Ramesh Jarkiholi CD Case: ಇಂದು ಮತ್ತೆ ಎಸ್ಐಟಿಯಿಂದ ಸಿಡಿ ಯುವತಿ ವಿಚಾರಣೆ; ರಮೇಶ್ ಜಾರಕಿಹೊಳಿಗೆ ಬಂಧನ ಭೀತಿ
ಇಂದು ಸಿಡಿ ಯುವತಿ ನೀಡುವ ಹೇಳಿಕೆಯ ಮೇಲೆ ರಮೇಶ್ ಜಾರಕಿಹೊಳಿಯ ಭವಿಷ್ಯ ನಿಂತಿದೆ. ಒಂದುವೇಳೆ ಆಕೆ ಜಾರಕಿಹೊಳಿ ವಿರುದ್ಧ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಬೆಂಗಳೂರು (ಮಾ. 31): 28 ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದ ರಮೇಶ್ ಜಾರಕಿಹೊಳಿ ಸಿಡಿ ಯುವತಿ ಕೊನೆಗೂ ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರಾಗಿದ್ದಾರೆ. ನಿನ್ನೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿರುವ ಸಿಡಿ ಯುವತಿಯನ್ನು ಬಳಿಕ ಎಸ್ಐಟಿ ಅಧಿಕಾರಿಗಳೂ ವಿಚಾರಣೆಗೆ ಒಳಪಡಿಸಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ಮತ್ತೆ ಆಕೆ ಎಸ್ಐಟಿ ತಂಡದ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ವೇಳೆ ಯುವತಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸುವ ಸಾಧ್ಯತೆಯಿದ್ದು, ಅದಕ್ಕಾಗಿ ಈಗಾಗಲೇ ಎಸ್ಐಟಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿಯ ನಿನ್ನೆಯ ಹೇಳಿಕೆ ಮತ್ತು ಇಂದಿನ ಎಸ್ಐಟಿ ವಿಚಾರಣೆಯಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟೆನ್ಷನ್ ಹೆಚ್ಚಾಗಿದೆ. ಇಂದು ಸಿಡಿ ಯುವತಿ ನೀಡುವ ಹೇಳಿಕೆಯ ಮೇಲೆ ರಮೇಶ್ ಜಾರಕಿಹೊಳಿಯ ಭವಿಷ್ಯ ನಿಂತಿದೆ. ಒಂದುವೇಳೆ ಆಕೆ ಜಾರಕಿಹೊಳಿ ವಿರುದ್ಧ ಸೂಕ್ತ ದಾಖಲೆಗಳನ್ನು ನೀಡಿದರೆ ರಮೇಶ್ ಜಾರಕಿಹೊಳಿಯನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ತನಿಖಾಧಿಕಾರಿ ಎಸಿಪಿ ಕವಿತಾ ನೇತೃತ್ವದಲ್ಲಿ ಯುವತಿಯ ವಿಚಾರಣೆ ನಡೆಯಲಿದೆ. ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಯುವತಿಯ ವಿಚಾರಣೆ ನಡೆಯಲಿದ್ದು, ಪ್ರಕರಣದ ಕುರಿತು ಎಸ್ಐಟಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆ ಹಾಕಲಿದ್ದಾರೆ. ಯುವತಿಯಿಂದ ಮಾಹಿತಿ ಪಡೆದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ವೈದ್ಯಕೀಯ ಪರೀಕ್ಷೆ ಆದ ಬಳಿಕ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ.
ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದರೆ ಯಾವ ಸ್ಥಳದಲ್ಲಿ ಅತ್ಯಾಚಾರ ಆಗಿದೆ ಎಂದು ಆ ಸ್ಥಳದ ಮಹಜರು ನಡೆಸಲಾಗುವುದು. ಇಂದು ಕೆಲವು ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗಲು ಯುವತಿಗೆ ಸೂಚನೆ ನೀಡಲಾಗಿದೆ. ನಿನ್ನೆ ರಮೇಶ್ ಜಾರಕಿಹೊಳಿ ಜೊತೆಗಿನ ಚಾಟಿಂಗ್ ಬಗ್ಗೆ ಯುವತಿ ಹೇಳಿದ್ದರು. ಹೀಗಾಗಿ, ಇಂದು ಚಾಟಿಂಗ್ ಸ್ಕ್ರೀನ್ ಶಾಟ್ಸ್ ಕೊಡೋದಾಗಿ ಯುವತಿ ಹೇಳಿದ್ದಾರೆ. ಜೊತೆಗೆ ಕೆಲವು ಆಡಿಯೋ ಹಾಗೂ ವಿಡಿಯೋಗಳನ್ನು ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ನಿನ್ನೆ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡಿರುವ ಯುವತಿ ಇಂದು ಅಲ್ಲಿಂದ ನೇರವಾಗಿ ಟೆಕ್ನಿಕಲ್ ಸೆಲ್ಗೆ ಬರಲಿದ್ದಾರೆ. ತಮ್ಮ ಪರ ವಕೀಲ ಜಗದೀಶ್ ಜೊತೆ ಟೆಕ್ನಿಕಲ್ ಸೆಲ್ಗೆ ಯುವತಿ ಆಗಮಿಸಲಿದ್ದು, ಇಂದು ಯಾವೆಲ್ಲ ವಿಚಾರಗಳನ್ನು ಆಕೆ ತೆರೆದಿಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆ ಸಿಡಿ ಯುವತಿ ಹೇಳಿಕೆ ಕೊಟ್ಟ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾರೀ ಟೆನ್ಷನ್ನಲ್ಲಿದ್ದಾರೆ. ಇಂದು ಆಕೆ ಎಸ್ಐಟಿ ಮುಂದೆ ಏನೆಲ್ಲ ಹೇಳಿಕೆ ಕೊಡುತ್ತಾರೆ ಎಂಬ ಟೆನ್ಷನ್ ಹೆಚ್ಚಾಗಿದೆ. ಇಂದು ಯುವತಿಯ ಹೇಳಿಕೆ ಮೇಲೆ ರಮೇಶ್ ಜಾರಕಿಹೊಳಿಗೆ ನಾಳೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡುವ ಸಾಧ್ಯತೆಯಿದೆ. ಒಂದುವೇಳೆ ತನಗೆ ನೊಟೀಸ್ ನೀಡಿದ್ರೆ ಯಾವ ರೀತಿ ತನಿಖೆ ಎದುರಿಸಬೇಕು ಎಂದು ರಮೇಶ್ ಜಾರಕಿಹೊಳಿ ವಕೀಲರ ಮೋರೆ ಹೋಗಿದ್ದಾರೆ.
ತಮ್ಮ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ರಮೇಶ್ ಜಾರಕಿಹೊಳಿಗೆ ಎಸ್ಐಟಿಯಿಂದ ನೋಟಿಸ್ ಕೊಡ್ತಾರಾ? ಬಂಧಿಸುತ್ತಾರಾ? ಎಂಬ ಟೆನ್ಷನ್ ಹೆಚ್ಚಾಗಿದೆ. ಇಂದು ಯುವತಿ ಕೊಡೋ ಹೇಳಿಕೆ, ದಾಖಲೆಗಳ ಮೇಲೆ ಜಾರಕಿಹೊಳಿ ಭವಿಷ್ಯ ನಿಂತಿದೆ. ಸೂಕ್ತ ದಾಖಲೆಗಳು ಇದ್ದರೆ ರಮೇಶ್ ಜಾರಕಿಹೊಳಿ ಬಂಧನ ಖಚಿತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ