ವಿಜಯಪುರ: ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಬಿಜೆಪಿ (BJP) ಸೇರಿ ಸಚಿವರಾಗಿ ಬಳಿಕ ತಮ್ಮ ಅಶ್ಲೀಲ ಸಿ.ಡಿ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನ ಕಳೆದುಕೊಂಡಿದ್ದ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಬಿಜೆಪಿಗೆ ಹೋದ ಮೇಲೂ ನೆಮ್ಮದಿಯಿಂದ ಇರುವಂತೆ ಕಾಣುತ್ತಿಲ್ಲ. ಏನಾದರೊಂದು ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸೋ ರಮೇಶ್ ಜಾರಕಿಹೊಳಿ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ ಎಂದೂ ಹೇಳಲಾಗ್ತಿದೆ. ಈ ಮಧ್ಯೆ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್‌ಗೆ (BJP High Command) ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಹೌದು.. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡದೇ ಇದ್ದರೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಮಹೇಶ್ ಕುಮಟಳ್ಳಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಮಾತು ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಹೀಗಾಗಿ ಮಹೇಶ್ ಕುಮಟಳ್ಳಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದಿರಲು ಯೋಚನೆ ಮಾಡಿದೆ ಎಂದು ಹೇಳಲಾಗ್ತಿದ್ದು, ಇದರ ಬೆನ್ನಲ್ಲೇ ತನ್ನ ದೋಸ್ತಿ ಪರ ನಿಂತಿರುವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Laxmi Hebbalkar: ನಾನು ಬಂದಿದ್ದೇನೆ, ಈಗ್ಯಾಕೆ ನಾಯಿ ತರಹ ಒದ್ದಾಡ್ತೀಯಾ ತಾಯಿ; ನಾಲಿಗೆ ಹರಿಬಿಟ್ಟ ಜಾರಕಿಹೊಳಿ
'ಮುಳುಗುವ ಹಡಗು ಕಾಂಗ್ರೆಸ್‌ಗೆ ಹೋಗೋದು ಸರಿಯಲ್ಲ'
ಇನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರ ಪೈಕಿ ಅನೇಕರು ಅಸಮಾಧಾನದಿಂದ ಇದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್‌ನ ಹಡಗು ಮುಳುಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ಗೆ ಹೋಗೋದು ಸರಿ ಅಲ್ಲ. ಯಾರೂ ಕೂಡ ಬಿಜೆಪಿ ಬಿಡುವ ಮೂರ್ಖತನ ಮಾಡಬಾರದು. ನಾರಾಯಣ ಗೌಡ ಕಾಂಗ್ರೆಸ್‌ಗೆ ಹೋಗ್ತಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡೆ. ನಾನು ನಾರಾಯಣ ಗೌಡ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Belagavi Politics: ಹೆಬ್ಬಾಳ್ಕರ್ ಆಯ್ತು, ಈಗ ಜೊಲ್ಲೆ; ಬಿಜೆಪಿಗೆ ಬಿಸಿತುಪ್ಪವಾದ್ರಾ ರಮೇಶ್ ಜಾರಕಿಹೊಳಿ?
ಇನ್ನು ಸಚಿವ ಸ್ಥಾನ ಕೊಡದೇ ಇದ್ದುದ್ದಕ್ಕೆ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗದೆ ಇರೆಬೆಲ್ ಆದ ಜಾರಕಿಹೊಳಿರೋದಕ್ಕೆ ನಿರಾಶೆ ಇಲ್ಲ. ನಾನು ಇದ್ದ ಸಚಿವ ಸ್ಥಾನ ಬಿಟ್ಟು ಬಿಜೆಪಿಗೆ ಬಂದಿದ್ದೇನೆ. ಬಿಜೆಪಿ ತತ್ವ ಸಿದ್ದಾಂತ ನಂಬಿ ಬಂದಿದ್ದೇನೆ ಹೊರತು ಸಚಿವ ಸ್ಥಾನಕ್ಕಾಗಿ ಬಂದಿಲ್ಲ ಎಂದು ಹೇಳಿದರು.
'ಮುಂದೆ ಶಿಷ್ಟಾಚಾರ ಪಾಲನೆ ಮಾಡ್ತೀನಿ'
ಇನ್ನು, ರಮೇಶ್ ಜಾರಕಿಹೊಳಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂಬ ಈರಣ್ಣ ಕಡಾಡಿ ಅವರ ಆರೋಪದ ಕುರಿತು ಮಾತನಾಡಿ, ಸರ್ಕಾರಿ ಕಾರ್ಯಕ್ರಮ ಅಂತಾ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಿದ್ದಿಲ್ಲ. ಸಿಎಂ ಪರ್ಮಿಶನ್ ಪಡೆದು ಸಣ್ಣ ಕಾರ್ಯಕ್ರಮ ಮಾಡಿದೆ. ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಯಕ್ರಮ ಮಾಡುವಾಗ ಶಿಷ್ಟಾಚಾರ ಪಾಲನೆ ಮಾಡೋದಾಗಿ ಹೇಳಿದ್ದೇನೆ ಎಂದು ಹೇಳಿದರು.
ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿವಾದ ವಿಚಾರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದನ್ನ ನನಗೆ ಕೇಳಬೇಡಿ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಕೇಳಿ. ಶಿಷ್ಟಾಚಾರದ ಪ್ರಕಾರ ಸಿಎಂ ಕರೆದುಕೊಂಡು, ಕಾನೂರು ಪ್ರಕಾರ ಕಾರ್ಯಕ್ರಮ ಮಾಡಿದ್ದೇನೆ. ಕಾರ್ಯಕ್ರಮದಲ್ಲಿ ಯಾವುದೇ ನಿಯಮಕ್ಕೆ ಚ್ಯುತಿಯಾಗಿಲ್ಲ. ಇಲ್ಲೇ ಎಂ ಬಿ ಪಾಟೀಲ್ ಮನೆ ಇದೆ, ಹೋಗಿ ಕೇಳಿ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ