಆಕ್ರೋಶ ಈಗ ಕಾಣಿಸುತ್ತಿಲ್ಲ; ರಮೇಶ್ ಕುಮಾರ್ ಅಸಮಾಧಾನ

ಬೆಂಗಳೂರಿನಲ್ಲಿ ಕಲ್ಯಾಣ ಮಂಟಪಕ್ಕೆ ಎರಡು ದಿನ ಮದುವೆಗೆ ನಾಲ್ಕೈದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಲ್ಲಿ ವಿಶೇಷ ಮದುವೆ ಆಗುತ್ತಾ?. ಇದನ್ನು ಯಾರು ಮಾಡಿದರು? ನಾವೆಲ್ಲ ಇದಕ್ಕೆ ಕಾರಣ ಎಂದು ಹೇಳಿದರು.

ರಮೇಶ್ ಕುಮಾರ್ (File Photo)

ರಮೇಶ್ ಕುಮಾರ್ (File Photo)

  • Share this:
    ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆ (Petrol, Diesel And Essential Product Price Hike) ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಸದನದಲ್ಲಿಯೂ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಿಡಿ ಕಾರುತ್ತಿದೆ. ಈ ವಿಷಯವಾಗಿ ಇಂದು ಸದನದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ (Congress MLA Ramesh Kumar) ಮಾತನಾಡಿದರು. ಬೆಲೆ ಏರಿಕೆ ಯಾವುದಕ್ಕೆ ಆಗಿದೆ. ಯಾವ ವಸ್ತುಗಳ ಬೆಲೆ ಏರಿಕೆ ಆಗಿದೆ. ಬೆಲೆ ಏರಿಕೆಗೆ ಸಿಲುಕಿರುವ ಜನರು ಇಲ್ಲಿ ಇರುವುದು ಕಡಿಮೆಯಾಗಿದೆ. ಹಿಂದೆ ಬೆಲೆ ಏರಿಕೆ ಬಗ್ಗೆ ‌ಮಾತನಾಡಿದ್ರೆ ಜನರು ಗಮನಿಸ್ತಾ ಇದ್ರು. ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಆಕ್ರೋಶ ಉಕ್ಕಿ ಬರುತ್ತಿತ್ತು. ಸಹಜವಾಗಿ ಆಕ್ರೋಶ ಉಕ್ಕಿ ಬರುತ್ತಿತ್ತು. ಆದರೆ ಈಗ ಆ ರೀತಿಯ ವ್ಯವಸ್ಥೆ ರಾಜಕೀಯ ಪಕ್ಷಗಳ ಮಧ್ಯೆ ಇಲ್ಲ ಎಂದು ಬೇಸ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಸೈಕಲ್ ಸವಾರಿಗೆ ನಾಲ್ಕಾನೆ ಟ್ಯಾಕ್ಸ್ ಹಾಕಲಾಗಿತ್ತು. ಇದರ ವಿರುದ್ಧ 1962ರಲ್ಲಿ ಆಂದೋಲನವೇ ಆಯ್ತು. 1980ರಲ್ಲಿ ಹೊರ ರೋಗಿಗಳಿಗೆ ಒಂದು ರೂಪಾಯಿ ಮಾಡಲಾಯಿತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈಗ ಅಂತಹ ‌ಪರಿಸ್ಥಿತಿ ಇಲ್ಲ. ಪ್ರತಿ ದಿನ ಬೆಲೆ ಏರಿಕೆ ಆಗುತ್ತಲೇ ಇದೆ. ಆದರೆ ನಮ್ಮ ಗಮನಕ್ಕೆ ಬಂದಿಲ್ಲ. ಬೆಲೆ ಏರಿಕೆ ವಿರುದ್ಧ ಹಿಂದೆ ಇದ್ದ ಜನಾಕ್ರೋಶ ಈ ಇಲ್ಲದಂತಾಗಿದೆ ಎಂದು ಬೆಲೆ ಏರಿಕೆ ಬಗ್ಗೆ ಜನರ ಮೌನದ ಬಗ್ಗೆ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಕಲ್ಯಾಣ ಮಂಟಪಕ್ಕೆ ಎರಡು ದಿನ ಮದುವೆಗೆ ನಾಲ್ಕೈದು ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಲ್ಲಿ ವಿಶೇಷ ಮದುವೆ ಆಗುತ್ತಾ?. ಇದನ್ನು ಯಾರು ಮಾಡಿದರು? ನಾವೆಲ್ಲ ಇದಕ್ಕೆ ಕಾರಣ. ನಾವು ಪ್ಯಾಲೇಸ್ ಬಿಟ್ಟು ಬೇರೆ ಕಡೆ ಮದುವೆ ಮಾಡಿದರೆ ಮನೆತನಕ್ಕೆ ಗೌರವ ಇಲ್ಲ ಎಂಬ ಭಾವನೆಯಿಂದ ಪ್ಯಾಲೇಸ್, ದೊಡ್ಡ ದೊಡ್ಡ ಕಲ್ಯಾಣಮಂಟಪಗಳಲ್ಲಿ ಮದುವೆ ಮಾಡಲು ಆರಂಭಿಸಿದೆವು ಎನ್ನುವ ಮೂಲಕ ರಾಜಕಾರಣಿಗಳ, ಶ್ರೀಮಂತರ ಮದುವೆಯನ್ನು ರಮೇಶ್ ಕುಮಾರ್ ಉಲ್ಲೇಖಿಸಿದರು.

    ಇದನ್ನು ಓದಿ: Gujarat Cabinet Ministers Swearing: ಪ್ರಮಾಣವಚನ ಸ್ವೀಕರಿಸಿದ ಗುಜರಾತ್ ನೂತನ ಸರ್ಕಾರದ ಸಚಿವರು!; 4.30ಕ್ಕೆ ಮೊದಲ ಸಚಿವ ಸಂಪುಟ ಸಭೆ

    ಗೌರಿ ಗಣೇಶ ಹಬ್ಬದ ವೇಳೆ ಖಾಸಗಿ ಬಸ್​ಗಳ ಮಾಲೀಕರು ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ರಮೇಶ್ ಕುಮಾರ್ ಅವರು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮೌರ್ಯ ಸರ್ಕಲ್ ಬಳಿ ನೂರಾರು ಬಸ್ ಗಳಿವೆ. ವಿಮಾನದ ಟಿಕೆಟ್ ಗಿಂತ ಈ ಬಸ್ ಗಳ‌ ಟಿಕೆಟ್ ದರ ಜಾಸ್ತಿ ಇದೆ. ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಿಂದಲೂ ಬಸ್ ಟಿಕೆಟ್ ದರ ಹೆಚ್ಚಿಗೆ ಮಾಡಿಕೊಂಡು ಬರ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸೋರಿಗೆ ಜನರ ಬವಣೆ ಗೊತ್ತಿಲ್ಲ. ಹಬ್ಬದ ವೇಳೆ ಜನ ಊರುಗಳಿಗೆ ಹೋಗ್ತಾರೆ. ಸರ್ಕಾರಿ ಬಸ್ ಗಳು ಸಾಲೋದಿಲ್ಲ. ಖಾಸಗಿ ಬಸ್ ಮಾಲೀಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

    ಇನ್ನು ಇದೇ ವಿಷಯವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದ ಗಮನ ಸೆಳೆದಿದ್ದರು. ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಇತರೆ ವಸ್ತುಗಳ ಬೆಲೆ ಏರಿಕೆ ಆಗಿದೆ. ಎರಡು ಇಡ್ಲಿ ಒಂದು ವಡೆಗೆ 39 ರೂಪಾಯಿ ಆಗಿದೆ. ಜನಾರ್ದನ ಹೋಟೆಲ್​ನಲ್ಲಿ ಮಸಾಲೆ ದೋಸೆಯ ದರ 100 ರೂಪಾಯಿ ಆಗಿದೆ. ಹಾಗಾಗಿ ನಾನು ಹೋಟೆಲ್​ಗೆ ಹೋಗುವುದನ್ನೇ ಕಡಿಮೆ ಮಾಡಿದೆ. ಇಷ್ಟೊಂದು ದರ ಕೊಟ್ಟು ಸಾಮಾನ್ಯ ಜನರು ತಿನ್ನುವುದಾದರೂ ಹೇಗೇ? ಎಂದು ಪ್ರಶ್ನೆ ಮಾಡಿದ್ದರು.
    Published by:HR Ramesh
    First published: