• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi CD Case: ಅಶ್ಲೀಲ ಸಿಡಿ ಪ್ರಕರಣ; ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ರಮೇಶ್ ಜಾರಕಿಹೊಳಿ, ಸಂತ್ರಸ್ಥ ಯುವತಿಗೆ ನೋಟಿಸ್

Ramesh Jarkiholi CD Case: ಅಶ್ಲೀಲ ಸಿಡಿ ಪ್ರಕರಣ; ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ರಮೇಶ್ ಜಾರಕಿಹೊಳಿ, ಸಂತ್ರಸ್ಥ ಯುವತಿಗೆ ನೋಟಿಸ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದ್ದು, ಆ ಜಾಗದಲ್ಲಿ ಎಸ್​ಐಟಿ ತಂಡ ಮಹಜರು ಪ್ರಕ್ರಿಯೆ ಮುಗಿಸಿದೆ. ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ಥ ಯುವತಿ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಬ್ಬರಿಗೂ ನೋಟಿಸ್ ನೀಡಲಾಗಿದೆ.

ಮುಂದೆ ಓದಿ ...
  • Share this:

    ಬೆಂಗಳೂರು (ಏ. 2): ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಯುವತಿ ಅತ್ಯಾಚಾರದ ಆರೋಪ ಮಾಡಿದ್ದಾರೆ. ಹೀಗಾಗಿ, ಅದಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸುವಂತೆ ಎಸ್​ಐಟಿ ಸೂಚಿಸಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಸ್ಥಳದಲ್ಲಿ ನಿನ್ನೆ ಬರೋಬ್ಬರಿ ಎಂಟು ಗಂಟೆಗಳ ಕಾಲ ಸುದೀರ್ಘವಾಗಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದ್ದು, ಆ ಜಾಗದಲ್ಲಿ ಸಾಕ್ಷಿಗಳಿಗಾಗಿ ಹುಡುಕಿರುವ ಎಸ್​ಐಟಿ ತಂಡ ಮಹಜರು ಪ್ರಕ್ರಿಯೆ ಮುಗಿಸಿದೆ. ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ಥ ಯುವತಿ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಬ್ಬರಿಗೂ ನೋಟಿಸ್ ನೀಡಲಾಗಿದೆ.


    ಯುವತಿ ತನ್ನ ಮೇಲೆ ರಮೇಶ್ ಜಾರಕಿಹೊಳಿಯಿಂದ 2 ಬಾರಿ ಅತ್ಯಾಚಾರ ನಡೆದಿದೆ ಎನ್ನಲಾಗಿರುವ ಫ್ಲಾಟ್​ನಲ್ಲಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸ್ಥಳದ ಸಂಪೂರ್ಣ ಮಹಜರು ಪ್ರಕ್ರಿಯೆ ಮುಕ್ತಾಯಗೊಳಿಸಿ ನಿನ್ನೆ ರಿಪೋರ್ಟ್ ತಯಾರಿಸಿರುವ ತನಿಖಾಧಿಕಾರಿ ಯುವತಿಯ ಸಹಿ ಪಡೆದಿದ್ದಾರೆ. ಇಂದು ಮತ್ತೆ ವಿಚಾರಣೆಗೆ ಬರುವಂತೆ ಸಂತ್ರಸ್ಥ ಯುವತಿಗೆ ನೋಟೀಸ್ ನೀಡಲಾಗಿದೆ. ಈ ಪ್ರಕರಣದ ಸಂಬಂಧ ಇನ್ನೂ ವಿಚಾರಣೆಯ ಅವಶ್ಯಕತೆ ಇದ್ದು, ಇಂದು ಬರಬೇಕೆಂದು ಸೂಚನೆ ನೀಡಿದ್ದಾರೆ. ಹೀಗಾಗಿ, ಇಂದು ಬೆಳಗ್ಗೆ 10 ಗಂಟೆಗೆ ಯುವತಿ ವಿಚಾರಣೆಗೆ ಹಾಜರಾಗಲಿದ್ದಾರೆ.


    ಇದರ ಜೊತೆಗೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೂ ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಆದರೆ, ಕಳೆದ 4 ದಿನಗಳಿಂದ ಮುಂಬೈ ಹೋಟೆಲ್​ನಲ್ಲಿರುವ ರಮೇಶ್ ಜಾರಕಿಹೊಳಿ ಇಂದು ವಿಚಾರಣೆಗೆ ಹಾಜರಾಗೋದು ಅನುಮಾನ ಎನ್ನಲಾಗಿದೆ.


    ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ, ಸದ್ಯ ಯುವತಿ ವಿಚಾರಣೆ ಮೊದಲು ಮುಗಿಸಲು ತನಿಖಾಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಯುವತಿಯ ಹೇಳಿಕೆ ಹಾಗೂ ಕೆಲವು ಸಾಕ್ಷಿಗಳ ಸ್ಪಷ್ಟತೆ ಸಿಕ್ಕ ಬಳಿಕ ರಮೇಶ್ ಜಾರಕಿಹೊಳಿ ವಿಚಾರಣೆ ಮಾಡಲು ಅನುಕೂಲತೆ ಇರಲಿದೆ‌‌. ಹೀಗಾಗಿ ಮೊದಲು ಸಂತ್ರಸ್ಥ ಯುವತಿಯ ಪೂರ್ತಿ ಹೇಳಿಕೆ ದಾಖಲಾಗಲಿದೆ. ಈಗಾಗಲೇ ಎರಡನೇ ತಾರೀಖು ಬರುವಂತೆ ಎಸ್​ಐಟಿ ತಂಡ ನೋಟಿಸ್ ನೀಡಿದೆ. ಸದ್ಯ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಮೇಶ್ ಜಾರಕಿಹೊಳಿ ವಿಚಾರಣೆಗೆ ಬರೋದು ಅನುಮಾನ ಎನ್ನಲಾಗಿದೆ.


    ಇದನ್ನೂ ಓದಿ: Coronavirus: ಬೆಂಗಳೂರು ನಗರ ಜಿಲ್ಲೆಯಲ್ಲಿ 6-9ನೇ‌ ತರಗತಿ ಸ್ಥಗಿತ; ಶಿಕ್ಷಣ ಸಚಿವ ಸುರೇಶ್ ಕುಮಾರ್


    ನಿನ್ನೆ ತಡರಾತ್ರಿಯವರೆಗೂ ಮಹಜರು ಪ್ರಕ್ರಿಯೆ ಮಾಡಿರೋ ಎಸ್​ಐಟಿ ತಂಡ ಮಹಜರು ಪ್ರಕ್ರಿಯೆ ಮುಗಿಸಿ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕಳುಹಿಸಿದ್ದಾರೆ. ಇಂದು 10 ಗಂಟೆಗೆ ಟೆಕ್ನಿಕಲ್ ಸೆಲ್‌ಗೆ ಬರುವಂತೆ ಯುವತಿಗೆ ನೊಟೀಸ್ ನೀಡಲಾಗಿದೆ. ವಿಚಾರಣೆ ಸಲುವಾಗಿ ಬರುವಂತೆ ತನಿಖಾಧಿಕಾರಿ ಕವಿತಾ ಸೂಚಿಸಿದ್ದಾರೆ. ಮಹಜರು ವೇಳೆ ಸಿಕ್ಕ ದಾಖಲೆಗಳ ಕುರಿತಾಗಿ ಇಂದು ವಿಚಾರಣೆ ನಡೆಸಲಾಗುವುದು.


    ಒಂದು ಕಡೆ ಯುವತಿ ಮತ್ತೊಂದು ಕಡೆ ರಮೇಶ್ ಜಾರಕಿಹೊಳಿಗೆ ನೊಟೀಸ್ ನೀಡಲಾಗಿದೆ. ವಿಚಾರಣೆ ಬಳಿಕ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆಯಿದೆ. ಈಗಾಗಲೇ ನಿರಂತರವಾಗಿ ವಕೀಲರ ಸಂಪರ್ಕದಲ್ಲಿ ಇರೋ ರಮೇಶ್ ಜಾರಕಿಹೊಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ನಾಲ್ಕು ದಿನ ಕಾಲಾವಕಾಶ ಪಡೆದು ಹೋಗಿದ್ದ ಜಾರಕಿಹೊಳಿ ಏಪ್ರಿಲ್ 2ನೇ ತಾರೀಖು ವಿಚಾರಣೆಗೆ ಬರುತ್ತೇನೆಂದು ಹೇಳಿದ್ದರು. ಆದರೆ, ಅವರು ಇಂದು ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗಿದೆ.
    ಸಿಡಿ ರಿಲೀಸ್ ಆದ ಬಳಿಕ 28 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಯುವತಿ 2 ದಿನಗಳ ಹಿಂದೆ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಹಾಜರಾಗಿ ನ್ಯಾಯಾಧೀಶರ ಎದುರೇ ತನ್ನ ಹೇಳಿಕೆಯನ್ನು ದಾಖಲಿಸಿದ್ದರು. ಬಳಿಕ ಅವರನ್ನು ಎಸ್​ಐಟಿ ಕೂಡ ವಿಚಾರಣೆಗೆ ಒಳಪಡಿಸಿತ್ತು. ನಿನ್ನೆಯೂ ಆ ಯುವತಿಯ ವಿಚಾರಣೆ ನಡೆದಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇಂದು ಕೂಡ ವಿಚಾರಣೆ ಮುಂದುವರೆಯಲಿದ್ದು, ಯುವತಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿರುವ ಸ್ಥಳಕ್ಕೆ ಆಕೆಯನ್ನು ಕರೆದೊಯ್ದು ಮಹಜರು ನಡೆಸಲಾಗಿದೆ.


    ಇನ್ನೊಂದೆಡೆ, ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಆರೋಪ ಮಾಡಿರುವ ಯುವತಿ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಮುಂಬೈನ ಹೋಟೆಲ್ ಒಂದರಲ್ಲಿ ಬೀಡುಬಿಟ್ಟಿದ್ದು, ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ಪಡೆಯುವ ಸಾಧ್ಯತೆಯಿದೆ.ಮಂಗಳವಾರ ರಾತ್ರಿಯೇ ಕರ್ನಾಟಕ ಬಿಟ್ಟು ಹೋಗಿರುವ ರಮೇಶ್ ಜಾರಕಿಹೊಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಹಿಂದೆ, ನಾನು ಯಾವ ತಪ್ಪೂ ಮಾಡಿಲ್ಲ. ಹೀಗಾಗಿ, ಜಾಮೀನು ಪಡೆಯುವ ಪ್ರಶ್ನೆಯೇ ಇಲ್ಲ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೇರಿಸಲಿ. ನಾನು ತಪ್ಪೇ ಮಾಡಿಲ್ಲ ಎಂದ ಮೇಲೆ ನನ್ನನ್ನು ಬಂಧಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಹೀಗಾಗಿ, ನಾನು ಜಾಮೀನು ಪಡೆಯುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಆದರೀಗ ಯುವತಿ ಪ್ರತ್ಯಕ್ಷವಾದ ಬಳಿಕ ಬಂಧನದ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಅವರ ವಕೀಲರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

    Published by:Sushma Chakre
    First published: