HOME » NEWS » State » RAMESH JARKIHOLI WAS MET BL SANTHOOSH IN DELHI RH DBDEL

ಸಿಎಂ ಬಿಎಸ್​ವೈ ಭೇಟಿ ಮಾಡದೆ ಬಿ.ಎಲ್. ಸಂತೋಷ್ ಗಾಗಿ 3 ದಿನ ಕಾದು ಕುಳಿತಿದ್ದ ರಮೇಶ್ ಜಾರಕಿಹೊಳಿ!

ಆಪರೇಷನ್ ಕಮಲ ಮಾಡುವ ವೇಳೆ ತಮ್ಮ ಜೊತೆಗಿದ್ದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲು ಶ್ರಮಿಸಿದ ವಿಧಾನ‌ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಚಿವ ಸ್ಥಾನ‌ ಕೊಡಿಸಲು ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆ ದೃಷ್ಟಿಯಲ್ಲೂ ಅವರು ಸಂತೋಷ್ ಭೇಟಿ ಮಾಡಿರುವ ಸಾಧ್ಯತೆ ಇದೆ.

news18-kannada
Updated:November 20, 2020, 3:06 PM IST
ಸಿಎಂ ಬಿಎಸ್​ವೈ ಭೇಟಿ ಮಾಡದೆ ಬಿ.ಎಲ್. ಸಂತೋಷ್ ಗಾಗಿ 3 ದಿನ ಕಾದು ಕುಳಿತಿದ್ದ ರಮೇಶ್ ಜಾರಕಿಹೊಳಿ!
ಸಚಿವ ರಮೇಶ್​ ಜಾರಕಿಹೊಳಿ
  • Share this:
ನವದೆಹಲಿ, ನ. 20: ಮೊನ್ನೆ ದೆಹಲಿಯಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮೂರು ದಿನಗಳಿಂದ ದೆಹಲಿಯಲ್ಲೇ ಕಾದು ಕುಳಿತು ಇವತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ.

ನವೆಂಬರ್ 18ರಂದು ರಾಜ್ಯ ಸಚಿವ ಸಂಪುಟ ಪುನರ್ರಚನೆಗೆ ಹೈಕಮಾಂಡ್ ನಾಯಕರಿಂದ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ಆಗಮಿಸಿದ್ದರು. ಆಗ ಸಚಿವ ರಮೇಶ್ ಜಾರಕಿಹೊಳಿ ಕೂಡ ದೆಹಲಿಯಲ್ಲೇ ಇದ್ದರು. ಆದರೆ ರಮೇಶ್ ಜಾರಕಿಹೊಳಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿರಲಿಲ್ಲ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕೋಲ್ಕತ್ತಾಗೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ದೆಹಲಿಗೆ ವಾಪಸ್ ಬರುವವರೆಗೆ ಕಾದು ಇಂದು ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿ ದೆಹಲಿ ಪ್ರವಾಸದಲ್ಲಿದ್ದಾಗ ಸಚಿವರಾದವರು ದೆಹಲಿಯಲ್ಲಿದ್ದರೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲೇಬೇಕೆಂಬ ನಿಯಮವೇನಿಲ್ಲ. ಆದರೆ ಸಾಮಾನ್ಯವಾಗಿ ಭೇಟಿಯಾಗುತ್ತಾರೆ. ಅದು ಸೌಜನ್ಯದ ಭೇಟಿಯಾಗಿರುತ್ತದೆ ಅಷ್ಟೇ. ರಮೇಶ್ ಜಾರಕಿಹೊಳಿ ಸೌಜನ್ಯಕ್ಕೂ ಭೇಟಿ ಮಾಡದಿರುವುದು ಚರ್ಚೆಗೆ ಕಾರಣವಾಗಿತ್ತು. ಈಗವರು ಸಂತೋಷ್ ಭೇಟಿ ಮಾಡಿರುವುದು ಚರ್ಚೆಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ.

ಇದನ್ನು ಓದಿ: ಸದ್ಯದಲ್ಲೇ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನು? ಸರ್ಕಾರದ ವಲಯದಲ್ಲಿ ಗಂಭೀರ ಚರ್ಚೆ

ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿ.ಎಲ್. ಸಂತೋಷ್ ಅವರ ಎರಡು ಬಣ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ಯಡಿಯೂರಪ್ಪ ಬಣದಲ್ಲಿದ್ದ ರಮೇಶ್ ಜಾರಕಿಹೊಳಿ ಪದೇ ಪದೇ ಸಂತೋಷ್ ಭೇಟಿಯಾಗುತ್ತಿರುವುದರಿಂದ ಬಣ ಬದಲಿಸುತ್ತಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದಲ್ಲದೆ ರಮೇಶ್ ಜಾರಕಿಹೊಳಿ ಮೊನ್ನೆ ಸಂತೋಷ್ ಬಣದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯನ್ನೂ ಭೇಟಿಯಾಗಿದ್ದರು. ಇದರಿಂದಾಗಿ ಅವರು ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದರಾ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. ಇದಲ್ಲದೆ ರಮೇಶ್ ಜಾರಕಿಹೊಳಿ ದೆಹಲಿಯಲ್ಲೇ ಠಿಕಾಣಿ ಹೂಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಭೇಟಿಗೂ ಪ್ರಯತ್ನಿಸುತ್ತಿದ್ದಾರೆ. ಇದರಿಂದ ರಮೇಶ್ ಜಾರಕಿಹೊಳಿ ನಡೆ ಮೇಲೆ ಮತ್ತಷ್ಟು ಅನುಮಾನ‌ ಬರುವಂತಾಗಿದೆ.

ಇದಲ್ಲದೆ ಆಪರೇಷನ್ ಕಮಲ ಮಾಡುವ ವೇಳೆ ತಮ್ಮ ಜೊತೆಗಿದ್ದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲು ಶ್ರಮಿಸಿದ ವಿಧಾನ‌ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಚಿವ ಸ್ಥಾನ‌ ಕೊಡಿಸಲು ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆ ದೃಷ್ಟಿಯಲ್ಲೂ ಅವರು ಸಂತೋಷ್ ಭೇಟಿ ಮಾಡಿರುವ ಸಾಧ್ಯತೆ ಇದೆ.
Published by: HR Ramesh
First published: November 20, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories