HOME » NEWS » State » RAMESH JARKIHOLI SEX CD CASE BJP MLA RAJU GOWDA SUPPORTS RAMESH JARKIHOLI IN THE CASE OF SEX CD SCANDAL CASE LG

Ramesh Jarkiholi Sex CD Case: ರಮೇಶಣ್ಣ ತಪ್ಪು ಮಾಡಿಲ್ಲ, ಹಾಗೆ ಮಾಡಿದ್ದರೆ ಗಲ್ಲಿಗೇರಿಸಲಿ; ಜಾರಕಿಹೊಳಿ ಬೆನ್ನಿಗೆ ನಿಂತ ಶಾಸಕ ರಾಜೂಗೌಡ

Ramesh Jarkiholi Sex CD case: ಯಾರದ್ದೋ ಒತ್ತಾಯದ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಇದರಲ್ಲಿ ಪ್ರಭಾವಿಗಳ ಷಡ್ಯಂತ್ರ ಇದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಆಗ ಎಲ್ಲಾ ಸತ್ಯ ಹೊರಗೆ ಬರಲಿದೆ ಎಂದು ಆಗ್ರಹಿಸಿದರು.

news18-kannada
Updated:March 4, 2021, 11:54 AM IST
Ramesh Jarkiholi Sex CD Case: ರಮೇಶಣ್ಣ ತಪ್ಪು ಮಾಡಿಲ್ಲ, ಹಾಗೆ ಮಾಡಿದ್ದರೆ ಗಲ್ಲಿಗೇರಿಸಲಿ; ಜಾರಕಿಹೊಳಿ ಬೆನ್ನಿಗೆ ನಿಂತ ಶಾಸಕ ರಾಜೂಗೌಡ
ಶಾಸಕ ರಾಜುಗೌಡ
  • Share this:
ಬೆಂಗಳೂರು(ಮಾ.04): ಬಿಜೆಪಿ ಶಾಸಕ ರಾಜೂಗೌಡ ರಮೇಶ್​ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ, ಅವರ ಮಗ ಹಾಗೂ ತಾಯಿಯನ್ನು ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೂಗೌಡ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ,  ನಮ್ಮ ರಮೇಶಣ್ಣ ಯಾವುದೇ ತಪ್ಪು ಮಾಡಿಲ್ಲ.  ಹಾಗೆ ತಪ್ಪು ಮಾಡಿದ್ದರೆ ಅವರನ್ನು ಗೆಲ್ಲಿಗೇರಿಸಲಿ ಎಂದರು.

ರಮೇಶಣ್ಣ ನಮ್ಮ ಸಂಬಂಧಿಕರು. ಹಲವಾರು ವರ್ಷಗಳಿಂದ ಅವರನ್ನ ಹತ್ತಿರದಿಂದ ನೋಡಿದ್ದೇನೆ.  ಅವರು ಯಾವುದೇ ಕಾರಣಕ್ಕೂ ತಪ್ಪು ಮಾಡಿಲ್ಲ. ನೈತಿಕ ಹೊಣೆ ಹೊತ್ತು ಮೊದಲೇ ರಾಜೀನಾಮೆ ನೀಡಿದ್ದಾರೆ. ಯಾರದ್ದೋ ಒತ್ತಾಯದ ಕಾರಣಕ್ಕೆ ರಾಜೀನಾಮೆ ನೀಡಿಲ್ಲ. ಇದರಲ್ಲಿ ಪ್ರಭಾವಿಗಳ ಷಡ್ಯಂತ್ರ ಇದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಆಗ ಎಲ್ಲಾ ಸತ್ಯ ಹೊರಗೆ ಬರಲಿದೆ ಎಂದು ಆಗ್ರಹಿಸಿದರು.

Ramesh Jarkiholi CD Case: ಭದ್ರತೆ ಕೊರತೆ ಕಾರಣ ನೀಡಿ ವಿಚಾರಣೆಗೆ ಗೈರಾದ ದೂರುದಾರ ದಿನೇಶ್ ಕಲ್ಲಹಳ್ಳಿ

ಇನ್ನು, ರಾಜೀನಾಮೆ ನೀಡುವ ಸಂದರ್ಭದಲ್ಲಿ ಯಾವುದೇ ಷರತ್ತು ಹಾಕಿಲ್ಲ.  ನಮ್ಮ ಮೇಲೆ ಬೆಟ್ಟವೇ ಬಿದ್ದಾಗ ಅದೆಲ್ಲ ಯೋಚನೆ ಮಾಡಲು ಆಗುವುದಿಲ್ಲ.  ಡಿಕೆ ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿದರು. ನೈತಿಕ ಹೊಣೆ ಹೊತ್ತು ರಮೇಶಣ್ಣ ರಾಜೀನಾಮೆ ನೀಡಿದರು. ಮರ್ಯಾದೆ, ಘನತೆ ಅತ್ಯಂತ ಮುಖ್ಯ. ರಾಜೀನಾಮೆ ವೇಳೆ ಯಾವುದೇ ಷರತ್ತು ಹಾಕಿಲ್ಲ.  ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ಆಗಿಲ್ಲ ಎಂದು ಹೇಳಿದರು.

ರಷ್ಯಾದಲ್ಲಿ ಆ ವಿಡಿಯೋ ಅಪ್‌ಲೋಡ್ ಮಾಡುತ್ತಾರೆ ಅಂದ್ರೆ ಯೋಚಿಸಿ. ಇವರ ಬೆಳವಣಿಗೆ ಸಹಿಸದೆ ಹೀಗೆ ಷಡ್ಯಂತ್ರ ನಡೆಸಿದ್ದಾರೆ. ನನಗೆ ಇದೂವರೆಗೂ ಅವರ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ.  ಅವರ ಪುತ್ರನಿಗೆ ಧೈರ್ಯ ತುಂಬಿದ್ದೇನೆ. ಇವತ್ತು ಅವರ ಕುಟುಂಬದ ಸದಸ್ಯರು ಹೊರಗೆ ಬಾರದಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಿನೇಶ್ ಕಲ್ಲಳ್ಳಿ ಸಿಡಿ ಬಿಡುಗಡೆಗೂ ಮೊದಲೇ ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.  ನಮ್ಮ ಪಕ್ಷ ಬೇರೆ ಪಕ್ಷದವರು ಅಂತಾ ಹೇಳೋದಿಲ್ಲ ಯಾರೋ ಇವರನ್ನು ಚೆನ್ನಾಗಿ ಬಲ್ಲರೋ ಅವರೇ ಷಡ್ಯಂತ್ರ ನಡೆಸಿದ್ದಾರೆ. ನಾವೆಲ್ಲರೂ ಅವರ ಜೊತೆ ಇದ್ದೇವೆ. ಆರೋಪ ಮುಕ್ತರಾಗಿ ಹೊರಗೆ ಬಂದೇ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
Published by: Latha CG
First published: March 4, 2021, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories