ಇಂದು ಕೂಡ ಸಿಡಿ ಸಂತ್ರಸ್ತೆಯ ವಿಚಾರಣೆ; ಕ್ವಾರಂಟೈನ್ ನೆಪದಲ್ಲಿ ರಮೇಶ್ ಜಾರಕಿಹೊಳಿ ಹಾಜರಾಗೋದು ಅನುಮಾನ

Ramesh Jarkiholi Sex Tape: ರಮೇಶ್ ಜಾರಕಿಹೊಳಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಇನ್ನೆರೆಡು ದಿನ ಎಸ್ ಐ ಟಿ ಮುಂದೆ ಜಾರಕಿಹೋಳಿ ಹಾಜರಾಗೋದು ಅನುಮಾನ. ಇಂದು ಅವರ ಕೊರೋನಾ ಟೆಸ್ಟ್​ನ ರಿಸಲ್ಟ್ ಕೂಡ ಬರುವ ಸಾಧ್ಯತೆಯಿದೆ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

ರಮೇಶ್ ಜಾರಕಿಹೊಳಿ ಸಿಡಿ ಯುವತಿ.

 • Share this:
  ಬೆಂಗಳೂರು (ಏ. 3): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಸಂತ್ರಸ್ಥ ಯುವತಿಯ ವಿಚಾರಣೆ ನಡೆಯಲಿದೆ. ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೊಟೀಸ್ ನೀಡಲಾಗಿದೆ. ಐದಾರು ದಿನಗಳಿಂದ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ರಮೇಶ್ ಜಾರಕಿಹೊಳಿ ಅನಾರೋಗ್ಯದ ನೆಪವೊಡ್ಡಿ ಇಂದು ಕೂಡ ವಿಚಾರಣೆಗೆ ಹಾಜರಾಗದಿರಲು ಅನುಮತಿ ಪಡೆದಿದ್ದಾರೆ.

  ಕಳೆದೆರಡು ದಿನಗಳಿಂದ ಸಿಡಿ ಸಂತ್ರಸ್ತ ಯುವತಿಯ ವಿಚಾರಣೆ ನಡೆಯುತ್ತಿದ್ದು, ಇಂದು ಆಡುಗೋಡಿ ಟೆಕ್ನಿಕಲ್ ಸೆಲ್​ಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಯುವತಿಯ ತೀವ್ರ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಅತ್ಯಾಚಾರ ಕೇಸ್ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿರೋ ಎಸ್​ಐಟಿ ತಂಡಕ್ಕೆ ಯುವತಿಯೂ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ.

  ಎಲ್ಲ ದಾಖಲೆಗಳನ್ನು ಕಲೆಹಾಕಿಕೊಂಡು ರಮೇಶ್ ಜಾರಕಿಹೊಳಿಯ ವಿಚಾರಣೆ ನಡೆಸಲಿದ್ದಾರೆ. ನಿನ್ನೆ ಕೂಡ ವಿಚಾರಣೆಗೆ ರಮೇಶ್ ಜಾರಕಿಹೊಳಿ ಗೈರಾಗಿದ್ದರು. ಅನಾರೋಗ್ಯ ಕಾರಣ ನೀಡಿ ರಮೇಶ್ ಜಾರಕಿಹೊಳಿ ನಿನ್ನೆಯೂ ವಿಚಾರಣೆಗೆ ಗೈರಾಗಿದ್ದರು. ಇಂದು ಎಸ್​ಐಟಿ ತಂಡ ಬಹುತೇಕ ಯುವತಿಯ ವಿಚಾರಣೆ ಅಂತ್ಯಗೊಳಿಸುವ ಸಾಧ್ಯತೆಯಿದೆ. ಸಿಡಿ ಬಿಡುಗಡೆ ಮಾಡಿರೋ ವ್ಯಕ್ತಿಗಳ ಕುರಿತಾಗಿ ನಿನ್ನೆ ತೀವ್ರ ವಿಚಾರಣೆ ನಡೆಸಲಾಗಿದೆ. ಯುವತಿಗೆ ಸಿಡಿ ಗ್ಯಾಂಗ್​ನವರು ಹೇಗೆ ಪರಿಚಯ, ಸಿಡಿ ಬಿಡುಗಡೆ ಮಾಡೋಕೆ ನೀವೆ ಹೇಳಿದ್ದಿರಾ? ನಿಮ್ಮ ಗಮನಕ್ಕೆ ಬರದ ಹಾಗೆಯೇ ಸಿಡಿ ಬಿಡುಗಡೆ ಆಯ್ತಾ? ಸಿಡಿ ಗ್ಯಾಂಗ್​ನಲ್ಲಿ ಇರುವವರಿಗೆ ಯಾರಿಗಾದರೂ ಸಿಡಿಯನ್ನು ಕೊಟ್ಟಿದ್ದರಾ? ಹೀಗೆ ಹಲವಾರು ಪ್ರಶ್ನೆಗಳನ್ನು ಎಸ್​ಐಟಿಯವರು ನಿನ್ನೆ ಯುವತಿಗೆ ಕೇಳಿದ್ದರು.

  ಸಿಡಿ ಗ್ಯಾಂಗ್​ನ ಲೀಡರ್ ಅನಿಸಿಕೊಂಡಾತನಿಗೆ ಸಿಡಿ ಕೊಟ್ಟಿದ್ದಾಗಿ ಯುವತಿ ಹೇಳಿಕೆ ನೀಡಿದ್ದರು. ಮಾನಸಿಕವಾಗಿ ರಮೇಶ್ ಜಾರಕಿಹೊಳಿ ಹಿಂಸೆ ನೀಡಿದ್ದರಿಂದ ನಾನೇ ವಿಡಿಯೋ ಮಾಡಿದ್ದಾಗಿ ಯುವತಿ ಹೇಳಿದ್ದರು. ಅವರಿಗೆ ಬ್ಲಾಕ್ ಮೇಲ್ ಮಾಡಬೇಕು ಅಂತ ಯಾವುದೇ ಯೋಚನೆ ನನಗೆ ಇಲ್ಲ, ಹಿಂದೆಯೂ ಇರಲಿಲ್ಲ ಎಂದು ಯುವತಿ ಹೇಳಿದ್ದರು.

  ಇದನ್ನೂ ಓದಿ: Coronavirus: ಬೆಂಗಳೂರು ನಗರ ಜಿಲ್ಲೆಯಲ್ಲಿ 6-9ನೇ‌ ತರಗತಿ ಸ್ಥಗಿತ; ಶಿಕ್ಷಣ ಸಚಿವ ಸುರೇಶ್ ಕುಮಾರ್

  ನಾನಂತೂ ಅವರಿಗೆ ಬ್ಲಾಕ್​ಮೇಲ್ ಮಾಡಿಲ್ಲ. ಆದರೆ, ಬೇರೆ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ನನಗೆ ಗೊತ್ತಿಲ್ಲ ಎಂದು ಎಸ್​ಐಟಿ ಅಧಿಕಾರಿಗಳ ಮುಂದೆ ಸಂತ್ರಸ್ತೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಂದು ಸಹ ಸಿಡಿ ಬಿಡುಗಡೆ ಹಾಗೂ ಸಿಡಿ ಗ್ಯಾಂಗ್ ಕುರಿತಾಗಿ ತೀವ್ರ ವಿಚಾರಣೆ ನಡೆಯಲಿದೆ. ಯುವತಿಯಿಂದ ಸಿಡಿ ಪಡೆದು ಬ್ಲಾಕ್ ಮೇಲ್ ಕೆಲಸ ನಡೆದಿತ್ತಾ? ಎಂದು ಎಸ್ ಐ ಟಿ ವಿಚಾರಣೆ ವೇಳೆ ತನಿಖಾಧಿಕಾರಿಗೆ ಅನುಮಾನ ಮೂಡಿದೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಯಿಂದ ಬೇಸತ್ತು ನಾನು ವಿಡಿಯೋ ಮಾಡಿದ್ದೆ ಎಂದು ಯುವತಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಕೆಲಸ ಕೊಡಿಸದೆ ಲೈಂಗಿಕವಾಗಿ ಬಳಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಅತ್ಯಾಚಾರ ಮಾಡಿದ್ದಾರೆ ಎನ್ನುವುದಕ್ಕೆ ಸೂಕ್ತವಾದ ದಾಖಲೆ ಇಲ್ಲದಿದ್ರೆ ಕಷ್ಟ ಎಂದು ಪತ್ರಕರ್ತ ಹೇಳಿದ್ದ. ಹೀಗಾಗಿ, ಆತನ ಮಾತಿನಂತೆ ಯುವತಿ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ್ದರು. ವಿಡಿಯೋ ಚಿತ್ರೀಕರಿಸಿ ಪತ್ರಕರ್ತನಿಗೆ ನೀಡಿದ್ದಾಗಿ ಯುವತಿ ವಿಚಾರಣೆ ವೇಳೆ ಹೇಳಿದ್ದಾರೆ.

  ಆದರೆ, ಆ ವಿಡಿಯೋ ವೈರಲ್ ಮಾಡಿದ್ದು ಯಾರು ಅಂತ ನನಗೆ ಗೊತ್ತಿಲ್ಲ. ಟಿವಿಯಲ್ಲಿ ಬಂದಾಗಲೇ ನನಗೆ ವಿಡಿಯೋ ಬಿಡುಗಡೆ ಆಗಿರೋದು ಗೊತ್ತಾಗಿದೆ ಎಂದು ಯುವತಿ ಹೇಳಿದ್ದಾರಎ. ಸದ್ಯ ಯುವತಿ ಸ್ಟೇಟ್ ಮೆಂಟ್ ಬಳಿಕ ಮತ್ತೆ ಸಿಡಿ ಗ್ಯಾಂಗ್ ಗಾಗಿ ತೀವ್ರ ಹುಡುಕಾಟ ನಡೆಸಲಾಗಿದೆ. ಸಿಡಿ ಬಿಡುಗಡೆ ಬಳಿಕ ಯಾರೊಬ್ಬರ ಜೊತೆಯೂ ನನಗೆ ಕಾಂಟ್ಯಾಕ್ಟ್ ಇಲ್ಲ. ಯಾರು ಎಲ್ಲಿದಾರೆ ಅನ್ನೋದೆ ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾರೆ.

  ರಮೇಶ್ ಜಾರಕಿಹೊಳಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಇನ್ನೆರೆಡು ದಿನ ಎಸ್ ಐ ಟಿ ಮುಂದೆ ಜಾರಕಿಹೋಳಿ ಹಾಜರಾಗೋದು ಅನುಮಾನ. ಇಂದು ಅವರ ಕೊರೋನಾ ಟೆಸ್ಟ್​ನ ರಿಸಲ್ಟ್ ಕೂಡ ಬರುವ ಸಾಧ್ಯತೆಯಿದೆ. ಕೊರೋನಾ ಇರುವುದು ದೃಢವಾದರೆ ಇನ್ನೂ ಹದಿನೈದು ದಿನ ಜಾರಕಿಹೊಳಿಯನ್ನು ಅರೆಸ್ಟ್ ಮಾಡೋದು ಕಷ್ಟ. ಕ್ವಾರಂಟೈನ್ ಹೆಸರಲ್ಲಿ ರಮೇಶ್ ಜಾರಕಿಹೊಳಿ ಬಚಾವಾಗುತ್ತಾರಾ? ಈಗಾಗಲೇ ಮಹಾರಾಷ್ಟ್ರ ದಲ್ಲೇ ಕೂತು ಇಲ್ಲಿನ ಡೆವಲಪ್​ಮೆಂಟ್ಸ್​ ನೋಡುತ್ತಿದ್ದಾರಂತೆ. ಕೊರೋನಾ ಹೆಸರಲ್ಲಿ ಇನ್ನೂ ಹದಿನೈದು ದಿನ ಜಾರಕಿಹೊಳಿ ಎಸ್​ಐಟಿ ಕೈಗೆ ಸಿಗುವುದು ಅನುಮಾನ ಎನ್ನಲಾಗಿದೆ.
  Published by:Sushma Chakre
  First published: