Karnataka By-Elections 2019: ಹರಾಮಿ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ; ರಮೇಶ್ ಜಾರಕಿಹೊಳಿ ವಾಗ್ದಾಳಿ

Karnataka By Elections Latest news: ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಪ್ರಶ್ನೆಗೆ ಖಾರವಾಗಿ ಉತ್ತರಿಸಿರುವ ರಮೇಶ್ ಜಾರಕಿಹೊಳಿ, ಬಸ್​ಸ್ಟ್ಯಾಂಡ್​ ಹೂ, ಎಸ್​ಟಿಡಿ ಬೂತ್ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

news18-kannada
Updated:December 5, 2019, 9:27 AM IST
Karnataka By-Elections 2019: ಹರಾಮಿ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ; ರಮೇಶ್ ಜಾರಕಿಹೊಳಿ ವಾಗ್ದಾಳಿ
ಶಾಸಕ ರಮೇಶ್ ಜಾರಕಿಹೊಳಿ
  • Share this:
ಬೆಳಗಾವಿ (ಡಿಸೆಂಬರ್ 05); ಹರಾಮಿ ದುಡ್ಡನ್ನು ಖಾಲಿ ಮಾಡುವ ಸಲುವಾಗಿ ಲಖನ್ ಜಾರಕಿಹೊಳಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ. ಗೋಕಾಕ್​ನಲ್ಲಿ ಸಹೋದರರ ನಡುವೆ ಈತ ಜಗಳ ಹಚ್ಚುತ್ತಾನೆ ಎಂಬುದು ನನಗೆ ಗೊತ್ತಿರಲಿಲ್ಲ. ಅವನ ನೆರಳು ಸಹ ನನ್ನ ಜೊತೆಗೆ ಬೇಡ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಲಖನ್ ವಿರುದ್ಧ ಕಿಡಿಕಾರಿದ್ದಾರೆ.

ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ರಮೇಶ್ ಜಾರಕಿಹೊಳಿ ಇಂದು ಮತದಾನ ನಡೆಸಿದ ನಂತರ ಪತ್ರಕರ್ತರ ಜೊತೆ ಮಾತನಾಡುತ್ತಾ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ವಿರುದ್ಧ ಏಕ ವಚನದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಸಹೋದರ ಸತೀಶ್ ಜಾರಕಿಹೊಳಿ ಬಗ್ಗೆಯೂ ಅಸಮಾಧಾನ ಹೊರಹಾಕಿರುವ ಅವರು, “ಸತೀಶ್ ಜಾರಕಿಹೊಳಿ ತುಳಿದಷ್ಟು ನಾನು ಬೆಳೆದಿದ್ದೇನೆ. ಸಿದ್ದರಾಮಯ್ಯ ಸೇರಿದಂತೆ ನಾನು ಯಾರ ವಿರುದ್ಧವೂ ಈವರೆಗೆ ವ್ಯಯಕ್ತಿಕ ದಾಳಿ ನಡೆಸಿಲ್ಲ. ಎದುರಾಳಿಯ ಬಗ್ಗೆ ಹಗುರವಾಗಿ ಮಾತನಾಡಲ್ಲ. ಆದರೆ, ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲ್ಲುವುದೂ ಸಹ ಕಷ್ಟ” ಎಂದು ಭವಿಷ್ಯ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಪ್ರಶ್ನೆಗೆ ಖಾರವಾಗಿ ಉತ್ತರಿಸಿರುವ ರಮೇಶ್ ಜಾರಕಿಹೊಳಿ, “ಬಸ್​ಸ್ಟ್ಯಾಂಡ್​ ಹೂ, ಎಸ್​ಟಿಡಿ ಬೂತ್ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : Karnataka By-Elections 2019: 140 ದಿನಗಳ ರಾಜಕೀಯ ಅಜ್ಞಾತವಾಸ ಇಂದು ಅಂತ್ಯವಾಗುವ ಭರವಸೆ ಇದೆ; ಡಾ| ಕೆ. ಸುಧಾಕರ್ ವಿಶ್ವಾಸ
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading