Congress ಹೈಕಮಾಂಡ್ ಮೇಲೆ ರಮೇಶ್ ಕುಮಾರ್ ಮುನಿಸು?

ಮಾಜಿ ಸ್ಪೀಕರ್​ ರಮೇಶ್​ ಕುಮಾರ್

ಮಾಜಿ ಸ್ಪೀಕರ್​ ರಮೇಶ್​ ಕುಮಾರ್

Ramesh Kumar: ದಿಢೀರ್ ನಿರ್ಧಾರದಿಂದ ಬೆಚ್ಚಿಬಿದ್ದ ಹೈಕಮಾಂಡ್ ನಾಯಕರು, ಇಂದು ಬೆಳಗ್ಗೆ ರಮೇಶ್ ಕುಮಾರ್ ನಿವಾಸಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿ ಮನವೊಲಿಕೆ ಮಾಡಲಿದ್ದಾರೆ.

  • Share this:

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸ್ಪರ್ಧೆ ವಿಚಾರ ಸಂಬಂಧ ಮಾಜಿ ಸ್ಪೀಕರ್​ ರಮೇಶ್ ಕುಮಾರ್​​​​ (Former Speaker Ramesh Kumar) ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಈವರೆಗೂ ಕೋಲಾರದಿಂದ (Kolar) ಸಿದ್ದರಾಮಯ್ಯ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಿಲ್ಲ. ಕೋಲಾರಕ್ಕೆ ಬೇರೆ ಅಭ್ಯರ್ಥಿಯನ್ನ ಆಯ್ಕೆ ಮಾಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಇದಕ್ಕೆ ಆಕ್ರೋಶಗೊಂಡ  ರಮೇಶ್ ಕುಮಾರ್ ಸಿದ್ದರಾಮಯ್ಯ ಕೋಲಾರದಲ್ಲೇ ನಿಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡದೇ ಹೋದಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.


ದಿಢೀರ್ ನಿರ್ಧಾರದಿಂದ ಬೆಚ್ಚಿಬಿದ್ದ ಹೈಕಮಾಂಡ್ ನಾಯಕರು, ಇಂದು ಬೆಳಗ್ಗೆ ರಮೇಶ್ ಕುಮಾರ್ ನಿವಾಸಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿ ಮನವೊಲಿಕೆ ಮಾಡಲಿದ್ದಾರೆ.


ಕೋಲಾರದ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿನ ರಮೇಶ್ ಕುಮಾರ್ ನಿವಾಸಕ್ಕೆ ಸುರ್ಜೇವಾಲಾ ಭೇಟಿ ನೀಡಲಿದ್ದಾರೆ.




ಬಿಜೆಪಿ ಕಾರ್ಯಕರ್ತರು-ಪೊಲೀಸರ ವಾಕ್ಸಮರ


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ (CT Ravi) ವಿರುದ್ಧ ನಕಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆ ಬಳಿ ಬಿಜೆಪಿ ಕಾರ್ಯಕರ್ತರು, ಪೊಲೀಸರ ನಡುವೆ ವಾಕ್ಸಮರ ನಡೆದಿದೆ.


Ramesh kumar demand to siddaramaiah contest election from kolar mrq
ಮಾಜಿ ಸ್ಪೀಕರ್ ರಮೇಶ್ ಕುಮಾರ್


ಕಾಂಗ್ರೆಸ್ ಕಾರ್ಯಕರ್ತನನ್ನ ಹೊರಗೆ ಕಳಿಸಿ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಕ್ಕೆ ಮಾತಿನ ಚಕಮಕಿ ನಡೆಸಿದ್ರು. ಕಾರ್ಯಕರ್ತನನ್ನ ಪೊಲೀಸರು ತಳ್ಳಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಆರೋಪಿಸಿದ್ದಾರೆ.


ಇದನ್ನೂ ಓದಿ:  Karnataka Election 2023: ಜೆಡಿಎಸ್ ಸೇರಲು ಸಜ್ಜಾದ್ರಾ ಬಿಎಸ್‌ವೈ ಆಪ್ತ? ರೇವಣ್ಣ ಜೊತೆ ದೇವೇಗೌಡರ ಭೇಟಿಯಾದ ಎನ್ಆರ್ ಸಂತೋಷ್!


ವಿಜಯೇಂದ್ರ-ಪರಮೇಶ್ವರ್ ಮುಖಾಮುಖಿ


ತುಮಕೂರಿನ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನಲ್ಲಿ ಕಾಂಗ್ರೆಸ್ ನಾಯಕ ಡಾ. ಜಿ ಪರಮೇಶ್ವರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮುಖಾಮುಖಿಯಾಗಿದ್ದರು. ತಮಗೆ ಸನ್ಮಾನಿಸಲು ಬಂದ ಶಾಲನ್ನು ವಿಜಯೇಂದ್ರಗೆ ಹೊದಿಸಿ ಆಶೀರ್ವಾದ ಮಾಡಿದರು ಪರಮೇಶ್ವರ್. ಈ ವೇಳೆ ಪರಮೇಶ್ವರ್​ ಕಾಲಿಗೆ ಬಿದ್ದು ನಮಸ್ಕರಿಸಿದರು ವಿಜಯೇಂದ್ರ.

top videos
    First published: