HOME » NEWS » State » RAMESH JARKIHOLI SEX CD SCANDAL DINESH KALLAHALLI NOT ATTEND HEARING TODAY DUE TO SECURITY PURPOSE LG

Ramesh Jarkiholi CD Case: ಭದ್ರತೆ ಕೊರತೆ ಕಾರಣ ನೀಡಿ ವಿಚಾರಣೆಗೆ ಗೈರಾದ ದೂರುದಾರ ದಿನೇಶ್ ಕಲ್ಲಹಳ್ಳಿ

Ramesh Jarkiholi Sex CD Scandal: ಕಬ್ಬನ್ ಪಾರ್ಕ್​ ಠಾಣೆ ಇನ್ಸ್​ಪೆಕ್ಟರ್​ ಮಾರುತಿ ಅವರಿಗೆ ದಿನೇಶ್​ ಕಲ್ಲಹಳ್ಳಿ  ಅವರು ಪತ್ರ ಬರೆದು ರವಾನಿಸಿದ್ದಾರೆ. ನನಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ಭದ್ರತೆ ಇಲ್ಲ. ಹಾಗಾಗಿ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗುತ್ತಿದ್ದೇನೆ. ಭದ್ರತೆ ಒದಗಿಸಿದರೆ ಮಾರ್ಚ್​ 9ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

news18-kannada
Updated:March 4, 2021, 11:20 AM IST
Ramesh Jarkiholi CD Case: ಭದ್ರತೆ ಕೊರತೆ ಕಾರಣ ನೀಡಿ ವಿಚಾರಣೆಗೆ ಗೈರಾದ ದೂರುದಾರ ದಿನೇಶ್ ಕಲ್ಲಹಳ್ಳಿ
ದಿನೇಶ್ ಕಲ್ಲಹಳ್ಳಿ
  • Share this:
ಬೆಂಗಳೂರು(ಮಾ.04): ರಮೇಶ್​ ಜಾರಕಿಹೊಳಿ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಆರ್​ಟಿಐ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಭದ್ರತೆ ಕೊರತೆಯ ಕಾರಣ ನೀಡಿ ಇಂದು ವಿಚಾರಣೆಗೆ ಗೈರಾಗಿದ್ದಾರೆ. ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಕಬ್ಬನ್​ ಪಾರ್ಕ್​ ಪೊಲೀಸ್ ಠಾಣೆಯಿಂದ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೋಟಿಸ್ ನೀಡಲಾಗಿತ್ತು. ಅದರಂತೆ ಇಂದು ದೂರುದಾರ ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ದಿನೇಶ್ ಅವರು ತನಗೆ ವೈಯಕ್ತಿಕ ಭದ್ರತೆ ಇಲ್ಲದ ಕಾರಣ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಹೇಳಿ ಪತ್ರ ರವಾನಿಸಿದ್ದಾರೆ.

ಕಬ್ಬನ್ ಪಾರ್ಕ್​ ಠಾಣೆ ಇನ್ಸ್​ಪೆಕ್ಟರ್​ ಮಾರುತಿ ಅವರಿಗೆ ದಿನೇಶ್​ ಕಲ್ಲಹಳ್ಳಿ  ಅವರು ಪತ್ರ ಬರೆದು ರವಾನಿಸಿದ್ದಾರೆ. ನನಗೆ ಜೀವ ಬೆದರಿಕೆ ಇರುವುದರಿಂದ ಸೂಕ್ತ ಭದ್ರತೆ ಇಲ್ಲ. ಹಾಗಾಗಿ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗುತ್ತಿದ್ದೇನೆ. ಭದ್ರತೆ ಒದಗಿಸಿದರೆ ಮಾರ್ಚ್​ 9ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

CITU Protest: ಇಂದು ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಟ್ರಾಫಿಕ್ ಜಾಮ್​ ಆಗುವ ಸಾಧ್ಯತೆ

‘ರಮೇಶ್​ ಜಾರಕಿಹೊಳಿ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ಬಳಿಕ ನನಗೆ ಜೀವ ಬೆದರಿಕೆಯ ಕರೆಗಳು ಬರಲು ಶುರುವಾದವು. ಇದರಿಂದ ನನಗೆ ಆತಂಕ ಇದೆ. ಯಾವುದೇ ವೈಯಕ್ತಿಕ ಭದ್ರತೆಯನ್ನೂ ನನಗೆ ನೀಡಿಲ್ಲ. ಹೀಗಾಗಿ ಇಂದಿನ ವಿಚಾರಣೆಗೆ ನಾನು ಗೈರಾಗುತ್ತಿದ್ದೇನೆ. ನನಗೆ ಸೂಕ್ತ ಭದ್ರತೆ ಒದಗಿಸಿದರೆ ಮಾರ್ಚ್​ 9ರಂದು ವಿಚಾರಣೆಗೆ ಹಾಜರಾಗುತ್ತೇನೆ. ನನಗೆ ಸೂಕ್ತ ಭದ್ರತೆ ಕೊಡಿ‘ ಎಂದು ಮನವಿ ಮಾಡಿದ್ದಾರೆ.

ಇನ್ಸ್ ಪೆಕ್ಟರ್​​  ಮಾರುತಿ ಅವರಿಗೆ ದಿನೇಶ್ ಕಲ್ಲಹಳ್ಳು ಕಳಿಸಿರುವ ಪತ್ರ ತಲುಪಿದೆ. ಈ ಬಗ್ಗೆ ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ. ಆ ಬಳಿಕ ಭದ್ರತೆ ಬಗ್ಗೆ ಪರಿಶೀಲಿಸಿ ಮುಂದಿನ ದಿನಾಂಕ ತಿಳಿಸುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು  ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
Published by: Latha CG
First published: March 4, 2021, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories