HOME » NEWS » State » RAMESH JARKIHOLI SEX CD VIDEO GIRL SAYS SHE WANTED TO COMMIT SUICIDE HER FAMILY LIFE IS IN DANGER SCT

ನಾನು ಡಿಕೆಶಿ ಮನೆಗೆ ಹೋಗಿದ್ದು ನಿಜ, ರಮೇಶ್ ಜಾರಕಿಹೊಳಿ ನಮ್ಮ ತಲೆ ತೆಗೆಯೋಕೂ ಹೇಸಲ್ಲ; ಸಿಡಿ ಯುವತಿ ಆತಂಕ

Ramesh Jarkiholi Sex CD Case: ಸಿಡಿ ಲೀಕ್ ಆದ ಬಳಿಕ ರಾಜಕೀಯ ಬೆಂಬಲಕ್ಕಾಗಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ನಿಜ. ರಮೇಶ್ ಜಾರಕಿಹೊಳಿ ಯಾರ ತಲೆ ತೆಗೆಯೋಕೂ ಹೇಸೋದಿಲ್ಲ, ನನ್ನ ಮನೆಯವರಿಗೆ ರಕ್ಷಣೆ ಕೊಡಿ. ಈ ಟಾರ್ಚರ್​ನಿಂದಾಗಿ ರಮೇಶ್​ ಜಾರಕಿಹೊಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸುತ್ತಿದೆ ಎಂದು ಸಿಡಿ ಸಂತ್ರಸ್ಥೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

news18-kannada
Updated:March 27, 2021, 8:26 AM IST
ನಾನು ಡಿಕೆಶಿ ಮನೆಗೆ ಹೋಗಿದ್ದು ನಿಜ, ರಮೇಶ್ ಜಾರಕಿಹೊಳಿ ನಮ್ಮ ತಲೆ ತೆಗೆಯೋಕೂ ಹೇಸಲ್ಲ; ಸಿಡಿ ಯುವತಿ ಆತಂಕ
ರಮೇಶ್ ಜಾರಕಿಹೊಳಿ ಸಿಡಿ ಯುವತಿ
  • Share this:
ಬೆಂಗಳೂರು (ಮಾ. 27): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕೇಸ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಕೇಳಿಬಂದಿದ್ದು, ಇದುವರೆಗೂ ಬಿಜೆಪಿ ಹೇಳುತ್ತಿದ್ದ, ಈ ಪ್ರಕರಣದ ರೂವಾರಿ ಓರ್ವ ಮಹಾನಾಯಕ ಎಂಬ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿರುವ ಯುವತಿ, ನನಗೆ ಜೀವ ಭಯ ಎದುರಾಗಿದ್ದರಿಂದ, ಯಾವ ರಾಜಕೀಯ ನಾಯಕರ ಬೆಂಬಲವೂ ಇಲ್ಲದಿದ್ದರಿಂದ ಪತ್ರಕರ್ತರೊಬ್ಬರ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಹೋಗಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ.

ಎಸ್​ಐಟಿ ತೆಕ್ಕೆಗೆ ಬಿದ್ದಿರುವ ಈ ಪ್ರಕರಣದಲ್ಲಿ ಇಂದು ಸಂಜೆ ಭಾರೀ ಪ್ರಮುಖ ವಿಷಯವನ್ನು ಬಹಿರಂಗಪಡಿಸುವುದಾಗಿ ಜಾರಕಿಹೊಳಿ ಘೋಷಿಸಿದ್ದು, ಎಲ್ಲರ ದೃಷ್ಟಿ ಅವರತ್ತ ನೆಟ್ಟಿದೆ. ಇದರ ನಡುವೆ ತಲೆಮರೆಸಿಕೊಂಡಿರುವ ಸಿಡಿ ಸಂತ್ರಸ್ಥೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಆಕೆ ಇನ್ನೂ ಯಾರ ಕೈಗೂ ಸಿಕ್ಕಿಲ್ಲ. ಆದರೆ, ವಿಡಿಯೋ ಮೂಲಕ ಹೇಳಿಕೆಗಳನ್ನು ಎಸ್​ಐಟಿಗೆ ತಲುಪಿಸುತ್ತಿರುವ ಆಕೆ ನಿನ್ನೆ ತನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ಕೇಸನ್ನೂ ದಾಖಲಿಸಿದ್ದಾರೆ. ಇಷ್ಟೇ ಅಲ್ಲದೆ, ಆಕೆ ತನ್ನ ಕುಟುಂಬಸ್ಥರೊಂದಿಗೆ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಸಂತ್ರಸ್ಥ ಯುವತಿ ತಾನು ಡಿ.ಕೆ. ಶಿವಕುಮಾರ್ ಮನೆ ಬಳಿ ಬಂದಿದ್ದೇನೆ ಎಂದು ತನ್ನ ಸೋದರನಿಗೆ ಹೇಳಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ರಾತ್ರೋರಾತ್ರಿ ಕಾಂಗ್ರೆಸ್​ ಕಡೆಗೆ ಈ ಕೇಸ್ ತಿರುಗಿದೆ.

ಲೀಕ್ ಆಗಿರುವ ಆಡಿಯೋದಲ್ಲಿ ಮಾತನಾಡಿದ್ದು ನಾನೇ. ನನಗೆ ಎಲ್ಲರೂ ತುಂಬ ಹಿಂಸೆ ಕೊಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸುತ್ತಿದೆ. ಬದುಕಬೇಕೋ ಸಾಯಬೇಕೋ ಗೊತ್ತಾಗುತ್ತಿಲ್ಲ. ಸಿ.ಡಿ ಬಿಡುಗಡೆಯಾದ ದಿನ ನನಗೆ ತುಂಬ ಆಘಾತವಾಗಿತ್ತು. ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಹೀಗಾಗಿ, ನನಗೆ ಪರಿಚಯವಿದ್ದ ನರೇಶ್ ಎಂಬ ಪತ್ರಕರ್ತನಿಗೆ ಫೋನ್ ಮಾಡಿ ಸಹಾಯ ಕೇಳಿದೆ. ಆಗ ಅವರು ನನಗೆ ಧೈರ್ಯ ತುಂಬಿ, ಈ ಕೇಸ್​ನಲ್ಲಿ ರಾಜಕೀಯ ಬೆಂಬಲ ತುಂಬ ಮುಖ್ಯ. ನಾವು ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿ ಮಾತನಾಡಿ, ವಿಷಯ ತಿಳಿಸೋಣ ಎಂದು ಹೇಳಿದರು. ಆದರೆ, ಅವರ ಮನೆಗೆ ಹೋದರೂ ನಮಗೆ ಡಿಕೆ ಶಿವಕುಮಾರ್ ಸಿಗಲಿಲ್ಲ. ಅಲ್ಲಿ ಕಾಯುತ್ತಾ ಕುಳಿತರೆ ಇನ್ನಷ್ಟು ಅಪಾಯ ಎಂದು ಬೇಗ ಹೊರಟು ಬಂದೆವು. ಆಗ ನಾನು ಅಮ್ಮನಿಗೆ ಫೋನ್ ಮಾಡಿ ಧೈರ್ಯ ತುಂಬಿದೆ. ಈಗ ನನ್ನ ಅಪ್ಪ, ಅಮ್ಮ ಎಲ್ಲಿದ್ದಾರೋ ಗೊತ್ತಿಲ್ಲ. ನಾನು ಸೇಫ್ ಆಗಿದ್ದೀನಿ, ಕಿಡ್ನಾಪ್ ಆಗಿಲ್ಲ ಎಂದು ಸಂತ್ರಸ್ಥ ಯುವತಿ ಮತ್ತೊಂದು ವಿಡಿಯೋ ಹೇಳಿಕೆ ಕಳುಹಿಸಿದ್ದಾರೆ.
Youtube Video

ಆ ರಮೇಶ್ ಜಾರಕಿಹೊಳಿ ಸರ್ಕಾರವನ್ನೇ ಬೀಳಿಸಿದವನು ಅಂತ ಹೇಳುತ್ತಾರೆ. ಅವರು ಏನು ಮಾಡೋಕೂ ಹೇಸುವುದಿಲ್ಲ. ಇಷ್ಟೆಲ್ಲ ಆದಮೇಲೆ ನನ್ನ ಅಪ್ಪ- ಅಮ್ಮನ ತಲೆ ತೆಗಿಯೋಕೂ ಹೇಸುವುದಿಲ್ಲ. ನನ್ನ ಅಪ್ಪ, ಅಮ್ಮ, ಇಬ್ಬರು ತಮ್ಮಂದಿರು, ಅಜ್ಜಿಗೆ ರಕ್ಷಣೆ ಕೊಡಬೇಕೆಂದು ಎಸ್​ಐಟಿಗೆ ಮನವಿ ಮಾಡುತ್ತಿದ್ದೇನೆ. ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಅವರನ್ನು ಬೆಂಗಳೂರಿಗೆ ಕರೆತಂದು ರಕ್ಷಣೆ ಕೊಡಿ ಎಂದು ವಿಡಿಯೋದಲ್ಲಿ ಸಂತ್ರಸ್ಥೆ ಮನವಿ ಮಾಡಿದ್ದಾರೆ.
Published by: Sushma Chakre
First published: March 27, 2021, 8:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories