ರಮೇಶ್ ಜಾರಕಿಹೊಳಿ ಅಶ್ಲೀಲ ಸಿ.ಡಿ ಕೇಸ್; ಶಂಕಿತ ಆರೋಪಿಗಳ ಮನೆ ಮೇಲೆ ಎಸ್ಐಟಿ ದಾಳಿ
Ramesh Jarkiholi CD Case: ರಮೇಶ್ ಜಾರಕಿಹೊಳಿ ಸಿ.ಡಿ ಷಡ್ಯಂತ್ರ್ಯದ ಹಿಂದೆ ಇವರು ಭಾಗಿಯಾಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿ.ಡಿ ಹಿಂದಿನ ಸೂತ್ರಧಾರರ ಮನೆ ಮೇಲೆ ಇಂದು ಮುಂಜಾನೆ ಎಸ್ಐಟಿ ದಾಳಿ ನಡೆಸಿದೆ.
ಬೆಂಗಳೂರು (ಮಾ. 13): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದವರ ಸಂಪೂರ್ಣ ಮಾಹಿತಿಯನ್ನು ಎಸ್ಐಟಿ ಕಲೆಹಾಕಿದೆ. ಸಿ.ಡಿ ಷಡ್ಯಂತ್ರ್ಯದ ಹಿಂದೆ ಇವರು ಭಾಗಿಯಾಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿ.ಡಿ ಹಿಂದಿನ ಸೂತ್ರಧಾರರ ಮನೆ ಮೇಲೆ ಇಂದು ಮುಂಜಾನೆ ಎಸ್ಐಟಿ ದಾಳಿ ನಡೆಸಿದೆ. ಸರ್ಚ್ ವಾರೆಂಟ್ ಪಡೆದು ಎಸ್ಐಟಿ ತಂಡ ದಾಳಿ ನಡೆಸಿದೆ.
ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ ಹಿಂದಿನ ಸೂತ್ರಧಾರರ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ. ಸರ್ಚ್ ವಾರೆಂಟ್ ಪಡೆದು ಎಸ್ಐಟಿ ತಂಡ ದಾಳಿ ನಡೆಸಿದೆ. ಬೆಂಗಳೂರಿನ ವಿಜಯನಗರ, ತುಮಕೂರಿನ ಶಿರಾ ಮತ್ತು ಬೀದರ್ ನ ಬಾಲ್ಕಿಯಲ್ಲಿ ದಾಳಿ ನಡೆಸಲಾಗಿದೆ. ಸಿ.ಡಿ ಷಡ್ಯಂತ್ರ್ಯದ ಹಿಂದೆ ಇವರು ಭಾಗಿಯಾಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಎಸ್ಐಟಿ ಅಧಿಕಾರಿಗಳು ಮನೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮೂವರು ವ್ಯಕ್ತಿಗಳು ವಾಸವಾಗಿದ್ದ ಮನೆಗಳ ಮೇಲೆ ರೇಡ್ ಮಾಡಿ ಪರಿಶೀಲಿಸ್ತಿರೋ ಅಧಿಕಾರಿಗಳು ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ನಕಲಿ ವಿಪಿಎನ್ ಮೂಲಕ ರಷ್ಯಾ ವೆಬ್ ಸೈಟ್ನಲ್ಲಿ ಜಾರಕಿಹೊಳಿ ಅವರ ವಿಡಿಯೋ ಅಪ್ ಲೋಡ್ ಮಾಡಲಾಗಿತ್ತು. ವಿಡಿಯೋ ಅಪ್ ಲೋಡ್ ಮಾಡಿದ್ದ ಎಥಿಕಲ್ ಹ್ಯಾಕರ್ನ ಮಾಹಿತಿ ಕಲೆ ಹಾಕಿರುವ ಎಸ್ಐಟಿ ತಂಡ ಉಳಿದ ಮಾಹಿತಿಯನ್ನು ಕಲೆಹಾಕುತ್ತಿದೆ. ಕಳೆದ ಮೂರು ತಿಂಗಳಿಂದ ವಿಡಿಯೋ ಕುರಿತಾದ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದೆ. ಮೊದಲ ಹಂತದಲ್ಲಿ ಇಬ್ಬರ ವಿಚಾರಣೆ ನಡೆಸಿ ಬಿಟ್ಟು ಕಳಿಸಿರುವ ಎಸ್ ಐಟಿ ಬೆಂಗಳೂರು ಮೂಲದ ಯುವಕನ ಖಾತೆಗೆ 25 ಲಕ್ಷ ಸಂದಾಯದ ಬಗ್ಗೆ ಶಂಕೆ ವ್ಯಕ್ತಪಡಿಸಿದೆ. ನಿನ್ನೆ ಎಸ್ ಐ ಟಿ ದಿಂದ ಬೆಂಗಳೂರು ಮೂಲದ ಯುವಕನ ತೀವ್ರ ವಿಚಾರಣೆ ನಡೆಸಿದೆ.
ನಿನ್ನೆ ಸುಮಾರು 8 ಗಂಟೆಗಳ ವಿಚಾರಣೆ ನಡೆಸಿರೋ ಎಸ್ ಐಟಿ ತಂಡ ಒಟ್ಟು ಐದು ಜನರನ್ನು ವಿಚಾರಣೆ ನಡೆಸಿದೆ. ವಿಚಾರಣೆ ಸಮಯದಲ್ಲಿ ಐವರ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಸಿಐಡಿಯಲ್ಲಿ ಇಬ್ಬರ ವಿಚಾರಣೆ ನಡೆದಿದೆ. ವಿಚಾರಣೆ ಬಳಿಕ ಮತ್ತೆ ನಾಲ್ವರಿಗೆ ಇಂದು ವಿಚಾರಣೆ ಅಗಮಿಸುವಂತೆ ಸೂಚನೆ ನೀಡಲಾಗಿದೆ.
ಓರ್ವ ವ್ಯಕ್ತಿಯನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಬಳಿಯಲ್ಲಿ ಎಸ್ ಐ ಟಿ ವಶಕ್ಕೆ ಪಡೆದಿತ್ತು. ಆತ ಶಾಂತಿನಗರ ಬಸ್ ನಿಲ್ದಾಣ ಬಳಿಯಿಂದ ಯಶವಂತಪುರಕ್ಕೆ ತೆರಳುವ ದಾರಿ ಮಧ್ಯೆ ವಶಕ್ಕೆ ಪಡೆಯಲಾಗಿತ್ತು. ನಂತರ ಆತನ ಗೆಳತಿಯನ್ನು ರಾಮನಗರದಲ್ಲಿ ವಶಕ್ಕೆ ಪಡೆಯಲಾಗಿತ್ತು. ರಾಮನಗರದಲ್ಲಿ ವಶಕ್ಕೆ ಪಡೆದು ಅಲ್ಲಿಯೇ ವಿಚಾರಣೆ ನಡೆಸಿ ವಾಪಸ್ಸು ಕಳಿಸಲಾಗಿದೆ. ದಿನೇಶ್ ಕಲ್ಲಹಳ್ಳಿ ಜೊತೆಗೆ ನಿರಂತರ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಾಗಿದೆ. ವಿಜಯಪುರ ಮೂಲದ ಮತ್ತೋರ್ವನ್ನು ವಶಕ್ಕೆ ಪಡೆದಿದ್ದ ವಿಚಾರಣೆ ಮಾಡಿದ್ದ ಎಸ್ ಐಟಿ ತಂಡ ರಮೇಶ್ ಜಾರಕಿಹೊಳಿ ಸಿ.ಡಿ. ಕೇಸ್ ತನಿಖೆಯನ್ನು ಚುರುಕುಗೊಳಿಸಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ