Ramesh Jarkiholi CD Case: ನೈತಿಕ ಹೊಣೆ ಹೊತ್ತು ಡಿಕೆ ಶಿವಕುಮಾರ್ ಸಹ ರಾಜೀನಾಮೆ ನೀಡಬೇಕು; ಲಖನ್ ಜಾರಕಿಹೊಳಿ ಆಗ್ರಹ

ಸಿಡಿ ಸಂತ್ರಸ್ತೆಯ ಹಿಂದೆ ಡಿಕೆ ಶಿವಕುಮಾರ್ ಕುತಂತ್ರದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಕೂಡ ಪ್ರಸಾರವಾಗಿರುವ ಹಿನ್ನಲೆ ಇದು ಕಾಂಗ್ರೆಸ್​ ಮೇಲೆ ಪರಿಣಾಮ ಬೀರಲಿದೆ. ಹೈಕಮಾಂಡ್ ಈ ಕುರಿತು ಚಿಂತನೆ ನಡೆಸಿ ಕೂಡಲೇ ಕೆಪಿಸಿಸಿ  ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ‌ನೀಡಿಸಿದರೆ, ಚುನಾವಣೆಯಲ್ಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲವಾದರೆ ಇದು ಮೂರು ಕ್ಷೇತ್ರಗಳ ಉಪಚುನಾಣೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ.

ಲಖನ್ ಜಾರಕಿಹೊಳಿ-ರಮೇಶ್ ಜಾರಕಿಹೊಳಿ

ಲಖನ್ ಜಾರಕಿಹೊಳಿ-ರಮೇಶ್ ಜಾರಕಿಹೊಳಿ

  • Share this:
ಬೆಳಗಾವಿ(ಏ.01): ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಕೇಳಿ ಬಂದಿರುವ ಹಿನ್ನಲೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಸಹೋದರ ಕಾಂಗ್ರೆಸ್​ ಮುಖಂಡ ಲಖನ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ಗೋಕಾಕ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಲಖನ್​ ಜಾರಕಿಹೊಳಿ,  ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಮನೆಯವರೇ ನೇರವಾಗಿ ಡಿಕೆಶಿ ಪಾತ್ರದ ಬಗ್ಗೆ ಹೇಳುತ್ತಿದ್ದಾರೆ. ತಂದೆ ತಾಯಿ ಆರೋಪ ಮಾಡುತ್ತಿದ್ದಾರೆ ಅಂದ್ರೆ ಅದು ನಿಜಾನೆ ಇರಬಹುದು. ಹಾಗಾಗಿನೈತಿಕ ಹೊಣೆ ಹೊತ್ತು ಡಿ ಕೆ ಶಿವಕುಮಾರ್ ಸಹ ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮತ್ತೆ ಆಗ್ರಹಿಸಿದ್ದಾರೆ.

ರಮೇಶ್ ಜಾರಕಿಹೊಳಿ ಆರೋಪ ಕೇಳಿ ಬರುತ್ತಿದ್ದಂತೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಈಗ ಸಂತ್ರಸ್ತ ಮಹಿಳೆಯ ಪೋಷಕರು ನೇರವಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ. ಆರೋಪದ ಹಿನ್ನಲೆ ರಮೇಶ್ ಹೇಗೆ ರಾಜೀನಾಮೆ ನೀಡಿದರೋ ಡಿಕೆಶಿ ಕೂಡ ರಾಜೀನಾಮೆ ನೀಡಲಿ. ಈ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್ ಅವಲೋಕಿಸಬೇಕು. ಈಗಾಗಲೇ ರಾಜ್ಯದಲ್ಲಿ ಮೂರು ಕ್ಷೇತ್ರಗಳಾದ ಬಸವಕಲ್ಯಾಣ, ಮಸ್ಕಿ, ಹಾಗೂ ಬೆಳಗಾವಿಯಲ್ಲಿ ಉಪ ಚುನಾವಣೆ ನಡೆಯುತ್ತಿದೆ ಎಂದರು.

ಟ್ಯಾಕ್ಸಿ ಪ್ರಯಾಣ ದರ ಏರಿಸಿದ ರಾಜ್ಯ ಸರ್ಕಾರ; ನೂತನ ದರ ಎಷ್ಟು? ಇಲ್ಲಿದೆ ಮಾಹಿತಿ

ಸಿಡಿ ವಿಚಾರದಲ್ಲಿ ಡಿಕೆಶಿ ಹೆಸರೂ ಕೇಳಿ ಬಂದಿದೆ. ಸಿಡಿ ಸಂತ್ರಸ್ತೆಯ ಹಿಂದೆ ಡಿಕೆ ಶಿವಕುಮಾರ್ ಕುತಂತ್ರದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಕೂಡ ಪ್ರಸಾರವಾಗಿರುವ ಹಿನ್ನಲೆ ಇದು ಕಾಂಗ್ರೆಸ್​ ಮೇಲೆ ಪರಿಣಾಮ ಬೀರಲಿದೆ. ಹೈಕಮಾಂಡ್ ಈ ಕುರಿತು ಚಿಂತನೆ ನಡೆಸಿ ಕೂಡಲೇ ಕೆಪಿಸಿಸಿ  ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ‌ನೀಡಿಸಿದರೆ, ಚುನಾವಣೆಯಲ್ಲಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಇಲ್ಲವಾದರೆ ಇದು ಮೂರು ಕ್ಷೇತ್ರಗಳ ಉಪಚುನಾಣೆಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ.

ಎಲ್ಲಾ ಪಕ್ಷದವರು ಗಂಭೀರವಾಗಿ ತಗೊಳ್ಳಿ

ಇನ್ನು ಈ ಸಿಡಿ ಪ್ರಕರಣದಲ್ಲಿ ಸಿಡಿ ಫ್ಯಾಕ್ಟರಿ ಯಾರು? ಎಲ್ಲಿಂದ ಇದು ಮಾನಿಟರ್ ಆಗಿದೆ? ಈ ಪ್ರಕರಣದಲ್ಲಿ ಲೇಡಿ ಯಾರು? ಡೈರೆಕ್ಟರ್ ಯಾರು? ಹಾಗೂ ಪ್ರೊಡ್ಯೂಸರ್ ಯಾರು? ಅನ್ನುವ ಕುರಿತು ಎಲ್ಲರೂ ಚಿಂತನೆ ಮಾಡಬೇಕು. ಈ ಕುರಿತು ಸಾಕಷ್ಟು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇದನ್ನ ಎಲ್ಲರೂ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಜೊತೆ ಆಸನ ಹಂಚಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಎಲ್ಲರಿಗೂ ಕಾದಿದೆ ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನು ಲಖನ್ ಜಾರಕಿಹೊಳಿ ಹಾಗೂ ಶಾಸಕ ರಮೇಶ್ ಜಾರಕಿಹೊಳಿ‌ ಇಬ್ಬರು ಸಹೋದರರೇ. ಆದ್ರೆ ಇಬ್ಬರ ಪಕ್ಷಗಳು ಬೇರೆ ಬೇರೆ ಆಗಿದೆ. ಕಳೆದ ವರ್ಷ ನಡೆದ ಗೋಕಾಕ್ ಉಪಚುನಾವಣೆಯಲ್ಲಿ ಸ್ವಂತ ಸಹೋದರ ರಮೇಶ್ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು. ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ಸೈಲೆಂಟ್ ಆಗಿಯೇ ಇದ್ದ ಲಖನ್, ಕಳೆದ ಮೂರು ದಿನಗಳ ಹಿಂದೆ ರಮೇಶ್​ ಜಾರಕಿಹೊಳಿಯವರನ್ನ ಬೆಂಗಳೂರಿನಲ್ಲಿ ಭೇಟಿ ಆಗಿದ್ದರು. ಭೇಟಿ ಬಳಿಕ ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
Published by:Latha CG
First published: