ಬೆಂಗಳೂರು (ಮಾ. 18): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್ ಸಿಡಿಯಲ್ಲಿರುವ ಯುವತಿಯನ್ನು ಕೊನೆಗೂ ಎಸ್ಐಟಿ ತಂಡ ಪತ್ತೆಹಚ್ಚಿದೆ. ತಮ್ಮ ಮಗಳನ್ನು ಕಿಡ್ನಾಪ್ ಮಾಡಿ, ಹೆದರಿಸಿ, ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಆ ಯುವತಿಯ ತಂದೆ-ತಾಯಿ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಈ ಸೆಕ್ಸ್ ಸಿಡಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ವಿಡಿಯೋದಲ್ಲಿದ್ದ ಯುವತಿಯ ಮನೆಗೆ ನಿನ್ನೆ ಎಸ್ಐಟಿ ತಂಡ ಏಕಾಏಕಿ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಈ ವೇಳೆ ಆ ಯುವತಿಯ ಮನೆಯಲ್ಲಿ ಲಕ್ಷಾಂತರ ರೂ. ಪತ್ತೆಯಾಗಿರುವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.
ರಮೇಶ್ ಜಾರಕಿಹೊಳಿ ಅವರ ಜೊತೆ ವಿಡಿಯೋದಲ್ಲಿದ್ದ ಯುವತಿ ವಾಸವಾಗಿದ್ದ ಬೆಂಗಳೂರಿನ ಆರ್ಟಿ ನಗರದಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ 10 ಗಂಟೆಯವರೆಗೂ ಎಸ್ಐಟಿ ತಂಡ ಪರಿಶೀಲನೆ ನಡೆಸಿತ್ತು. ಈ ವೇಳೆ ಆಕೆಯ ಮನೆಯಲ್ಲಿ 9.2 ಲಕ್ಷ ರೂ. ಹಣ ಪತ್ತೆಯಾಗಿದೆ. ಆ ಹಣವನ್ನು ವಶಕ್ಕೆ ಪಡೆದು, ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿರುವ ಯುವತಿ ವಾಸವಿದ್ದ ಮನೆಗೆ ಎಸ್ಐಟಿ ತಂಡ ದಿಢೀರ್ ಭೇಟಿ ನೀಡಿತ್ತು. ಎಸಿಪಿ ಧರ್ಮೇಂದ್ರ ನೇತೃತ್ವದ ಎಸ್ಐಟಿ ತಂಡದಿಂದ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಯುವತಿ ವಾಸವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಸಿಡಿಯಲ್ಲಿರುವ ಯುವತಿಯನ್ನು ಯಾರಾದರೂ ಇತ್ತೀಚಿಗೆ ಮತ್ತೆ ಸಂಪರ್ಕಿಸಿದ್ದರಾ? ಆಕೆ ಇಲ್ಲಿದ್ದ ಸಂದರ್ಭದಲ್ಲಿ ಬೇರೆ ಯಾರಾದರೂ ಇಲ್ಲಿ ಭೇಟಿ ನೀಡುತ್ತಿದ್ದರಾ? ಎಂಬ ಬಗ್ಗೆ ಕಟ್ಟಡದ ಮಾಲೀಕರ ಬಳಿ ಪ್ರಶ್ನೆ ಮಾಡಲಾಗಿದೆ.
ಇದನ್ನೂ ಓದಿ: Ramesh Jarkiholi CD Case: ತನಿಖೆ ವೇಗ ಪಡೆದುಕೊಂಡ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
ರಮೇಶ್ ಜಾರಕಿಹೊಳಿ ಜೊತೆಗಿನ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ನಾಪತ್ತೆಯಾಗಿದ್ದ ಯುವತಿ 3-4 ದಿನಗಳ ಹಿಂದೆ ಕಟ್ಟಡದ ಮಾಲೀಕರಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದಳು ಎಂಬ ಮಾಹಿತಿ ಎಸ್ಐಟಿಗೆ ಸಿಕ್ಕಿತ್ತು. ಇದರ ನಡುವೆ ಮಂಗಳವಾರ ಬೆಳಗಾವಿಯಲ್ಲಿ ಆಕೆಯ ತಂದೆ-ತಾಯಿ ತಮ್ಮ ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿ, ಕಣ್ಣೀರಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಮತ್ತಷ್ಟು ಕುತೂಹಲ ಸೃಷ್ಟಿಸುತ್ತಿದೆ.
ಬೆಳಗಾವಿ ನಗರದ ಎಪಿಎಂಸಿ ಯಾರ್ಡ್ ಠಾಣೆಗೆ ಯುವತಿಯ ಪೋಷಕರು ತಮ್ಮ ಮಗಳು ಕಿಡ್ನಾಪ್ ಆದ ಬಗ್ಗೆ ದೂರು ನೀಡಿದ್ದರು. ಇದಾದ ಬಳಿಕ ನಿನ್ನೆ ಗಂಗಾನಗರದಲ್ಲಿ ಯುವತಿ ವಾಸವಿದ್ದ ಮನೆಗೆ ಭೇಟಿ ನೀಡಿದ್ದ ಎಸ್ಐಟಿ ತಂಡ ಸಂಜೆಯಿಂದ ರಾತ್ರಿ 10 ಗಂಟೆಯವರೆಗೂ ಪರಿಶೀಲನೆ ನಡೆಸಿತ್ತು. ಯುವತಿ ವಾಸವಾಗಿದ್ದ ಪಕ್ಕದ ಮನೆಯವರನ್ನೂ ವಿಚಾರಣೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ