HOME » NEWS » State » RAMESH JARKIHOLI SEX CD IS FAKE SAYS BALACHANDRA JARKIHOLI MAK

Ramesh Jarkiholi CD Case: ಆ ಸೆಕ್ಸ್​ ಸಿಡಿ ನಕಲಿ, ನಮ್ಮ ಕುಟುಂಬದ ಹೆಸರು ಕೆಡಿಸಲು ಷಡ್ಯಂತ್ರ ನಡೆದಿದೆ; ಬಾಲಚಂದ್ರ ಜಾರಕಿಹೊಳಿ

ರಮೇಶ್​ ಜಾರಕಿಹೊಳಿ ವಿರುದ್ಧ ತಾವು ನೀಡಿದ್ದ ದೂರನ್ನು ದಿನೇಶ್​ ಕಲ್ಲಹಳ್ಳಿ ಹಿಂಪಡೆದ ಬೆನ್ನಿಗೆ ಪತ್ರಿಕಾಗೋಷ್ಠಿ ಕರೆದಿರುವ ಬಾಲಚಂದ್ರ ಜಾರಕಿಹೊಳಿ ಈ ಮೂಲಕ ಆ ವಿಡಿಯೋ ಸಿಡಿ ಸುಳ್ಳು ಎಂಬುದು ಸಾಬೀತಾಗಿದೆ ಎಂದಿದ್ದಾರೆ.

news18-kannada
Updated:March 7, 2021, 5:53 PM IST
Ramesh Jarkiholi CD Case: ಆ ಸೆಕ್ಸ್​ ಸಿಡಿ ನಕಲಿ, ನಮ್ಮ ಕುಟುಂಬದ ಹೆಸರು ಕೆಡಿಸಲು ಷಡ್ಯಂತ್ರ ನಡೆದಿದೆ; ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ.
  • Share this:
ಬೆಂಗಳೂರು (ಮಾರ್ಚ್​​ 07); ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿರುವ ಸೆಕ್ಸ್​ ಸಿಡಿ ಸಂಪೂರ್ಣ ನಕಲಿ. ಇದರ ಹಿಂದೆ ರಮೇಶ್ ಜಾರಕಿಹೊಳಿ ಮತ್ತು ನಮ್ಮ ಜಾರಕಿಹೊಳಿ ಕುಟುಂಬದ ಹೆಸರನ್ನು ಕೆಡಿಸುವ ಷಡ್ಯಂತ್ರ ಇದೆ. ಈ ಕುರಿತು ಸಂಪೂರ್ಣ ತನಿಖೆಯಾಗಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದ್ದಾರೆ. ರಮೇಶ್​ ಜಾರಕಿಹೊಳಿ ತಮ್ಮ ಸಚಿವ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ಯುವತಿಗೆ ಕೆಲಸಕೊಡಿವ ಆಮಿಷ ಒಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಕಳೆದ ವಾರ ನಗರದ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಇಂದು ಅವರ ತಮ್ಮ ದೂರನ್ನು ಹಿಂಪಡೆದ ಬೆನ್ನಿಗೆ ಪತ್ರಿಕಾಗೋಷ್ಠಿ ಕರೆದಿರುವ ಬಾಲಚಂದ್ರ ಜಾರಕಿಹೊಳಿ "ಈ ಮೂಲಕ ಆ ವಿಡಿಯೋ ಸಿಡಿ ಸುಳ್ಳು ಎಂಬುದು ಸಾಬೀತಾಗಿದೆ" ಎಂದಿದ್ದಾರೆ.

ಈ ಕುರಿತು ಇಂದು ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, "ರಮೇಶ್ ಜಾರಕಿಹೊಳಿ ವಿರುದ್ಧ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ಸು ಪಡೆದಿದ್ದಾರೆ. ಅದಕ್ಕಾಗಿ ನಾನು ಈ ಸುದ್ದಿಗೋಷ್ಢಿ ಮಾಡುತ್ತಿದ್ದೇನೆ. ಇವತ್ತು ಗಂಭೀರವಾದ ವಿಷಯ ಪ್ರಕಟ ಮಾಡ್ತೇನೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಮಹಿಳೆಯನ್ನು ಸಂತ್ರಸ್ಥ ಮಹಿಳೆ ಅಂತಾ ಕರೀಬೇಡಿ ದೂರು ಕೊಡೋಕು ಮುನ್ನ ಈ ವೀಡಿಯೋ ವನ್ನು ರಷ್ಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದಕ್ಕಾಗಿಯೇ 17 ಕೋಟಿ‌ ಖರ್ಚು ಮಾಡಿದ್ದಾರೆ. ಇದರ ಹಿಂದೆ ಮಹಿಳೆ ಇದ್ದಾರೆ, ಇದರ ಹಿಂದೆ ನಾಲ್ಕು ಜನ ಇದ್ದಾರೆ, ಈ ನಾಲ್ವರ ಹಿಂದೆ ಮೂವರ ಟೀಮ್ ಇದೆ. ರಮೇಶ್ ಜಾರಕಿಹೊಳಿ ಹೆಸರನ್ನು ಹಾಳುಮಾಡಬೇಕು ಎಂದು ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ.  ಇದಕ್ಕಾಗಿ 15 ಕೋಟಿ ಖರ್ಚು ಮಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ತನಿಖೆಯನ್ನು ಸಿಬಿಐಗೆ ವಹಿಸಬೇಕು. ರಮೇಶ್ ಜಾರಕಿಹೊಳಿ ದಯಮಾಡಿ ಹೊರಗಡೆ ಬರಬೇಕು. ನೀವು ಬಂದು ಸಿಎಂ ಗೆ ದೂರು ಕೊಡಬೇಕು. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು" ಎಂದು ಬಾಲಚಂದ್ರಜಾರಕಿಹೊಳಿ ಒತ್ತಾಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಮಹಿಳೆಯ ಬಗ್ಗೆಯೂ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, "ಆ ಮಹಿಳೆಗೆ ಕೆಲವರಿಂದ ಆಮಿಷ ಒಡ್ಡಲಾಗಿದೆ. ನೀನು ಹೆದರಬೇಡ, ನಿನಗೆ 50 ಲಕ್ಷ ಕೊಡ್ತೇನೆ, ನಿನಗೆ ದುಬೈನಲ್ಲಿ ಜಾಬ್ ಕೊಡ್ತೇನೆ ಎಂದು ಆ ಮಹಿಳೆಗೆ ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಹಾಗೂ ರಮೇಶ್ ಕುಟುಂಬಕ್ಕೆ ಮುಜುಗರ ತರಲು ಷಡ್ಯಂತ್ರ ಮಾಡಿದ್ದಾರೆ.

ಇದನ್ನೂ ಓದಿ: Ramesh Jarkiholi CD Case: ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ನೀಡಿದ್ದ ಲೈಂಗಿಕ ದೌರ್ಜನ್ಯದ ದೂರನ್ನು ಹಿಂಪಡೆದ ದಿನೇಶ್​ ಕಲ್ಲಹಳ್ಳಿ

ಕೇವಲ ರಾಜಕೀಯ ಅಲ್ಲ ಬೇರೆ ಬೇರೆ ಕ್ಷೇತ್ರ ಗಳಲ್ಲಿ ಇರೋರು ಇದರ ಹಿಂದೆ ಇದ್ದಾರೆ ದಿನೇಶ್ ಕಲ್ಲಹಳ್ಳಿಗೆ ಅವ್ರು ಮಿಸ್ ಗೈಡ್ ಆಗಿರಬಹುದು. ಅವರನ್ನೂ ಈ ಪ್ರಕರಣದಲ್ಲಿ ಬಳಸಿಕೊಂಡಿರಬಹುದು. ಇದೊಂದು ಹನಿ ಟ್ರ್ಯಾಪ್ ಪ್ರಕರಣ ಆಗಿದೆ. ಹೀಗಾಗಿ ಪೊಲೀಸರು ಆ ಸಿಡಿಯನ್ನು ಲ್ಯಾಬ್ ಗೆ ಕಳುಹಿಸಿಬೇಕು. ಲ್ಯಾಬ್ ಗೆ ಹೋಗಿ ವೀಡಿಯೋ ಬಗ್ಗೆ ವರದಿ ಬರಬೇಕು.
ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ ಮಾಡುವ ತಂಡ ರಾಜ್ಯದಲ್ಲಿ ಇದೆ. ಶೀಘ್ರದಲ್ಲೇ ಈ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕು. ಅದಕ್ಕಾಗಿ ಸೂಕ್ತವಾಗಿ ತನಿಖೆ ಆಗಬೇಕು.ಹನಿಟ್ರ್ಯಾಪ್ ತಂಡದ ಮೊಬೈಲ್ ಸೇರಿದಂತೆ ಅವರ ಎಲ್ಲ ಮಾಹಿತಿ ಕೂಡ ಪೊಲೀಸರ ಬಳಿ ಮಾಹಿತಿ ಇದೆ" ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
Published by: MAshok Kumar
First published: March 7, 2021, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories