ಸದನದಲ್ಲಿ ಏಕವಚನದಲ್ಲಿ ಬೈಯ್ದಾಡಿದ ರಮೇಶ್​ ಕುಮಾರ್-ಕೆ.ಸುಧಾಕರ್; ಹಕ್ಕು ಚ್ಯುತಿ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಸದನದಲ್ಲಿ ನನ್ನ ಬೆಂಬಲಕ್ಕೆ ನಮ್ಮವರೇ ಬರಲಿಲ್ಲ. ಹೀಗಿರುವಾಗ ನಾನೇಕೆ ಶಾಸಕನಾಗಿರಲಿ. ರಾಜೀನಾಮೆ ನೀಡುತ್ತೇನೆ ಎಂದು ಸದನದ ಹೊರಗೆ ಕಾಂಗ್ರೆಸ್ ಶಾಸಕರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ರಾಜೀನಾಮೆ ಪತ್ರವನ್ನು ಟೈಪ್​ ಮಾಡಿಕೊಂಡು ತರುವಂತೆ ತಮ್ಮ ಆಪ್ತ ಸಹಾಯಕನಿಗೆ ಸೂಚಿಸಿದರು.

ಸಚಿವ ಕೆ.ಸುಧಾಕರ್ ಮತ್ತು ಕೆ.ಆರ್.ರಮೇಶ್ ಕುಮಾರ್.

ಸಚಿವ ಕೆ.ಸುಧಾಕರ್ ಮತ್ತು ಕೆ.ಆರ್.ರಮೇಶ್ ಕುಮಾರ್.

 • Share this:
  ಬೆಂಗಳೂರು: ಸದನದಲ್ಲಿ ಸಂವಿಧಾನದ ಮೇಲೆ ವಿಶೇಷ ಚರ್ಚೆ ವೇಳೆ ಸಚಿವ ಕೆ.ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರಸ್ಪರ ಏಕವಚನದಲ್ಲಿ ಬೈಯ್ದಾಡಿದ ಘಟನೆ ನಡೆದಿದೆ. ಅಲ್ಲದೇ, ಸದನದಲ್ಲಿ ಮಾತನಾಡುವಾಗ ಸ್ವಪಕ್ಷೀಯರು ತಮ್ಮ ಬೆಂಬಲಕ್ಕೆ ಬರಲಿಲ್ಲ ಎಂದು ರಮೇಶ್​ ಕುಮಾರ್ ಅಸಮಾಧಾನಗೊಂಡಿದ್ದಾರೆ.

  ಮಂಗಳವಾರ ಚರ್ಚೆ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್. ಈ ದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿವೆ. ಹಲವು ವರ್ಷ ಆಡಳಿತ ನಡೆಸಿದ ಪಕ್ಷಗಳೂ ದೇಶದಲ್ಲಿ ಜನರನ್ನು ದಾರಿ ತಪ್ಪಿಸುವ ಕುಮ್ಮಕ್ಕು ಮಾಡುತ್ತಿವೆ ಎಂದು  ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು. ಸುಧಾಕರ್ ಹೇಳಿಕೆಗೆ ಸಿಟ್ಟಿನಿಂದ ಎದ್ದು ರಮೇಶ್​ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸುಧಾಕರ್ ಅವರು, ನಾನು ಯಾವುದೇ ಪಕ್ಷದ ಹೆಸರು ಹೇಳಲಿಲ್ಲ ಎಂದು ಟಾಂಗ್ ನೀಡಿದರು.

  ಈ ವೇಳೆ ಸುಧಾಕರ್ ನೆರವಿಗೆ ಬಂದ ಸಚಿವ ವಿ ಸೋಮಣ್ಣ, ರಮೇಶ್ ಕುಮಾರ್ ಅವರು ಏನ್ ಮಾತನಾಡಬೇಕು ಅಂತ ಡಿಕ್ಟೇಟ್ ಮಾಡಬಾರದು ಎಂದರು. ಸೋಮಣ್ಣ ಮಾತಿಗೂ ರಮೇಶ್ ಕುಮಾರ್ ಸಿಟ್ಟಾದರು.

  ಬಳಿಕ ಮಾತು ಮುಂದುವರೆಸಿದ ಸುಧಾಕರ್, ಸಂವಿಧಾನ ಕುರಿತು ಮಾತಾಡುವಾಗ ತುರ್ತು ಪರಿಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ತುರ್ತು ಪರಿಸ್ಥಿತಿ ಬಗ್ಗೆ ನಿಮಗೆ ಮಾತಾಡುವ ಹಕ್ಕಿಲ್ಲ, ನೀವು ಪಕ್ಷಾಂತರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ತುರ್ತುಪರಿಸ್ಥಿತಿ ಬಗ್ಗೆ ಯಡಿಯೂರಪ್ಪ ಮಾತಾಡಲಿ, ತಲೆ ಬಾಗಿ ಕೇಳುತ್ತೇವೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸುಧಾಕರ್, ನೀವು‌ ದಳದಲ್ಲಿ ಇದ್ದವರು ಕಾಂಗ್ರೆಸ್​ಗೆ ಯಾಕೆ‌ ಬಂದ್ರಿ ಎಂದು ಪ್ರಶ್ನಿಸಿದರು.

  ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಅಂಬೇಡ್ಕರ್ ವಿರೋಧ ಇತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತಾತ್ಕಾಲಿಕ ಅಂದಾಗ ಅಂಬೇಡ್ಕರ್ ಒಪ್ಪಿಕೊಂಡರು. ಆದರೆ 70 ವರ್ಷ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮುಂದುವರೆಸಲಾಯ್ತು. ಕಾಶ್ಮೀರದಲ್ಲಿ ಅರಾಜಕತೆ, ಭಯೋತ್ಪಾದನೆ ಹೆಚ್ಚಾಯಿತು. ಇದಕ್ಕೆಲ್ಲ ಕಾರಣ ಯಾರು? ಅಂಬೇಡ್ಕರ್ ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಅಂಬೇಡ್ಕರ್​ರನ್ನು ಚುನಾವಣೆಯಲ್ಲಿ ಸೋಲಿಸಲಾಯ್ತು ಎಂದು ಕಾಂಗ್ರೆಸ್ ವಿರುದ್ಧ ಸುಧಾಕರ್ ಪರೋಕ್ಷ ಆರೋಪ ಮಾಡಿದರು. ಆಗ ಸುಧಾಕರ್ ಹೇಳಿಕೆ ಖಂಡಿಸಿ ರಮೇಶ್​ ಕುಮಾರ್ ಸದನದ ಬಾವಿಗಿಳಿದರು.  ಈ ವೇಳೆ ಉಂಟಾದ ಗದ್ದಲದಿಂದಾಗಿ ವಿಧಾನಸಭೆ ಕಲಾಪವನ್ನು ಹತ್ತು ನಿಮಿಷ ಮುಂದೂಡಲಾಯಿತು. ಬಳಿಕ ಸದನ ಆರಂಭವಾದಗಳು ಇಬ್ಬರ ಜಗಳ ತಾರಕ್ಕೆ ಹೋಗಿದೆ. ಈ ವೇಳೆ ಪರಸ್ಪರ ಒಬ್ಬರನ್ನೊಬ್ಬರು ಏಕವಚನದಲ್ಲಿ ಬೈಯ್ದಾಡಿಕೊಂಡಿದ್ದಾರೆ. ಒಂದು ಹಂತದಲ್ಲಿ ಸಿಟ್ಟಿಗೆದ್ದ ರಮೇಶ್​ ಕುಮಾರ್ ಅವರು ಸುಧಾಕರ್ ವಿರುದ್ಧ ಬೈಗುಳ ಪದವನ್ನು ಬಳಸಿದ್ದಾರೆ.

  ಇದನ್ನು ಓದಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ‘ಈಗ ಕಾಂಗ್ರೆಸ್​​ಗೆ​ ರಾಹುಲ್​​ ಗಾಂಧಿ ನಾಯಕತ್ವ ಬೇಕು‘ ಎಂದ ಗುಂಡೂರಾವ್

  ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸ್ಪೀಕರ್ ಅಸಮಾಧಾನ

  ಸದನದಲ್ಲಿ ನನ್ನ ಬೆಂಬಲಕ್ಕೆ ನಮ್ಮವರೇ ಬರಲಿಲ್ಲ. ಹೀಗಿರುವಾಗ ನಾನೇಕೆ ಶಾಸಕನಾಗಿರಲಿ. ರಾಜೀನಾಮೆ ನೀಡುತ್ತೇನೆ ಎಂದು ಸದನದ ಹೊರಗೆ ಕಾಂಗ್ರೆಸ್ ಶಾಸಕರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ರಾಜೀನಾಮೆ ಪತ್ರವನ್ನು ಟೈಪ್​ ಮಾಡಿಕೊಂಡು ತರುವಂತೆ ತಮ್ಮ ಆಪ್ತ ಸಹಾಯಕನಿಗೆ ಸೂಚಿಸಿದರು. ಆಗ ರಮೇಶ್​ಕುಮಾರ್ ಅವರನ್ನು ಸಿದ್ದರಾಮಯ್ಯ ಸೇರಿ ಇತರೆ ನಾಯಕರು ಸಮಾಧಾನಪಡಿಸಲು ಪ್ರಯತ್ನಿಸಿದರು.
  First published: