ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Former DCM Laxman Savadi) ಕಾಂಗ್ರೆಸ್ (Congress) ಸೇರಿದ್ದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಖುಷ್ ಆಗಿದ್ದಾರೆ. ಮತ್ತೊಮ್ಮೆ ಆಪ್ತ ಮಹೇಶ್ ಕುಮಟಳ್ಳಿ (BJP Candidate Mahesh Kumatalli) ಗೆಲ್ಲಿಸಲು ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ. ಅಥಣಿ (Athani Constituency) ಕ್ಷೇತ್ರದ ಬಿಜೆಪಿಯ (BJP) ಪದಾಧಿಕಾರಿಗಳು ಹಾಗು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ಪೀಡೆ. ಪೀಡೆ ತೊಲಗಿ ಹೋಗಿದೆ. ಪೀಡೆ ತೊಲಗಿದ್ದರಿಂದ ನನಗೆ ಸಂತೋಷವಾಗಿದೆ ಎಂದು ಟಾಂಗ್ ನೀಡಿದರು.
ಬಿದ್ದವರಿಗೆ ಪಕ್ಷ ಡಿಸಿಎಂ ಮಾಡಿತ್ತು. ಉದ್ದ ಅಂಗಿ ಹಾಕಿರುವನು ಹೊರಗೆ ಹೋಗಿದ್ದಾನೆ. ನನಗೆ ಇವತ್ತು ತುಂಬಾ ಸಂತೋಷವಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅಥಣಿ, ಬೆಳಗಾವಿ ಗ್ರಾಮೀಣ ಕ್ಷೇತ್ರ ನಮ್ಮದೇ
ನಾನು ಅಥಣಿಯಲ್ಲೆ ಇರುತ್ತೇನೆ. ಅಥಣಿ ಹಾಗೂ ಬೆಳಗಾವಿ ಗ್ರಾಮೀಣ (Belagavi Rural) ಎರಡು ಕ್ಷೇತ್ರ ನಮ್ಮದೇ, ನಾವೆ ಗೆಲ್ಲಬೇಕು. ಲಕ್ಷ್ಮಣ್ ಸವದಿ ಸೋಲಬೇಕು. ಬಿಜೆಪಿ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ ಎಂದು ಸವದಿ ವಿರುದ್ದ ಹರಿಹಾಯ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಪ್ತ ನಾಗೇಶ್ ಮನ್ನೊಳ್ಳಕರ್ (Nagesh Mannollakar) ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Congress MLA Laxmi hebbalkar) ಸೋಲಿಸಲು ಮರಾಠ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದರು.
ಶಿಗ್ಗಾಂವಿಯಲ್ಲಿ ಇಂದು ಸಿಎಂ ನಾಮಪತ್ರ
ಸಿಎಂ ಬಸವರಾಜ್ ಬೊಮ್ಮಾಯಿ ಶಿಗ್ಗಾಂವಿ-ಸವಣೂರು ಕ್ಷೇತ್ರದಿಂದ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: BJP Candidate List: ಕೈ ತಪ್ಪಿದ ಅಥಣಿ ಟಿಕೆಟ್; ಬೆಂಬಲಿಗರ ಸಭೆಯಲ್ಲಿ ಸವದಿ ಕಣ್ಣೀರು?
ಸತತ ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಬೊಮ್ಮಾಯಿ, ಇದೀಗ 4ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ