‘ನಾನು ಬಿಜೆಪಿ ಸೇರಲು ವಾಜಪೇಯಿ ಕಾರಣ’ – ಅಟಲ್​ಜಿ ನಿಧನಕ್ಕೆ ರಮೇಶ್ ಜಿಗಜಿಣಗಿ ಕಂಬನಿ


Updated:August 17, 2018, 12:36 PM IST
‘ನಾನು ಬಿಜೆಪಿ ಸೇರಲು ವಾಜಪೇಯಿ ಕಾರಣ’ – ಅಟಲ್​ಜಿ ನಿಧನಕ್ಕೆ ರಮೇಶ್ ಜಿಗಜಿಣಗಿ ಕಂಬನಿ
ರಮೇಶ್ ಜಿಗಜಿಣಗಿ
  • Share this:
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಆ. 16): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ ಜಿಗಜಿಣಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ತಾವು ಬಿಜೆಪಿ ಸೇರಲು ಮಾಜಿ ಪ್ತಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಪೂರ್ತಿ.  ಬಿಜೆಪಿ ಇಂದು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಲು ವಾಜಪೇಯಿ ಅವರ ಸಂಘಟನೆ ಸಾಮರ್ಥ್ಯವೇ ಕಾರಣ ಎಂದು ಹೇಳಿದರು.

“ವಾಜಪೇಯಿ ಅವರು ಎಂದೂ ಪಕ್ಷಭೇದ ಮಾಡುವವರಲ್ಲ. ಅವರು ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು.  ಅವರು ಪ್ರಧಾನಿಯಾಗಿದ್ದಾಗ ನಾನು ಅವರ ಸರಕಾರದಲ್ಲಿ ಲೋಕಸಭೆ ಸದಸ್ಯನಾಗಿದ್ದೆ. ಅವರ ಎರಡು ಆಸೆಗಳಿದ್ದವು. ಮಹಾನಗರಗಳ ಸಂಪರ್ಕ ರಸ್ತೆ ನಿರ್ಮಾಣದ ಕನಸು‌ ಈಡೇರಿದೆ.  ನದಿ ಜೋಡಣೆ ಬಾಕಿಯಿದೆ.  ಅವರು ಅಪರೂಪದ ವ್ಯಕ್ತಿ. ಅವರ ಜೊತೆ ಕೆಲಸ ಮಾಡಿದ್ದು ತಮ್ಮ ಅದೃಷ್ಠ.  ಅಂಥ ಮಹಾನ್ ವ್ಯಕ್ತಿಯನ್ನು ದೇಶ ಪಡೆದದ್ದು ಪುಣ್ಯ” ಎಂದು ಜಿಗಜಿಣಗಿ ಅವರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ