ಬೆಂಗಳೂರು (ಮಾ. 13): ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಕುರಿತು ಇಂದು ರಮೇಶ್ ಜಾರಕಿಹೊಳಿ ದೂರು ದಾಖಲಿಸುತ್ತಿದ್ದಂತೆ ಸಂತ್ರಸ್ತ ಯುವತಿ ಜೀವ ರಕ್ಷಣೆ ಕೋರಿ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಈ ವಿಡಿಯೋದಲ್ಲಿ ತಮಗೆ ಯಾವುದೇ ರಾಜಕೀಯ ಬೆಂಬಲವಿಲ್ಲ. ಇದರಿಂದ ತಮ್ಮ ಮಾನ ಮಾರ್ಯಾದೆ ಹರಾಜ್ ಆಗುತ್ತಿದೆ. ಗೃಹ ಸಚಿವರು ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದರು. ದೂರು ದಾಖಲಿಸಿದ ಬಳಿಕ ಬಿಡುಗಡೆಯಾಗಿರುವ ಈ ವಿಡಿಯೋ ಕುರಿತು ಮಾತನಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಫ್ಐಆರ್ ದಾಖಲಿಸಿ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆಯಾಗಿದೆ. ಕಳೆದ 12 ದಿನಗಳಿಂದ ಪತ್ತೆಯಾಗದ ಯುವತಿ ಈಗ ಹೊರ ಬಂದಿದ್ದಾರೆ. ಇದರ ಹಿಂದೆ ಎಷ್ಟು ದೊಡ್ಡ ಷಡ್ಯಂತ್ರ ಇದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.
ಎಫ್ಐಆರ್ ದಾಖಲಾಗುತ್ತಿದ್ದಂತೆ ಈ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಯಿ ಭೇಟಿ ಮಾಡಿದ್ದೇನೆ. ಪ್ರಕರಣವನ್ನು ಅವರು ಗಂಭೀರವಾಗಿ ತನಿಖೆ ಮಾಡುವಂತೆ ಎಸ್ಐಟಿ ಸೂಚಿಸಿದ್ದಾರೆ. ಶೀಘ್ರವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಇದೇ ಹಿನ್ನಲೆ ಯುವತಿ ಈಗ ವಿಡಿಯೋ ಮೂಲಕ ಹೊರ ಬಂದಿದ್ದಾಳೆ. ಇದು ಷಡ್ಯಂತ್ರದ ಒಂದು ಭಾಗ ಎಂದಿದ್ದಾರೆ.
ಪ್ರಕರಣ ಕುರಿತು ಯುವತಿ ಕೂಡ ದೂರು ನೀಡಲು ನಿರ್ಧರಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ದೂರು ಕೊಡ್ತಾರೆ ಅಂದ್ರೆ ಕೊಡಲಿ. ನಾನು ಎದುರಿಸುತ್ತೇನೆ. ತನಿಖೆಯಲ್ಲಿ ನಿಮಗೆ ಗೊತ್ತಾಗಲಿದೆ. ನಾನು ನಿರಪರಾಧಿ ಇದರಲ್ಲಿ ನನ್ನ ತಪ್ಪೇನು ಇಲ್ಲ. ಅದು ನಕಲಿ ಸಿಡಿ. ಅದಷ್ಟು ಬೇಗ ತನಿಖೆ ನಡೆಸಿ ಅಂತ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.
ಇದನ್ನು ಓದಿ: ಸಿಡಿ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಹಾಕಿಸಲು ಸಂಚು ನಡೆದಿದೆ; ಡಿಕೆ ಶಿವಕುಮಾರ್
ಸಂತ್ರಸ್ತ ಯುವತಿ ವಿಡಿಯೋ ಕುರಿತು ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಂತ್ರಸ್ತ ಯುವತಿ ವಿಡಿಯೋವನ್ನು ಗಮನಿಸಿಲ್ಲ. ಮಾಧ್ಯಮಗಳಲ್ಲಿ ಆ ಬಗ್ಗೆ ಸುದ್ದಿ ನೋಡಿದ್ದೇನೆ. ಸಂತ್ರಸ್ತೆಗೆ ಜೀವಭಯವಿದೆ ಎಂಬ ಹೇಳಿಕೆ ಹಿನ್ನಲೆ ಸೂಕ್ತ ಭದ್ರತೆ ನೀಡಲು ಎಸ್ಐಟಿಗೆ ಹೇಳಿದ್ದೇನೆ. ಈ ಕುರಿತು ಎಸ್ಐಟಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ. ಸಿಡಿ ಸತ್ಯಾಸತ್ಯತೆ ಬಗ್ಗೆ ಈ ಅಭಿಪ್ರಾಯ ಮುಖ್ಯವಲ್ಲ. ಎಸ್ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದರು.
ಪ್ರಕರಣ ಕುರಿತು ಇಂದು ಸಂಜೆ ರಮೇಶ್ ಜಾರಕಿಹೊಳಿ ಪರವಾಗಿ ನೆಲಮಂಗಲದ ಮಾಜಿ ಶಾಸಕ ನಾಗರಾಜ್ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಸಿಡಿ ಬಿಡುಗಡೆ ಮೂಲಕ ರಾಜಕೀಯವಾಗಿ ಮುಗಿಸಲು, ಹಣ ವಸೂಲಿ ಮಾಡಲು, ರಾಜಕೀಯ ತೇಜೊವಧೆ ಮಾಡಲು ಷಡ್ಯಂತ್ರ ರೂಪಿಸಲಾಗಿದೆ. ಸುಮಾರು 3 ತಿಂಗಳಿಂದ ಸದಾಶಿವನಗರದಲ್ಲಿ ನನ್ನ ವಿರುದ್ಧ ಮಸಲತ್ತು ಮತ್ತು ಮೋಸ ಮಾಡಿ ನಕಲಿ ಸಿಡಿ ಸೃಷ್ಟಿಸಲಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ