ಚಿಕ್ಕೋಡಿ(ಸೆ.30): ಇತ್ತೀಚೆಗೆ ನಿಧನರಾದ ಬೆಳಗಾವಿ ಸಂಸದ ಹಾಗೂ ರಾಜ್ಯ ರೈಲ್ವೆ ಸಚಿವರಾಗಿದ್ದ ದಿ.ಸುರೇಶ ಅಂಗಡಿ ನಿಧನದ ಬೆನ್ನಲೆ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೇದರಿವೆ. ಸುರೇಶ್ ಅಂಗಡಿ ನಿಧನದ ಬಳಿಕ ಮುಂದಿನ ಲೋಕಸಭೆಗೆ ಯಾರು ಸ್ಪರ್ಧೆ ಮಾಡಬೇಕು ಅನ್ನುವ ಚರ್ಚೆಗಳು ಜೋರಾಗಿಯೇ ನಡೆದಿವೆ. ಈಗಾಗಲೇ ಸುರೇಶ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲು ನಳಿನ್ಕುಮಾರ್ ಭೇಟಿ ನೀಡಿ ಟಿಕೆಟ್ಗೆ ಸಂಬಂಧಿಸಿದಂತೆ ಅನೌಪಚಾರಿಕ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮುಂಬರುವ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ಗಾಗಿ ಕಮಲ ನಾಯಕರಲ್ಲಿ ಪೈಪೋಟಿ ಶುರುವಾಗಿದ್ದು, ಈ ಪೈಕಿ ಹಲವು ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಇದರ ಮಧ್ಯೆ ಅನುಕಂಪದ ಆಧಾರದ ಮೇಲೆ ಮುಂದಿನ ಲೋಕಸಭಾ ಟಿಕೆಟ್ನ್ನು ದಿ.ಸುರೇಶ್ ಅಂಗಡಿ ಅವರ ಕುಟುಂಬದ ಯಾರಾದರೂ ಒಬ್ಬರಿಗೆ ಟಿಕೇಟ್ ನೀಡಬೇಕು ಎಂದು ಈಗ ಬಿಜೆಪಿಯಲ್ಲೆ ಚರ್ಚೆ ನಡೆದಿದೆ.
ಇನ್ನೊಂದೆಡೆ ಅಂಗಡಿ ಕುಟುಂಬದ ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡುವುದಾದರೆ ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿಯವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಅಂಗಡಿ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡುವುದಾದರೆ ರಮೇಶ ಕತ್ತಿ ಅವರನ್ನೇ ಪರಿಗಣಿಸಬೇಕು. ಮಾಜಿ ಸಂಸದರಾಗಿ ಕಾರ್ಯ ನಿರ್ವಹಿಸಿರುವ ರಮೇಶ ಕತ್ತಿಯವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭಿಮಾನಿಗಳಿದ್ದು ಡಿಸಿಸಿ ಬ್ಯಾಂಕ್ ಅದ್ಯಕ್ಷರಾಗಿ ಜಿಲ್ಲೆಯಾದ್ಯಂತ ಹಿಡಿತ ಹೊಂದಿದ್ದಾರೆ.
ಬೆಂಗಳೂರಿನ ಜೆಪಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 76 ಲಕ್ಷ ಮೌಲ್ಯದ ಗಾಂಜಾ ಸೀಜ್
ಡಿಸಿಸಿ ಬ್ಯಾಂಕ್ ಮೂಲಕ ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವವನ್ನ ರಮೇಶ್ ಕತ್ತಿ ಹೋಂದಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಪ್ರಭಾವಿ ಲಿಂಗಾಯತ ಸಮುದಾಯದ ಒಬ್ಬ ನಾಯಕ ಹಾಗಾಗಿ ಬೇರೆಯವರ ಬದಲಾಗಿ ನಮ್ಮ ನಾಯಕರಿಗೆ ಟಿಕೇಟ್ ನೀಡುವ ನಿಟ್ಟಿನಲ್ಲಿ ಬಿಜೆಪಿ ತೀರ್ಮಾನ ಮಾಡಬೇಕು ಎಂಬುದು ಕತ್ತಿ ಅಭಿಮಾನಿಗಳ ಒತ್ತಾಯವಾಗಿದೆ.
ರಾಜ್ಯಸಭೆ ಟಿಕೆಟ್ಗೆ ಒತ್ತಾಯಿಸಿದ್ದ ಕತ್ತಿ ಕುಟುಂಬ
ಇನ್ನು ಇತ್ತೀಚೆಗಷ್ಟೇ ನಡೆದ ರಾಜ್ಯ ಸಭೆ ಚುನಾವಣೆಯಲ್ಲೂ ಮಾಜಿ ಸಂಸದ ಪ್ರಭಾಕರ ಕೋರೆ ಬದಲಾಗಿ ರಮೇಶ್ ಕತ್ತಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿ ಮಾಜಿ ಸಚಿವ ಶಾಸಕ ಉಮೇಶ್ ಕತ್ತಿ ಯಡಿಯೂರಪ್ಪರನ್ನ ಆಗ್ರಹಿಸಿದ್ದರು. ಎಂಟು ಬಾರಿ ಶಾಸಕನಾದ ನನಗೆ ಸಚಿವ ಸ್ಥಾನ ನೀಡಲೇಬೇಕು ಜೋತೆಗೆ ಲೋಕಸಭಾ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿಗೆ ಟಿಕೇಟ್ ತಪ್ಪಿಸಿ ಅಣ್ಣಾಸಾಬ ಜೊಲ್ಲೆಗೆ ಟಿಕೆಟ್ ನೀಡಿದಾಗ ರಮೇಶ್ ನನ್ನ ರಾಜ್ಯ ಸಭೆಗೆ ಕಳಿಸುವುದಾಗಿ ಸ್ವತಃ ಮುಖ್ಯಮಂತ್ರಿಗಳೆ ಹೇಳಿದ್ರು ಆ ಭರವಸೆ ಈಡೆರಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಆದ್ರೆ ಹೈ ಕಮಾಂಡ್ ಇದಕ್ಕೆ ಮನೆ ಹಾಕದೆ ಅಚ್ಚರಿಯಂತೆ ಬಿಜೆಪಿಯ ಈರಣ್ಣ ಕಾಡಾಡಿಗೆ ಟಿಕೇಟ್ ನೀಡುವ ಮೂಲಕ ರಮೇಶ್ ಕತ್ತಿ ಕನಸಿಗೆ ತಣ್ಣೀರೆಚಿತ್ತು. ಅಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದ ಕತ್ತಿ ಕುಟುಂಬ ತಣ್ಣಗಾಗಿತ್ತು.
ಸದ್ಯ ಈಗ ದಿ.ಸುರೇಶ್ ಅಂಗಡಿ ನಿಧನದಿಂದಾಗಿ ಮತ್ತೊಮ್ಮೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೇದರಿದೆ. ಅಂಗಡಿ ಕುಟುಂಬದ ಹೊರತಾಗಿ ಟಿಕೇಟ್ ಬೇರೆ ಯಾರಿಗೂ ನೀಡಬಾರದು. ಕಳೆದ ಲೋಕಸಭೆ ಹಾಗೂ ರಾಜ್ಯಸಭೆ ಟಿಕೆಟ್ ವಂಚಿತರಾಗಿರುವ ರಮೇಶ ಕತ್ತಿ ಅವರಿಗೆ ಸಿಎಂ ಯಡಿಯೂರಪ್ಪ ಒಳ್ಳೆಯ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ರಮೇಶ ಕತ್ತಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ರಮೇಶ ಕತ್ತಿ ಅಭಿಮಾನಿಗಳು ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಟಿಕೇಟ್ ವಿಚಾರವಾಗಿ ಈಗಾಗಲೇ ಲೆಕ್ಕಾಚಾರಗಳು ಪ್ರಾರಂಭ ವಾಗಿದೆ ಬಿಜೆಪಿ ಯಾರಿಗೆ ಮನೆ ಹಾಕಲಿದೆ ಎಂಬುದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ