ಅಜ್ಞಾತಸ್ಥಳದಿಂದ ಬೆಂಗಳೂರಿಗೆ ಬಂದಿಳಿದ ಸಿಡಿ ಯುವತಿ; ಕೆಲವೇ ಕ್ಷಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರು

Ramesh Jarkiholi Sex CD Case | ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದಲ್ಲಿ ಹೇಳಿಕೆ ದಾಖಲಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಯುವತಿಗೆ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಪರ ವಕೀಲರು ಆಕೆಯನ್ನು ಕೋರ್ಟ್​ಗೆ ಕರೆದುಕೊಂಡು ಬರುತ್ತಿದ್ದಾರೆ. 

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

 • Share this:
  ಬೆಂಗಳೂರು (ಮಾ. 30): ರಮೇಶ್ ಜಾರಕಿಹೊಳಿ ಅವರ ಸೆಕ್ಸ್​ ಸಿಡಿ ಬಿಡುಗಡೆಯಾದ ದಿನದಿಂದ ಆ ವಿಡಿಯೋದಲ್ಲಿದ್ದ ಯುವತಿ ತಲೆಮರೆಸಿಕೊಂಡಿದ್ದರು. ಅಜ್ಞಾತವಾಗಿದ್ದುಕೊಂಡೇ 5 ವಿಡಿಯೋ ಸಂದೇಶಗಳನ್ನು ಕಳುಹಿಸಿದ್ದ ಸಂತ್ರಸ್ಥ ಯುವತಿ ಕೊನೆಗೂ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ವಕೀಲರ ತಂಡದ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಯುವತಿಗೆ ನಾಲ್ಕು ಕಾರುಗಳು ಬೆಂಗಾವಲು ಭದ್ರತೆ ಒದಗಿಸಿವೆ. ಯುವತಿ ನೇರವಾಗಿ ಕೋರ್ಟ್​ಗೆ ಹಾಜರಾಗುವ ಸಾಧ್ಯತೆಯಿದ್ದು, ಈಗಾಗಲೇ ಕೋರ್ಟ್ ಬಳಿ ಎಸ್​ಐಟಿಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಕೋರ್ಟ್​ನಲ್ಲಿ ಯುವತಿಗೆ ಹೇಳಿಕೆ ದಾಖಲಿಸಲು ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಪರ ವಕೀಲರು ಆಕೆಯನ್ನು ಕೋರ್ಟ್​ಗೆ ಕರೆದುಕೊಂಡು ಬರುತ್ತಿದ್ದಾರೆ. 

  ಸಿಡಿ ಯುವತಿಗೆ ಕಾಂಗ್ರೆಸ್ ನಾಯಕರಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಇದರ ನಡುವೆ ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಕೂಡ ಕೇಳಿಬಂದಿತ್ತು. ಡಿಕೆ ಶಿವಕುಮಾರ್ ಅವರೇ ನಮ್ಮ ಮಗಳನ್ನು ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ವಿರುದ್ಧ ಪಿತೂರಿ ನಡೆಸಿದ್ದಾರೆ. ಅವರೇ ಆಕೆಯನ್ನು ಬಚ್ಚಿಟ್ಟಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಈ ಪ್ರಕರಣದಲ್ಲಿ ಸಂತ್ರಸ್ಥ ಯುವತಿ ಇಂದು ಕೋರ್ಟ್​ ಮುಂದೆ ಏನು ಹೇಳಿಕೆ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ; ಇಂದು ಮ್ಯಾಜಿಸ್ಟ್ರೇಟ್​ ಮುಂದೆ ಸಿಡಿ ಯುವತಿ ಹಾಜರು ಸಾಧ್ಯತೆ

  ಈ ಹಿಂದೆ, ನನಗೆ ರಮೇಶ್ ಜಾರಕಿಹೊಳಿ ಕಡೆಯಿಂದ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡಿ ಎಂದು ವಿಡಿಯೋ ಸಂದೇಶದ ಮೂಲಕ ಯುವತಿ ಪೊಲೀಸರಿಗೆ ಮನವಿ ಮಾಡಿದ್ದರು. ಅಲ್ಲದೆ, ಎಸ್​ಐಟಿ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಯುವತಿ ಕೋರ್ಟ್​ನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆಯೇ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಲು ಸಿಡಿ ಯುವತಿ ಬೆಂಗಳೂರಿಗೆ ಬಂದಿದ್ದಾರೆ.

  ಈ ಪ್ರಕರಣದಲ್ಲಿ ಹಾಜರಾಗುವಂತೆ ಯುವತಿಗೆ ಈಗಾಗಲೇ ಎಸ್​ಐಟಿಯಿಂದ 3 ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ಆಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ತನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧವೇ ದೂರು ದಾಖಲಿಸಿದ್ದ ಯುವತಿ ತನಗೆ ಮತ್ತು ತನ್ನ ಮನೆಯವರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದರು.

  ಆ ರಮೇಶ್ ಜಾರಕಿಹೊಳಿ ಸರ್ಕಾರವನ್ನೇ ಬೀಳಿಸಿದವನು ಅಂತ ಹೇಳುತ್ತಾರೆ. ಅವರು ಏನು ಮಾಡೋಕೂ ಹೇಸುವುದಿಲ್ಲ. ಇಷ್ಟೆಲ್ಲ ಆದಮೇಲೆ ನನ್ನ ಅಪ್ಪ- ಅಮ್ಮನ ತಲೆ ತೆಗಿಯೋಕೂ ಹೇಸುವುದಿಲ್ಲ. ನನ್ನ ಅಪ್ಪ, ಅಮ್ಮ, ಇಬ್ಬರು ತಮ್ಮಂದಿರು, ಅಜ್ಜಿಗೆ ರಕ್ಷಣೆ ಕೊಡಬೇಕೆಂದು ಎಸ್​ಐಟಿಗೆ ಮನವಿ ಮಾಡುತ್ತಿದ್ದೇನೆ. ನನ್ನ ಅಪ್ಪ-ಅಮ್ಮನಿಂದ ಬಲವಂತವಾಗಿ ತಮಗೆ ಬೇಕಾದಂತೆ ಹೇಳಿಕೆ ಕೊಡಿಸಿದ್ದಾರೆ ಎಂದು ಕೂಡ ಯುವತಿ ಆರೋಪಿಸಿದ್ದರು.
  Published by:Sushma Chakre
  First published: