ಲಕ್ಷ್ಮಿ ಹೆಬ್ಬಾಳ್ಕರ್​ಗೆ ಟಿಕೆಟ್​ ಕೊಡಿಸಿದ್ದೆ ನಾನು ಮಾಡಿದ ದೊಡ್ಡ ತಪ್ಪು​; ರಮೇಶ್​ ಜಾರಕಿಹೊಳಿ ಗುಡುಗು

ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ನಾವೇ ಟಿಕೆಟ್​ ಕೊಡಿಸಿ ತಪ್ಪು ಮಾಡಿದ್ದೇವು. ಸಮ್ಮಿಶ್ರ ಸರ್ಕಾರದಲ್ಲೂ ಹೆಬ್ಬಾಳ್ಕರ್​ಗೆ ಸ್ಥಾನ ಮಾನ ಕೊಡಬೇಡಿ ಎಂದಿದ್ದೇವು. ಆದರೆ ನನ್ನ ಮಾತು ಮೀರಿ ನಿಗಮ ಮಂಡಳಿ ಸ್ಥಾನ ನೀಡಿದರು. ನಾನೇನಾದರೂ  ಸುಮ್ನೆ ಇದ್ದಿದ್ದರೆ ಸಚಿವೆಯನ್ನಾಗಿಯೂ ಮಾಡುತ್ತಿದ್ದರು

Seema.R | news18-kannada
Updated:November 16, 2019, 11:35 AM IST
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಟಿಕೆಟ್​ ಕೊಡಿಸಿದ್ದೆ ನಾನು ಮಾಡಿದ ದೊಡ್ಡ ತಪ್ಪು​; ರಮೇಶ್​ ಜಾರಕಿಹೊಳಿ ಗುಡುಗು
ರಮೇಶ್​- ಲಕ್ಷ್ಮಿ- ಡಿಕೆಶಿ
  • Share this:
ಬೆಳಗಾವಿ (ನ.16): ಪಕ್ಷದಲ್ಲಿ ನಾನು ಸೀನಿಯರ್.  ಆದರೆ ಲಕ್ಷ್ಮಿ ಹೆಬ್ಬಾಳ್ಕರ್​ರನ್ನ ನನ್ನ ತಲೆ ಮೇಲೆ ಕೂರಿಸೋಕೆ ಡಿಕೆ ಶಿವಕುಮಾರ್​​ ಬಂದಿದ್ದರು. ಇದೇ ಕಾರಣಕ್ಕೆ ನಮ್ಮ ಕ್ಷೇತ್ರಕ್ಕೆ ಡಿಕೆ ಶಿವಕುಮಾರ್​ ಹಸ್ತಕ್ಷೇಪ ಮಾಡಿದರು. ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪವೇ ನಮ್ಮ ನಡುವಿನ ಜಗಳಕ್ಕೆ ಕಾರಣ ಎಂದು ತಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವನ್ನು ರಮೇಶ್​ ಜಾರಕಿಹೊಳಿ ಬಿಚ್ಚಿಟ್ಟಿದ್ದಾರೆ. 

ಗೋಕಾಕ್​ನಲ್ಲಿ ಮಾತನಾಡಿದ ಅವರು, ಲಕ್ಷ್ಮಿ ಹೆಬ್ಬಾಳ್ಕರ್​ ಅವರಿಗೆ ನಾವೇ ಟಿಕೆಟ್​ ಕೊಡಿಸಿ ತಪ್ಪು ಮಾಡಿದ್ದೇವು. ಸಮ್ಮಿಶ್ರ ಸರ್ಕಾರದಲ್ಲೂ ಹೆಬ್ಬಾಳ್ಕರ್​ಗೆ ಸ್ಥಾನ ಮಾನ ಕೊಡಬೇಡಿ ಎಂದಿದ್ದೇವು. ಆದರೆ ನನ್ನ ಮಾತು ಮೀರಿ ನಿಗಮ ಮಂಡಳಿ ಸ್ಥಾನ ನೀಡಿದರು. ನಾನೇನಾದರೂ  ಸುಮ್ನೆ ಇದ್ದಿದ್ದರೆ ಸಚಿವೆಯನ್ನಾಗಿಯೂ ಮಾಡುತ್ತಿದ್ದರು ಎಂದು ಕಿಡಿಕಾರಿದರು.

ಪಕ್ಷದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​​ ನನಗಿಂತ ಕಿರಿಯವರು. ಆದರೆ, ನನ್ನ ತಲೆ ಮೇಲೆ ಅವರನ್ನು ಕೂರಿಸಲಿ ಪಕ್ಷದ ನಾಯಕರು ಬಂದರು. ಸತೀಶ್, ಹೆಬ್ಬಾಳ್ಕರ್ ಮನೆಗೆ ಚಹಾ ಕುಡಿಯೋಕೆ ಹೋಗುತ್ತಿದ್ದರು. ಇದರಿಂದಾಗಿ  ಅನಿವಾರ್ಯವಾಗಿ ನಾನು ನಿರ್ಧಾರ ಕೈಗೊಳ್ಳುವ ಸ್ಥಿತಿ ನಿರ್ಮಾಣವಾಯಿತು.

ಇದನ್ನು ಓದಿ: ಅಥಣಿ, ರಾಣೆಬೆನ್ನೂರು ಬಳಿಕ ಯಶವಂತಪುರದಲ್ಲಿ ಬಂಡಾಯದ ಬಿಸಿ; ಟಿಕೆಟ್​ ಕೈ ತಪ್ಪಿದ್ದರಿಂದ ಮುನಿಸು ತೋರಿದ ಜಗ್ಗೇಶ್

ಲಕ್ಷ್ಮೀ ಪ್ರಭಾವಿ ಆಗಲು ಡಿಕೆಶಿ ಅಷ್ಟೇ ಅಲ್ಲ ನಾವೂ ಕೂಡ ಕಾರಣ. ಸಚಿವೆಯಾದರೆ ಹೊಟ್ಟೆಕಿಚ್ಚು ಪಡುವಷ್ಟು ಸಣ್ಣವನಲ್ಲ. ಆಕೆ ಹಣೆಬರದಲ್ಲಿ ಇದ್ದರೆ ಸಚಿವೆಯಾಗಲಿ ತೊಂದರೆ ಇಲ್ಲ. ಆದರೆ, ಆಕೆಗಾಗಿ ದುಡಿವರ ಬಗ್ಗೆ ಚಿಂತೆ ಮಾಡಬೇಕಿತ್ತು. ಕಾಂಗ್ರೆಸ್ ಡಿ.ಕೆ.ಶಿವಕುಮಾರ್​ ಅವರ ಕೈಯಲ್ಲಿದೆ. ಅದೇ ರೀತಿ ನಂದೇ ರಾಜ್ಯ ಎನ್ನುವುದು ಲಕ್ಷ್ಮೀ ಹೆಬ್ಬಾಳ್ಕರ್​ಗೆ ಬಂತು. ಯಾರು ದೊಡ್ಡವರು, ಸಣ್ಣವರು ಎಂಬುದು ತಿಳಿಯಲಿಲ್ಲ. ರಾಜಕಾರಣದಲ್ಲಿ ಪೋಸ್ ಕೊಡದವರು ಶೇ.100 ಸರಿ. ಆದರೆ ಪೋಸ್ ಕೊಟ್ಟರೆ ಅವರು ಬಿಗ್ ಝೀರೋ ಇರುತ್ತಾರೆ ಎಂದು ಅವರಿಗೆ ತಿರುಗೇಟು ನೀಡಿದರು.
First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ