ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ; ಇಂದು ಮ್ಯಾಜಿಸ್ಟ್ರೇಟ್​ ಮುಂದೆ ಸಿಡಿ ಯುವತಿ ಹಾಜರು ಸಾಧ್ಯತೆ

Ramesh Jarkiholi CD Case: ಇಂದು ಮಧ್ಯಾಹ್ನದೊಳಗೆ ತನ್ನ ವಕೀಲರ ಮೂಲಕ ಸಿಡಿ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಹೇಳಿಕೆ ನೀಡುವ ಸಾಧ್ಯತೆಗಳಿವೆ. ಯುವತಿ ಭದ್ರತೆಗೆ ಮಹಿಳಾ ಸಬ್ ಇನ್​ಸ್ಪೆಕ್ಟರ್ ಒಳಗೊಂಡಂತೆ ಆರು ಸಿಬ್ಬಂದಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ.

ಸಿಡಿ ಯುವತಿ

ಸಿಡಿ ಯುವತಿ

 • Share this:
  ಬೆಂಗಳೂರು (ಮಾ. 30): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇಂದಾದರೂ ತಾರ್ಕಿಕ ಅಂತ್ಯ ಸಿಗಲಿದೆಯಾ? ಎಬ ಕುತೂಹಲ ಉಂಟಾಗಿದೆ. ಯುವತಿಯೊಂದಿಗಿನ ರಮೇಶ್ ಜಾರಕಿಹೊಳಿ ಸೆಕ್ಸ್​ ವಿಡಿಯೋ ರಿಲೀಸ್ ಆಗುತ್ತಿದ್ದಂತೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ತಲೆಮರೆಸಿಕೊಂಡಿರುವ ಯುವತಿ ಇನ್ನೂ ಎಸ್​ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಲ್ಲ. ಅಜ್ಞಾತ ಸ್ಥಳದಿಂದಲೇ ವಿಡಿಯೋ ಸಂದೇಶ ರವಾನಿಸುತ್ತಿರುವ, ತನ್ನ ವಕೀಲರ ಮೂಲಕ ದೂರು ಕೊಡಿಸಿರುವ ಆ ಯುವತಿ ಇಂದು ಮಧ್ಯಾಹ್ನದೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವ ಸಾಧ್ಯತೆಯಿದೆ.

  ನಿನ್ನೆಯೇ ಸಿಡಿ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ, ತನ್ನ ಹೇಳಿಕೆ ದಾಖಲಿಸುತ್ತಾರೆ ಎನ್ನಲಾಗಿತ್ತು. ಆದರೆ, ಆಕೆಯ ವಕೀಲರು ಮಾತ್ರ ಹಾಜರಾಗಿ, ಮಾಹಿತಿ ಪಡೆದಿದ್ದರು. ಬಳಿಕ ಯುವತಿಯ ವಕೀಲ ಜಗದೀಶ್ ಅವರ ಮೂಲಕ ಎಸ್​ಐಟಿಯವರು 3ನೇ ಬಾರಿಗೆ ಯುವತಿಗೆ ನೋಟಿಸ್ ಕೊಟ್ಟಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಹೀಗಾಗಿ, ಆ ಯುವತಿ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಅಥವಾ ಈ ಹಿಂದೆ ವಿಡಿಯೋದಲ್ಲಿ ಮನವಿ ಮಾಡಿದಂತೆ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.

  ಇಂದು ಮಧ್ಯಾಹ್ನದೊಳಗೆ ತನ್ನ ವಕೀಲರ ಮೂಲಕ ಸಿಡಿ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ಹೇಳಿಕೆ ನೀಡುವ ಸಾಧ್ಯತೆಗಳೇ ಹೆಚ್ಚಾಗಿವೆ ಎನ್ನಲಾಗುತ್ತಿದೆ. ಯುವತಿಯನ್ನ ಯಾವಾಗ ಹಾಜರುಪಡಿಸಬೇಕು ಎಂಬುದು ಕೋರ್ಟ್​ನಿಂದ ಇ-ಮೇಲ್ ಮೂಲಕ ಮಾಹಿತಿ ಸಿಗೋದಾಗಿ ವಕೀಲ ಜಗದೀಶ್‌‌ ಹೇಳಿದ್ದರು. ಯುವತಿಯನ್ನು ಕೋರ್ಟ್​ನ ನ್ಯಾಯಾಧೀಶರ ಮುಂದೆ ಯಾವ ಸಮಯದಲ್ಲಿ, ಎಲ್ಲಿ, ಹೇಗೆ? ಹಾಜರುಪಡಿಸಬೇಕು ಎಂಬ ಬಗ್ಗೆ ಅನುಮತಿ ಸಿಗಬೇಕು ಎಂದಿದ್ದರು.

  ಇದನ್ನೂ ಓದಿ: Ramesh Jarkiholi CD Case: ಸಿಡಿ ಯುವತಿಗೆ ಮೂರನೇ ಬಾರಿ ನೊಟೀಸ್​ ಜಾರಿ; ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ

  ಸದ್ಯ ಮಹಿಳಾ ಸಬ್ ಇನ್​ಸ್ಪೆಕ್ಟರ್ ಒಳಗೊಂಡಂತೆ ಯುವತಿ ಭದ್ರತೆಗೆ ಆರು ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಲಾಗಿದೆ. ಒಂದುವೇಳೆ ನೇರವಾಗಿ ಯುವತಿ ಕೋರ್ಟ್ ಗೆ ಹಾಜರಾದರೂ ಸಹ ಎಸ್ ಐಟಿ ಭದ್ರತೆ ನೀಡಲಿದೆ. ಕೋರ್ಟ್​ನಿಂದ ಯುವತಿಯನ್ನು ಹಾಜರುಪಡಿಸಲು ಅನುಮತಿ ಸಿಕ್ಕ ಕೂಡಲೇ ಯುವತಿ ಪರ ವಕೀಲರು ಎಸ್​ಐಟಿಗೆ ಮಾಹಿತಿ ನೀಡಬೇಕಿದೆ‌‌‌‌‌.

  ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸರಿಂದ ಮೂರು ಬಾರಿ ನೋಟೀಸ್ ಕೊಟ್ಟರೂ ಆ ಯುವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದೆಡೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಲು ಮುಂದಾಗಿರೋ ಯುವತಿ ಮತ್ತೊಂದ್ಕಡೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಟ್ಟಿರೋ ಪೊಲೀಸರು... ಹೀಗಾಗಿ, ಯುವತಿಯ ನಡೆ ಬಗ್ಗೆ ಕುತೂಹಲ ಹೆಚ್ಚಾಗಿತ್ತು.

  ಎಸ್​ಐಟಿಯಿಂದ ನೋಟಿಸ್ ನೀಡಿದರೂ ವಿಚಾರಣೆಗೆ ಬಾರದೆ ತಲೆಮರೆಸಿಕೊಂಡಿರುವ ಯುವತಿ ತನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದಾರೆ. ನನ್ನ ತಂದೆ-ತಾಯಿ ಎದುರು ಎಸ್​ಐಟಿಯವರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ, ನಡೆದ ವಿಷಯವನ್ನು ಹೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದ ಯುವತಿ ಮತ್ತೆ ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದರು. ನ್ಯಾಯಾಧೀಶರ ಎದುರು ನಾನು ನನ್ನ ಹೇಳಿಕೆ ನೀಡುತ್ತೇನೆ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದರು. ತನಗೆ ಜೀವ ಬೆದರಿಕೆ ಇದೆ ಎಂದು ಯುವತಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದರು. ತನಗೂ ತನ್ನ ಕುಟುಂಬಕ್ಕೂ ಸೂಕ್ತ ರಕ್ಷಣೆ ನೀಡಬೇಕು ಎಂದು ಸರ್ಕಾರದ ಬಳಿ ಮನವಿ ಮಾಡಿದ್ದರು. ಹಾಗೇ, ಈ ಬಗ್ಗೆ ಹೈಕೋರ್ಟ್​​ ನ್ಯಾಯಮೂರ್ತಿಗೂ ಪತ್ರ ಬರೆದಿದ್ದರು.
  Published by:Sushma Chakre
  First published: